Online Course In Spanish And French Languages : ಫಾರಿನ್ ಲಾಂಗ್ವೇನ್ ನಲ್ಲಿ ಆನ್‌ಲೈನ್ ಕಾರ್ಯಕ್ರಮ ಪರಿಚಯಿಸಿದ ಇಗ್ನೋ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು 2022ನೇ ಶೈಕ್ಷಣಿಕ ಸಾಲಿಗೆ ಸ್ಕೂಲ್ ಆಫ್ ಫಾರಿನ್ ಲ್ಯಾಂಗ್ವೇಜಸ್ ಕೋರ್ಸ್ ಅನ್ನು ಪರಿಚಯಿಸುತ್ತಿದೆ. ಪ್ರಸ್ತುತ ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮಗಳನ್ನು ಆರಂಭಿಸಲು ಇಗ್ನೋ ಮುಂದಾಗಿದೆ.

 
ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮ ಪರಿಚಯಿಸಿದ ಇಗ್ನೋ

ಸ್ಪ್ಯಾನಿಷ್ ಭಾಷೆ ಮತ್ತು ಸಂಸ್ಕೃತಿ (CSLCOL) ಮತ್ತು ಫ್ರೆಂಚ್ ಭಾಷೆ (CFLOL) ನಲ್ಲಿನ ಪ್ರಮಾಣಪತ್ರ ಕೋರ್ಸ್‌ಗಳು ಆರಂಭಿಕವಾಗಿ ಭಾಷೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿವೆ. ಇದು ಆಸಕ್ತರಿಗೆ ಓದುವ, ಬರೆಯುವ, ಕೇಳುವ ಮತ್ತು ಮಾತನಾಡುವ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡಲಿದೆ.

ಇಗ್ನೋ ಪ್ರಕಟಣೆಯ ಪ್ರಕಾರ, "ಈ ಕಾರ್ಯಕ್ರಮದ ಸಾಮಾನ್ಯ ಉದ್ದೇಶವೆಂದರೆ ಭಾಷಾ ಕೌಶಲ್ಯಗಳನ್ನು (ಉಚ್ಚಾರಣೆ, ವ್ಯಾಕರಣ, ಶಬ್ದಕೋಶ ಮತ್ತು ಮೂಲ ಸಂವಹನ ಸಾಮರ್ಥ್ಯ, ಮೌಖಿಕ ಮತ್ತು ಲಿಖಿತ ಸಂವಹನಗಳಲ್ಲಿ) ಮತ್ತು ಭಾಷೆಯಲ್ಲಿನ ಸಾಮಾಜಿಕ-ಸಾಂಸ್ಕೃತಿಕ ಸಾಮರ್ಥ್ಯವನ್ನು ಕಲಿಯಲು ಅನುವು ಮಾಡಿಕೊಡುವುದು. ದೈನಂದಿನ ಜೀವನಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸ್ಪ್ಯಾನಿಷ್ ಮಾತನಾಡುವ ಪ್ರಪಂಚದೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅವರಿಗೆ ಈ ಕೋರ್ಸ್ ಸಹಾಯ ಮಾಡುತ್ತದೆ."

ಅಲ್ಲದೇ ಫ್ರೆಂಚ್ ಭಾಷಾ ಕೋರ್ಸ್ ಅನ್ನು ಪಠ್ಯಪುಸ್ತಕ Connexions, Methode de francais ಸುತ್ತಲೂ ಅಭಿವೃದ್ಧಿಪಡಿಸಲಾಗಿದೆ ಮತ್ತು CEFR (ಕಾಮನ್ ಯುರೋಪಿಯನ್ ಫ್ರೇಮ್‌ವರ್ಕ್ ಆಫ್ ರೆಫರೆನ್ಸ್ ಫಾರ್ ಲ್ಯಾಂಗ್ವೇಜ್) ಅನ್ನು ಆಧರಿಸಿ ವಿಶ್ವದಾದ್ಯಂತ ಯುರೋಪಿಯನ್ ಭಾಷೆಗಳ ಶಿಕ್ಷಣಶಾಸ್ತ್ರದ ಅಂತರರಾಷ್ಟ್ರೀಯ ಪ್ರಮಾಣೀಕರಣಕ್ಕಾಗಿ ಬಳಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Online certification programmes in spanish and french languages has been introduced by IGNOU.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X