ಶಿಕ್ಷಣ ಗುಣಮಟ್ಟಕ್ಕಾಗಿ ಹೊಸ ಮೌಲ್ಯಮಾಪನ ವಿಧಾನ

Posted By:

ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ಪ್ರಾಧ್ಯಾಪಕರ ನೇಮಕ ಹಾಗೂ ಬಡ್ತಿಗಾಗಿ ಹೊಸ ಮೌಲ್ಯಮಾಪನ ವಿಧಾನ ಜಾರಿಗೆ ತರಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಯೋಜಿಸಿದೆ.

ಯುಕೆ ಮತ್ತು ಐರ್ಲೆಂಡ್ ನಲ್ಲಿ ಆಕ್ಯುಪೇಷನಲ್ ಇಂಗ್ಲೀಷ್ ಟೆಸ್ಟ್ (ಒಇಟಿ) ನೋಂದಾವಣಿಗೆ ಅನುಮೋದನೆ

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಚಿವಾಲಯವು ಮುಂದಾಗಿದ್ದು, ಅದಕ್ಕಾಗಿ ಹೊಸ ವಿಧಾನವನ್ನು ಅಳವಡಿಸುವ ಪ್ರಯತ್ನದಲ್ಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರೂ.2 ಲಕ್ಷ ವಿದ್ಯಾರ್ಥಿವೇತನ

ಹೊಸ ಮೌಲ್ಯಮಾಪನ ವಿಧಾನ

ಸದ್ಯ ವಿಶ್ವವಿದ್ಯಾಲಯಗಳಲ್ಲಿ ಇರುವ ಶೈಕ್ಷಣಿಕ ಸಾಧನೆ‌ ಸೂಚಕ (ಎಪಿಐ) ಆಧಾರದಲ್ಲಿ ಬೋಧಕರಿಗೆ ವೇತನ ಹೆಚ್ಚಳ ಮತ್ತು ಬಡ್ತಿಯನ್ನು ನೀಡಲಾಗುತ್ತಿದೆ. ಎಪಿಐ ಗೆ ಸಾಕಷ್ಟು ಪರ ವಿರೋಧವಿದ್ದು, ಅದನ್ನು ಪರಿಶೀಲಿಸಿ ಹೊಸ ವ್ಯವಸ್ಥೆ ಜಾರಿಗೆ ತರುವುದು ಮುಖ್ಯ ಉದ್ದೇಶವಾಗಿದೆ.

ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು 2010ರಲ್ಲಿ ಎಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆ ಮೂಲಕ ಬೋಧಕರ ಶೈಕ್ಷಣಿಕ ಸಾಧನೆಯನ್ನು ಅಳೆಯಲಾಗುತ್ತಿತ್ತು. ಪ್ರಸ್ತುತ ಶಿಕ್ಷಕರ ಶೈಕ್ಷಣಿಕ ಸಾಧನಾ ಸೂಚಕದಲ್ಲಿ ಪಠ್ಯೇತರ ಚಟುವಟಿಗಳು ಮತ್ತು ಸಂಶೋಧನಾ ಪ್ರಕ್ರಿಯೆಗಳು ಮಾನದಂಡವಾಗಿದ್ದು, ಎರಡು ವಿಭಾಗದಲ್ಲಿ ಎಪಿಐ ಅಂಕಗಳನ್ನು ನೀಡಲಾಗುತ್ತಿತ್ತು. ಅದರಂತೆ ಶೇ.30ರಷ್ಟು ಅಂಕ ಪಠ್ಯೇತರ ಚಟುವಟಿಕೆಗಳದ್ದಾದರೆ, ಮತ್ತೆ ಶೇ.30ರಷ್ಟು ಅಂಕ ಸಂಶೋಧನಾ ಪ್ರಕ್ರಿಯೆ ಮೇಲೆ ಆಧಾರವಾಗಿರುತ್ತಿತ್ತು.

2010ರಲ್ಲಿ ಜಾರಿಯಾದ ಈ ನಿಯಮವನ್ನು ಸಾಕಷ್ಟು ಶಿಕ್ಷಕರ ಸಂಘಗಳು ವಿರೋಧಿಸಿದ್ದವು. ಅಲ್ಲದೆ ಸರ್ಕಾರದ ಈ ಕ್ರಮ ನ್ಯಾಯಸಮ್ಮತವಾಗಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದವು. ಎಪಿಐ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಾಡುಗಳು ಆಗಬೇಕೆಂದು ಪರ-ವಿರೋಧದ ಚರ್ಚೆಗಳು ಆಗುತ್ತಲೇ ಇದ್ದವು.

ಈಗ ಇರುವ ಎಪಿಐ ವ್ಯವಸ್ಥೆಯನ್ನು ರದ್ದುಪಡಿಸುವ ಪ್ರಸ್ತಾವನೆಯೂ ಸಚಿವಾಲಯದ ಮುಂದಿದ್ದು, ಕೇಂದ್ರ ಶಿಕ್ಷಣ ಸಲಹಾ ಸಮಿತಿಯ (ಸಿಎಬಿಇ) ಸಭೆಯಲ್ಲಿ ಈ ಪ್ರಸ್ತಾವಗಳ ಬಗ್ಗೆ ಚರ್ಚೆ ನಡೆಯಲಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಎಪಿಐ ಜಾಗದಲ್ಲಿ ಹೊಸ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
The Ministry of Human Resource Development plans to implement new evaluation procedures for appointment and promotion of university and graduate colleges in order to enhance the quality of higher education.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia