International Literacy Day: ಡಿಜಿಟಲ್ ಸಾಕ್ಷರತೆ ಸಾಧಿಸಬೇಕಿದೆ ಭಾರತ

ಕೇವಲ ಓದುವುದು ಮತ್ತು ಬರೆಯುವುದು ಮಾತ್ರ ಸಾಕ್ಷರತೆ ಎಂದು ಕರೆಸಿಕೊಳ್ಳುತ್ತಿದ್ದ ದಿನ ಈಗ ಹಿಂದಕ್ಕೆ ಸರಿದಿದೆ. ಡಿಜಿಟಲ್ ಯುಗದಲ್ಲಿ ಇಂದು ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಬಳಸುವುದು ಕೂಡ ಸಾಕ್ಷರತೆ ಎಂದು ಹೇಳಲಾಗುತ್ತಿದೆ.

ಇಂದು ವಿಶ್ವ ಸಾಕ್ಷರತಾ ದಿನ, ಶಿಕ್ಷಣದಿಂದ ಮಾತ್ರ ಸಮಾಜದ ನಿಜವಾದ ಏಳಿಗೆ ಎಂದು ನಂಬಿರುವ ಭಾರತ ತನ್ನ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.

ಕೇವಲ ಓದುವುದು ಮತ್ತು ಬರೆಯುವುದು ಮಾತ್ರ ಸಾಕ್ಷರತೆ ಎಂದು ಕರೆಸಿಕೊಳ್ಳುತ್ತಿದ್ದ ದಿನ ಈಗ ಹಿಂದಕ್ಕೆ ಸರಿದಿದೆ. ಡಿಜಿಟಲ್ ಯುಗದಲ್ಲಿ ಇಂದು ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಬಳಸುವುದು ಕೂಡ ಸಾಕ್ಷರತೆ ಎಂದು ಹೇಳಲಾಗುತ್ತಿದೆ.

ವಿಶ್ವ ಸಾಕ್ಷರತಾ ದಿನ: ಸಾಕ್ಷರತೆಯಲ್ಲಿ ಯಾವ ದೇಶ ಮುಂದು?ವಿಶ್ವ ಸಾಕ್ಷರತಾ ದಿನ: ಸಾಕ್ಷರತೆಯಲ್ಲಿ ಯಾವ ದೇಶ ಮುಂದು?

ಭಾರತದಲ್ಲಿ ಓದುವುದು ಮತ್ತು ಬರೆಯುವುದನ್ನು ಕಲಿತಿರುವವರು ಕೂಡ ಡಿಜಿಟಲ್ ಸಾಕ್ಷರತೆಯಲ್ಲಿ ಹಿಂದೆ ಉಳಿದಿದ್ದಾರೆ. ಹಾಗಾಗಿ ಇಂದು ಡಿಜಿಟಲ್ ಜ್ಞಾನವನ್ನು ಕೂಡ ಸಾಕ್ಷರತೆಗೆ ಸೇರಿಸುವ ಅಗತ್ಯ ಇದೆ.

ವಿಶ್ವ ಸಾಕ್ಷರತಾ ದಿನ

ಭಾರತದ ಸಾಕ್ಷರತಾ ವರದಿ

2011ರ ಜನಗಣತಿಯ ತಾತ್ಕಾಲಿಕ ವರದಿ ಪ್ರಕಾರ ಭಾರತದ 121 ಕೋಟಿ ಜನರಲ್ಲಿ ಸಾಕ್ಷರರ ಪ್ರಮಾಣ ಶೇ.74.04.ಅಂದರೆ ಶೇ.26 ಮಂದಿ ಇಂದಿಗೂ ಅನಕ್ಷರಸ್ಥರು.

2001ರಲ್ಲಿ ಸಾಕ್ಷರತೆಯ ಪ್ರಮಾಣ ಶೇ.64.83 ಇತ್ತು. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಕ್ಷರತೆಯ ಪ್ರಮಾಣ ನೆಗೆದಿರುವುದು. 2001ರಲ್ಲಿ ಶೇ.53.67ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣವು ಹತ್ತು ವರ್ಷಗಳಲ್ಲಿ ಶೇ.65.46ಕ್ಕೇರಿದೆ. ಈ ನೆಗೆತಕ್ಕೆ ಹೋಲಿಸಿದರೆ ಪುರುಷರ ಸಾಕ್ಷರತೆಯ ವೃದ್ಧಿಯ ಪ್ರಮಾಣ ಕಡಿಮೆ. ಅಂದರೆ ಶೇ.75.26 ಇದ್ದದ್ದು ಶೇ.82.14ಕ್ಕೆ ಅದು ವೃದ್ಧಿಯಾಗಿದೆ.

ಕೇರಳವು ಶೇ.93.91 ಸಾಕ್ಷರತೆಯೊಂದಿಗೆ ದೇಶದಲ್ಲಿ ನಂ.1 ಸಾಕ್ಷರತಾ ರಾಜ್ಯ ಎಂಬ ಸ್ಥಾನವನ್ನು ಕಾಯ್ದುಕೊಂಡಿದೆ. ಕೇರಳದ ಬಳಿಕ ಎರಡನೇ ಸ್ಥಾನದಲ್ಲಿರುವುದು ಲಕ್ಷದ್ವೀಪ (ಶೇ.92.28). ಬಿಹಾರವಿನ್ನೂ ಶೇ.63.82 ಸಾಕ್ಷರತೆಯೊಂದಿಗೆ ಈ ಏಣಿಯ ಕೆಳತುದಿಯಲ್ಲಿದೆ. ಅರುಣಾಚಲ ಪ್ರದೇಶ ಶೇ.66.95 ಸಾಕ್ಷರತೆಯೊಂದಿಗೆ ಬಿಹಾರಕ್ಕಿಂತ ಮುಂದಿದೆ.

ಒಟ್ಟು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಕೇರಳ, ಲಕ್ಷದ್ವೀಪ, ಮೀಜೋರಾಂ, ತ್ರಿಪುರ, ಗೋವಾ, ದಾಮನ್-ದಿಯು, ಪುದುಚೇರಿ, ಚಂಡೀಗಢ, ದೆಹಲಿ, ಮತ್ತು ಅಂಡಮಾನ್-ನಿಕೋಬಾರ್‌ಗಳು ಶೇ.85ಕ್ಕಿಂತ ಹೆಚ್ಚಿನ ಸಾಕ್ಷರತೆ ಪ್ರಮಾಣವನ್ನು ಸಾಧಿಸಿವೆ.

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರು

ನಗರ ಪ್ರದೇಶದಲ್ಲಿ ಈಗಾಗಲೇ ಶೇ.60ರಷ್ಟು ಮಂದಿ (44.40 ಕೋಟಿ ನಗರವಾಸಿ ಜನರಲ್ಲಿ ಅಂದಾಜು 26.90 ಕೋಟಿ ಮಂದಿ ) ಇಂಟರ್ನೆಟ್ ಬಳಸುತ್ತಿದ್ದರೆ, ಅಂತರ್ಜಾಲವು ಗ್ರಾಮೀಣ ಭಾಗವನ್ನು ವ್ಯಾಪಿಸಿದ ಪ್ರಮಾಣ ಶೇ.17 (90.60 ಕೋಟಿ ಗ್ರಾಮೀಣ ಜನಸಂಖ್ಯೆಯಲ್ಲಿ 16.30 ಕೋಟಿ) ಮಾತ್ರ.

ಅಂದರೆ, 75 ಕೋಟಿ ಗ್ರಾಮೀಣ ಮಂದಿಗೆ ಇನ್ನೂ ಇಂಟರ್ನೆಟ್ ಬಳಕೆಯ ಉಪಯುಕ್ತತೆಯ ಅರಿವೂ ಇಲ್ಲ, ಅದು ಅವರನ್ನು ತಲುಪಿಯೂ ಇಲ್ಲ, ಹಾಗಾಗಿ ಭಾರತ ಡಿಜಿಟಲ್ ಸಾಕ್ಷರತೆಯ ಕಡೆ ಗಮನ ಹರಿಸಬೇಕಿದೆ.

For Quick Alerts
ALLOW NOTIFICATIONS  
For Daily Alerts

English summary
International Literacy Day is celebrated worldwide on September 8th every year. Education is the most crucial yet basic human right that transforms human behavior and enables betterment of mankind.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X