ಐಐಐಟಿಗಳಿಗೂ ಎಂ.ಟೆಕ್, ಪಿಎಚ್.ಡಿ ಪದವಿ ನೀಡುವ ಅವಕಾಶ

Posted By:

ಖಾಸಗಿ ಮತ್ತು ಅಟಾನಮಸ್ ವಿವಿಗಳಂತೆ ಐಐಐಟಿಗೂ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿಯನ್ನು ನೀಡಲು ಅನುಮತಿ ನೀಡಲಾಗಿದೆ.

ಐಐಐಟಿಗಳಲ್ಲಿ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿ ನೀಡುವ ಕುರಿತಾದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು ಸ್ವಾಯತ್ತ ವಿಶ್ವವಿದ್ಯಾಲಯಗಳಂತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಗಳು ಕೂಡ ಪದವಿ ನೀಡಬಹುದಾಗಿದೆ.

ಐಐಐಟಿಗಳು ಎಂ.ಟೆಕ್, ಪಿಎಚ್.ಡಿ ನೀಡಬಹುದು

ಇದರ ಜೊತೆಯಲ್ಲಿ ಆಂಧ್ರಪ್ರದೇಶದ ಕರ್ನೂಲ್ ಐಐಐಟಿಡಿಎಂ ಕೂಡ ಪದವಿಯನ್ನು ನೀಡಬಹುದು ಎಂಬ ಮಸೂದೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವಡೇಕರ್ ಮಾರ್ಚ್ ತಿಂಗಳಿನಲ್ಲಿ ಮಂಡಿಸಿದ್ದರು. 

ಒಂದು ವೇಳೆ ಈ ಮಸೂದೆ ಜಾರಿಗೆ ಬಂದರೆ ಪದವಿ ನೀಡುವ ಸಂಸ್ಥೆಗಳಲ್ಲಿ ಐಐಐಟಿಡಿಎಂ ದೇಶದ ಐದನೇ ಐಐಐಟಿ ಸಂಸ್ಥೆಯಾಗಲಿದೆ.

ಇನ್ನು ಮಸೂದೆಯಂತೆ ಐಐಐಟಿಡಿಎಂನ ಸದಸ್ಯರನ್ನು ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರವನ್ನು ತೆಗೆದುಹಾಕಲಾಗಿದೆ.

ಈ ಮಸೂದೆ ಕುರಿತು ಮಾತನಾಡಿರುವ ಕೇಂದ್ರ ಸಚಿವರಾದ ಜಾವಡೇಕರ್ ಬಡವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವನ್ನು ಹೆಚ್ಚಳ ಮಾಡಲಾಗಿಲ್ಲ ಹಾಗೂ ಮೀಸಲಾತಿಯು ದೇಶದಲ್ಲಿರುವ ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಶುಲ್ಕದ ಹೊರತಾಗಿ ಸಂಶೋಧನಾ ಮತ್ತು ಪ್ರಾಜೆಕ್ಟ್ ವೆಚ್ಚವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಹೆಚ್ಚಳವಿಲ್ಲ, ಆದರೆ ಶುಲ್ಕ ಪಾವತಿಸಲು ಶಕ್ತಿ ಇರುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಮತ್ತು ವಿದ್ಯಾರ್ಥಿವೇತನದ ಅನುಕೂಲಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು.

English summary
A bill was passed by the Lok Sabha, on Wednesday, permitting Indian Institutes of Information Technology (IIITs) to award degrees, including MTech and PhD as issued by autonomous universities.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia