ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

2017ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರದಂದು ಪ್ರಕಟವಾಗಿದೆ. ಗುರುವಾರದಿಂದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ. ಮೇ 12ರಂದು ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಈ ಬಾರಿ ಒಟ್ಟು ಶೇ 52.83 ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿ 57.20% ಫಲಿತಾಂಶ ಬಂದಿತ್ತು.

ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ  03.30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಫಲಿತಾಂಶವನ್ನು ಪ್ರಕಟಿಸಿದರು.

ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಪಿಯುಸಿ ಫಲಿತಾಂಶ: ಬಾಲಕಿಯರೇ ಮೇಲುಗೈ

 

ಬಾಲಕಿಯರೇ ಮೇಲುಗೈ

ಈ ಬಾರಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.  ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರು 60.28% ಪಡೆದು ಮೇಲುಗೈ ಸಾಧಿಸಿದ್ದಾರೆ. 44.74% ಬಾಲಕರು ಉತ್ತೀರ್ಣ.

ಈ ವರ್ಷ ಒಟ್ಟು 3,33,892 ಬಾಲಕಿಯರು ಪರೀಕ್ಷೆ ಬರೆದಿದ್ದು 2,01,273 ಬಾಲಕಿಯರು ತೇರ್ಗಡೆ ಹೊಂದಿದ್ದಾರೆ.  3,45,169 ಬಾಲಕರು ಹಾಜರಾಗಿದ್ದು 1,54,424 ಬಾಲಕರು ಪಾಸ್ ಆಗಿದ್ದಾರೆ.

ಜಿಲ್ಲಾವಾರು ಫಲಿತಾಂಶ

ಕಳೆದ ಬಾರಿ ಎರಡನೇ ಸ್ಥಾನ ಪಡೆದಿದ್ದ ಉಡುಪಿ ಈ ಬಾರಿ ಮೊದಲ ಸ್ಥಾನಗಳಿಸಿದೆ, ಇನ್ನು ಕಳೆದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ಬಾರಿ ಎರಡನೇ ಸ್ಥಾನ ಪಡೆದಿದೆ. ಮೂರನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದ್ದರೇ ಬೀದರ್ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ.

ಜಿಲ್ಲೆ ಫಲಿತಾಂಶ
ಉಡುಪಿ90.01
ದಕ್ಷಿಣ ಕನ್ನಡ89.92
ಉತ್ತರ ಕನ್ನಡ71.99
ಕೊಡಗು70.83
ಚಿಕ್ಕಮಗಳೂರು68.03
ಶಿವಮೊಗ್ಗ68.00
ಬೆಂಗಳೂರು ಉತ್ತರ67.17
ಬೆಂಗಳೂರು ದಕ್ಷಿಣ66.63
ಚಾಮರಾಜನಗರ65.34
ಬಾಗಲಕೋಟೆ63.11
ಹಾಸನ59.88
ಬೆಂಗಳೂರು ಗ್ರಾಮಾಂತರ59.64
ಚಿಕ್ಕಬಳ್ಳಾಪುರ59.63
ಮೈಸೂರು59.03
ಕೋಲಾರ57.87
ಕೊಪ್ಪಳ56.84
ಮಂಡ್ಯ56.43
ಧಾರವಾಡ55.73
ದಾವಣಗೆರೆ55.17
ಬಳ್ಳಾರಿ55.13
ಹಾವೇರಿ54.95
ತುಮಕೂರು54.72
ಗದಗ್53.11
ರಾಮನಗರ51.55
ಚಿತ್ರದುರ್ಗ47.31
ರಾಯಚೂರು46.98
ಕಲಬುರ್ಗಿ44.94
ಬೆಳಗಾವಿ44.25
ವಿಜಯಪುರ43.00
ಯಾದಗಿರಿ42.007
ಬೀದರ್42.05

ವಿಷಯವಾರು ಫಲಿತಾಂಶ

ವಿಜ್ಞಾನ ವಿಭಾಗದ ಶೇ.60.71 ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ಶೇ.60.09ರಷ್ಟು ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ ಶೇ.35.05 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಮಾರ್ಚ್ 9 ರಿಂದ 27 ರವರೆಗೆ 998 ಪರೀಕ್ಷಾ ಕೇಂದ್ರಗಳ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಒಟ್ಟು 6.84 ಲಕ್ಷ ವಿದ್ಯಾರ್ಥಿ/ನಿಯರು ಪರೀಕ್ಷೆ ಬರೆದಿದ್ದರು.

For Quick Alerts
ALLOW NOTIFICATIONS  
For Daily Alerts

  English summary
  The much awaited Karnataka II PUC exam result is finally out. Candidates can check their respective results on the official website.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more