ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ: ಹೊಸ ನೋಟಿನಲ್ಲಿ ಗಾಂಧೀಜಿ ಯಾವ ಕಡೆ ಮುಖ ಮಾಡಿದ್ದಾರೆ?

Posted By:

ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯೊಂದರಲ್ಲಿ ಈ ಪ್ರಶ್ನೆ ಕೇಳಲಾಗಿದ್ದು, ಬಹುತೇಕ ವಿದ್ಯಾರ್ಥಿಗಳು ತಪ್ಪು ಬರೆದಿದ್ದಾರೆ.

ಸಾಮಾನ್ಯ ಜ್ಞಾನದ ವಿಷಯದಲ್ಲಿ ಈ ಪ್ರಶ್ನೆ ಕೇಳಲಾಗಿದ್ದು, ವಿದ್ಯಾರ್ಥಿಗಳು ಸರಿ ಎಂದು ಗುರುತು ಹಾಕಿದ್ದ ಉತ್ತರ ತಪ್ಪಾಗಿದೆ.

ಜಿಟಿಟಿಸಿ: ಉಚಿತ ಪ್ರಾಯೋಜಿತ ತರಬೇತಿಗಳಿಗೆ ಪ್ರವೇಶಾತಿ

ಗಾಂಧೀಜಿ ಎಡಭಾಗಕ್ಕೆ ಮುಖ ಮಾಡಿದ್ದರೋ, ಬಲ ಭಾಗಕ್ಕೆ ಮುಖ ಮಾಡಿದ್ದರೋ ಎನ್ನುವ ಈ ಪ್ರಶ್ನೆಗೆ ಬಹುತೇಕ ವಿದ್ಯಾರ್ಥಿಗಳು ಎಡಭಾಗಕ್ಕೆ ಎಂದು ಗುರುತಿಸಿ ಅಂಕ ಕಳೆದು ಕೊಂಡಿದ್ದಾರೆ.

ಗಾಂಧೀಜಿ ಯಾವ ಕಡೆ ಮುಖ ಮಾಡಿದ್ದಾರೆ?

ವಿದ್ಯಾರ್ಥಿಗಳಲ್ಲಿ ಗೊಂದಲ

ಹೊಸ ನೋಟಿನಲ್ಲಿ ಗಾಂಧೀಜಿ ಯಾವ ಕಡೆಗೆ ಮುಖ ಮಾಡಿದ್ದಾರೆ ಎನ್ನುವುದು ಸುಲಭದ ಪ್ರಶ್ನೆ ಆದರೆ ಉತ್ತರ ಅಷ್ಟು ಸುಲಭವಲ್ಲ . ಏಕೆಂದರೆ ಅದು ನೋಡುಗನ ಕಡೆಯಿಂದಾದರೆ ಬಲಭಾಗಕ್ಕೆ, ನೋಟಿನ ಕಡೆಯಿಂದಾದರೆ ಎಡಭಾಗಕ್ಕೆ.

ಆದರೆ ಸರಿಯಾದ ಉತ್ತರ ನೋಡುಗನ ಕಡೆಯಿಂದ ಅಂದರೆ ಬಲಭಾಗಕ್ಕೆ ಎಂದಾಗುತ್ತದೆಮತ್ತು ನೋಟಿನ ಬಲಭಾಗವನ್ನು ಗಾಂಧೀಜಿ ನೋಡುತ್ತಿದ್ದರೆ ಎನ್ನುವ ಅರ್ಥವು ಬರುತ್ತದೆ.

ಉದಾಹರಣೆಗೆ ಪತ್ರಿಕೆಗಳನ್ನು ತೆಗೆದುಕೊಳ್ಳೋಣ, ಪತ್ರಿಕೆಯ ಬಲಭಾಗದಲ್ಲಿ ಎಂದರೆ ನಾವು ನಮ್ಮ ಬಲಭಾಗವನ್ನೇ ಗಮನಿಸುತ್ತೇವೆ ಹೊರತು ಪತ್ರಿಕೆಯ ಮುದ್ರಣ ದೃಷ್ಟಿಯಿಂದಲ್ಲ. ಇದು ಹಾಗೆಯೇ, ನಮ್ಮ ದೃಷ್ಟಿಗೆ ಸರಿಯಾಗಿ ಕಾಣುವುದನ್ನೇ ನಾವು ಗುರುತಿಸಬೇಕಾಗುತ್ತದೆ.

ಬಹುತೇಕ ವಿದ್ಯಾರ್ಥಿಗಳು ನೋಟಿನ ದೃಷ್ಟಿಕೋನದಲ್ಲಿ ಯೋಚಿಸಿದ್ದು ಅಂಕ ನಷ್ಟ ಮಾಡಿಕೊಂಡಿದ್ದಾರೆ.

ಹೊಸ ನೋಟು

ಭಾರತದಲ್ಲಿ ಹಳೆಯ ನೋಟುಗಳ ಅಮಾನೀಕರಣದ ನಂತರ ಬಂದ ನೋಟುಗಳಲ್ಲಿ ಹೊಸ ವಿನ್ಯಾಸ ಮಾಡಲಾಗಿದೆ. ಈ ಹಿಂದಿನ ನೋಟುಗಲ್ಲಿ ಮಹಾತ್ಮ ಗಾಂಧೀಜಿ ಚಿತ್ರ ಬಲ ಬದಿಯಲ್ಲಿತ್ತು, ಆದರೆ ಈ ಹೊಸ ನೋಟಿನಲ್ಲಿ ಗಾಂಧಿಜೀ ಚಿತ್ರ ನೋಟಿನ ಮಧ್ಯಭಾಗಕ್ಕೆ ಬಂದಿದೆ. ಇಲ್ಲದೇ ಗಾಂಧಿಜೀ ಎಡಭಾಗಕ್ಕೆ ತಿರುಗಿರುವ ಫೋಟೋಗಳು ಹಳೇ ನೋಟುಗಳಲ್ಲಿತ್ತು, ಈಗ ಗಾಂಧಿ ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದಾರೆ.

ಈ ಹೊಸ ನೋಟಿನಲ್ಲಿ ರೂಪಾಯಿ ಚಿಹ್ನೆಯನ್ನು ಬಳಸಲಾಗಿದೆ. ನೋಟಿನ ಮಧ್ಯ ಭಾಗದಲ್ಲಿರುತ್ತಿದ್ದ ಆರ್'ಬಿಐ ಗೌರ್ನರ್ ಸಹಿ ಮತ್ತು ಘೋಷಣೆ ಸ್ವಲ್ಪ ಸ್ಥಾನ ಪಲ್ಲಟಗೊಂಡಿದೆ. ನೋಟಿನ ನಂಬರ್ ನಮೂದಿಸುವ ಸ್ಥಳವು ಬದಲಾಗಿದೆ.

ಈ ರೀತಿಯ ಪ್ರಶ್ನೆಗಳನ್ನು ಏಕೆ ಕೇಳಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ ಎಂದರೆ ಸಾಕು ದೊಡ್ಡ ದೊಡ್ಡ ಪುಸ್ತಕ ಹಿಡಿದು, ಹಗಲು ರಾತ್ರಿ ಓದುವುದನ್ನು ನಾವು ಗಮನಿಸುತ್ತೇವೆ, ಆದರೆ ಹೀಗೆ ಓದುವವರು ಸಾಮಾನ್ಯ ಜ್ಞಾನ ಕಳೆದುಕೊಂಡು ಕೇವಲ ಪುಸ್ತಕದ ಹುಳುಗಳಾಗುತ್ತಾರೆ. ಅಭ್ಯರ್ಥಿಗಳ ಸೂಕ್ಷ್ಮ ಗ್ರಹಿಕೆ ಮತ್ತು ಸಾಮಾನ್ಯ ಚಿಂತನೆ ಹೇಗಿದೆ ಎಂದು ತಿಳಿಯಲು ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಯುಪಿಎಸ್ಸಿ ಪರೀಕ್ಷೆಗಳಲ್ಲಿ ಇಂತಹ ಸೂಕ್ಷ್ಮ ವಿಚಾರದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಭ್ಯರ್ಥಿಗಳು ಸೂಕ್ಷ್ಮಮತಿಗಳಾಗಿದ್ದರೆ ಇಂತಹ ಪ್ರಶ್ನೆಗಳನ್ನು ಸುಲಭವಾಗಿ ಎದುರಿಸಬಲ್ಲರು.

English summary
In an competitive exam most of the students have lost the mark for the question, whether Gandhiji faces the left or right?

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia