ಜರ್ಮನ್ ಬಿ-ಸ್ಕೂಲ್ ಜೊತೆ ಕೈಜೋಡಿಸಿದ ಬೆಂಗಳೂರು ಐಐಎಂ

Posted By:

ಬೆಂಗಳೂರಿನ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆ ಐಐಎಂ ಅಂತಾರಾಷ್ಟ್ರೀಯ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ಜರ್ಮನ್ ವಿಶ್ವವಿದ್ಯಾಲಯಗಳ ಜೊತೆ ಕೈಜೋಡಿಸಿದೆ.

ಜಾಗತಿಕ ರ್ಯಾಂಕಿಂಗನಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯ ಹೆಸರಾಂತ ವಿಶ್ವವಿದ್ಯಾಲಯಗಳಾದ ಫ್ರೆಡ್ರಿಕ್ ಅಲೆಕ್ಸಾಂಡರ್ ವಿಶ್ವವಿದ್ಯಾಲಯ (ಎಫ್ಎಯು) ಮತ್ತು ಫ್ರಾನೋಫರ್ ಇನ್ಸ್ಟಿಟ್ಯೂಟ್ ಆಫ್ ಸರ್ಕ್ಯುಟ್ಸ್ ಐಐಎಸ್, ಜರ್ಮನಿ ಯೊಂದಿಗೆ ಐಐಎಂ ಪಾಲುದಾರಿಕೆ ಹೊಂದಿದೆ.

ಬೆಂಗಳೂರು ಐಐಎಂ ಜರ್ಮನ್ ಬಿ-ಸ್ಕೂಲ್ ಒಪ್ಪಂದ

ಈ ಮೂಲಕ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಫಾರ್ ಟೆಕ್ನಾಲಜಿಸ್ಟ್ಸ್ (ಐಎಂಪಿಟಿ) ರೂಪುಗೊಂಡಿದ್ದು, ಬೆಂಗಳೂರು ಐಐಎಂ ಮತ್ತಷ್ಟು ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಐಎಂಪಿಟಿ ಯೋಜನೆಯಡಿಯಲ್ಲಿ ವಿವಿಧ ಕಾರ್ಯಗಾರಗಳು, ಚರ್ಚೆ ಸಂವಾದ ಗಳು ನಡೆಯಲಿದ್ದು, ನುರಿತ ಅಧ್ಯಾಪಕ ವರ್ಗದ ಸೇವೆಯು ವಿದ್ಯಾರ್ಥಿಗಳಿಗೆ ಸಿಗಲಿದೆ. ನವೋದ್ಯಮಕ್ಕೆ ಐಎಂಪಿಟಿ ಉತ್ತಮ ವೇದಿಕೆಯಾಗಲಿದ್ದು, ವಿಶಿಷ್ಟ ಶಿಕ್ಷಣ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸಲಿದೆ.

ಐಎಂಪಿಟಿಯು ಮೂರು ಶಿಕ್ಷಣ ಸಂಸ್ಥೆಗಳಿಂದ ರೂಪುಗೊಂಡಿದ್ದು, ಈ ಮೂಲಕ ಭಾರತೀಯ ಮತ್ತಯ ಜರ್ಮನ್ ತಂತ್ರಜ್ಞಾನದ ಮೂಲಕ ಇಂದಿನ ಜಾಗತಿಕ ಉದ್ಯಮಕ್ಕೆ ಪೂರಕವಾಗುವ ಕೊಡುಗೆಗಳನ್ನು ನೀಡುವ ಯೋಜನೆ ಹೊಂದಿದೆ ಎಂದು ಐಐಎಂನ ಪ್ರೊ.ಆರ್ ಶ್ರೀನಿವಾಸ್ ಹೇಳಿದ್ದಾರೆ.

ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಐಎಂಪಿಟಿಯಿಂದ ಸಾಕಷ್ಟು ಕೊಡುಗೆಗಳನ್ನ ನಿರೀಕ್ಷಿಸಬಹುದಾಗಿದ್ದು, ಸಾಮಾಜದ ವಿವಿಧ ಕ್ಷೇತ್ರಗಳ ಮೇಲೆ ಇದು ಪರಿಣಾವ ಬೀರಲಿದೆ. ಸಾಂಸ್ಕೃತಿಕ, ಆರ್ಥಿಕ ಮತ್ತು ವ್ಯಾವಹಾರಿಕ ಕ್ಷೇತ್ರಗಳಲ್ಲಿ ಉತ್ತಮ ಬದಲಾವಣೆ ತರಲಿದೆ ಎಂದು ಫ್ರೆಡ್ರಿಕ್ ಅಲೆಕ್ಸಾಂಡರ್ ವಿಶ್ವವಿದ್ಯಾಲಯದ ಪ್ರೊ.ಡಾ.ಕ್ಯಾಥರಿನ್ ಎಂ ಮೊಸ್ಲೀನ್ ಅಭಿಪ್ರಾಯ ಪಟ್ಟಿದ್ದಾರೆ.

English summary
The Indian Institute of Management Bangalore (IIMB) has announced a partnership with two premier German B-schools- The Friedrich Alexander University of Erlangen-Nuremberg (FAU) and The Fraunhofer Institute for Integrated Circuits IIS, Germany.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia