
ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ನೇಮಕಾತಿ ಚಟುವಟಿಕೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿರುವ ಕಾರಣದಿಂದಾಗಿ ಭಾರತದ ನಿರುದ್ಯೋಗ ದರ ಕಳೆದ ತಿಂಗಳಿನಲ್ಲಿ ಹೆಚ್ಚಿದೆ.
ಆಗಸ್ಟ್ ತಿಂಗಳಿನಲ್ಲಿ ನಿರುದ್ಯೋಗ ದರವು ಶೇ.8.32%ರಷ್ಟು ಏರಿಕೆ ಕಂಡಿದ್ದು, ಜುಲೈನಲ್ಲಿ ನಾಲ್ಕು ತಿಂಗಳ ಒಟ್ಟಾರೆ ದರವು ಶೇ.6.95%ರಷ್ಟಿದೆ ಎಂದು ಖಾಸಗಿ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ. ಬುಧವಾರ ತೋರಿಸಿದೆ. ಐಹೆಚ್ಎಸ್ ಮಾರ್ಕಿಟ್ ಅವರ ಕಾರ್ಖಾನೆಯ ವ್ಯವಸ್ಥಾಪಕರ ಪ್ರತ್ಯೇಕ ಸಮೀಕ್ಷೆ ವರದಿಯ ಪ್ರಕಾರ ಆಗಸ್ಟ್ ತಿಂಗಳಲ್ಲಿ ಕೋವಿಡ್ ನಿಂದಾಗಿ ನೇಮಕಾತಿ ಪ್ರಕ್ರಿಯೆಗಳು ತಟಸ್ಥಗೊಂಡಿರುವ ಹಿನ್ನೆಲೆಯಲ್ಲಿ ಮಾರಾಟ ವಿಭಾಗದಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ.
"ಬೆಳವಣಿಗೆಯಲ್ಲಿ ಸ್ವಲ್ಪ ಹಿಂದೆ ಸರಿಯುತ್ತಿದ್ದೇವೆ ಹಾಗಾಗಿಯೇ ನಾವು ಉದ್ಯೋಗ ಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದೇವೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಫೋನ್ ಮೂಲಕ ಹೇಳಿದ್ದಾರೆ. ಅಲ್ಲದೇ "ನಾವು ಉದ್ಯೋಗದಲ್ಲಿ ತೀವ್ರ ಕುಸಿತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ" ಎಂಬುದನ್ನೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸಿಎಂಐಇ ದತ್ತಾಂಶಗಳ ಪ್ರಕಾರ ಕಳೆದ ತಿಂಗಳು ಸುಮಾರು ಒಂದು ಮಿಲಿಯನ್ ಉದ್ಯೋಗಗಳು ಕಳೆದುಹೋಗಿವೆ. ಇದು ಸಮೀಕ್ಷೆಗಳನ್ನು ಆಧರಿಸಿದೆ ಮತ್ತು ಸಕಾಲಿಕ ಸರ್ಕಾರಿ ದತ್ತಾಂಶದ ಅನುಪಸ್ಥಿತಿಯಲ್ಲಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ. ಕೋವಿಡ್ ೨ನೇ ಅಲೆಯ ಸಂದರ್ಭದಲ್ಲಿ ಏಳು ದಶಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಕಳೆದುಹೋಗಿದ್ದು, ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಉದ್ಯೋಗ ನಷ್ಟಗಳು ಕಡಿಮೆ.
ಭಾರತವು ಪ್ರತಿ ತಿಂಗಳು ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ತನ್ನ ಕಾರ್ಯಪಡೆಗೆ ಸೇರಿಸಿಕೊಳ್ಳುತ್ತಿದೆ ಎನ್ನುವುದು ಕೂಡ ಗಮನಿಸಬೇಕಾದ ಸಂಗತಿ.