ಐಐಎಫ್ ಟಿ 2019 ಪರೀಕ್ಷೆಯ ಅಡ್ಮಿಟ್ ಕಾರ್ಡ್ ರಿಲೀಸ್

By Nishmitha Bekal

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆನ್ ಟ್ರೇಡ್ ಇದೀಗ ಐಐಎಫ್ ಟಿ 2019 ಪರೀಕ್ಷೆಯ ಅಡ್ಮಿಟ್ ಕಾರ್ಡ್ ರಿಲೀಸ್ ಮಾಡಲಿದ್ದು, ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಐಐಎಫ್ ಟಿ 2019 ಪರೀಕ್ಷೆಯ ಅಡ್ಮಿಟ್ ಕಾರ್ಡ್ ರಿಲೀಸ್

 

ಈ ಐಐಎಫ್ ಟಿ ಪರೀಕ್ಷೆಯು ಡಿಸಂಬರ್ 2, 2018 ಭಾನುವಾರದಂದು ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಈ ಪರೀಕ್ಷೆ ನಡೆಯಲಿದೆ. ದೇಶದಾದ್ಯಂತ ಅಹಮದಾಬಾದ್, ಅಲಾಹಾಬಾದ್, ಬೆಂಗಳೂರು, ಭುಬನೇಶ್ವರ್, ಛಂಡಿಘರ್, ಚೆನ್ನೈ, ಕೊಯಂಬುತ್ತುರ್, ಡೆಹ್ರಡೂನ್, ದೆಹಲಿ, ಗುವಾಹಟಿ, ಹೈದ್ರಾಬಾದ್, ಇಂದೋರ್, ಜೈಪುರ್, ಜೇಮ್ ಶೆಡ್ ಪುರ್, ಕೊಚ್ಚಿ, ಕೊಲ್ಕತ್ತಾ, ಲಖ್ನೋ, ಮುಂಬಯಿ, ನಾಗ್ಪುರ್ ಮತ್ತು ವಿಶಾಖಪಟ್ಟಣಂ ಮುಂತಾದವುಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ.

ಅಭ್ಯರ್ಥಿಗಳು ಕೊನೆಯ ಗಳಿಗೆಗೆ ಕಾಯದೇ ಆದಷ್ಟು ಬೇಗ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು. ಇನ್ನೂ ಈ ಪ್ರವೇಶ ಪತ್ರದಿಂದ ಲಿಖಿತ ಪರೀಕ್ಷೆ, ಗ್ರೂಪ್ ಚರ್ಚೆ, ಬರವಣಿಗೆ ಸ್ಕಿಲ್ ಹಾಗೂ ಸಂದರ್ಶನದಲ್ಲಿ ಪಾಲ್ಗೊಳ್ಳತಕ್ಕದ್ದು.

ಲಿಖಿತ ಪರೀಕ್ಷೆ ಬಳಿಕ ಬರವಣಿಗೆ ಸ್ಕಿಲ್, ಗುಂಪು ಚರ್ಚೆ ಹಾಗೂ ಸಂದರ್ಶನಕ್ಕೆ ಸೆಲೆಕ್ಟ್ ಆಗುವ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುವುದು. ಜನವರಿ ಮತ್ತು ಫೆಬ್ರವರಿ 2019 ರಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದ್ರಾಬಾದ್, ಕೊಲ್ಕತ್ತಾ, ಲಖ್ನೋ ಮತ್ತು ಮುಂಬಯಿಗಳಲ್ಲಿ ಬರವಣಿಗೆ ಸ್ಕಿಲ್, ಗುಂಪು ಚರ್ಚೆ ಹಾಗೂ ಸಂದರ್ಶನ ನಡೆಯಲಿದೆ.

ಪ್ರವೇಶ ಪತ್ರ ಡೌನ್ ಮಾಡಲು ಫಾಲೋ ಮಾಡಬೇಕಾದ ಸ್ಟೆಪ್ಸ್:

  • ಸ್ಟೆಪ್ 1: ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಅಡ್ಮಿಶನ್ 2019 ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಸ್ಕ್ರೀನ್ ಮೇಲೆ ಹೊಸ ಪೇಜ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 4: ಅಡ್ಮಿಟ್ ಕಾರ್ಡ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಪಾಸ್‌ವರ್ಡ್ ನಮೂದಿಸಿ
  • ಸ್ಟೆಪ್ 6: ಅಡ್ಮಿಟ್ ಕಾರ್ಡ್ ಮೂಡುತ್ತದೆ ಚೆಕ್ ಮಾಡಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಿ
  • ಸ್ಟೆಪ್ 7: ಮುಂದಿನ ರೆಫರೆನ್ಸ್ ಗೆ ಅಡ್ಮಿಟ್ ಕಾರ್ಡ್ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
Indian Institute Of Foreign Trade is going to release admit card for the IIFT 2019 examination. Candidates can download their admit cards from the official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X