ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಭಾರತೀಯ ಕಂಪನಿಗಳು

Posted By:

ಕೆಲದಿನಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ವರದಿ ಕೇಳಿ ಬಂದಿತ್ತು. ಈಗ ಅಮೆರಿಕದಲ್ಲಿ ಭಾರತೀಯ ಕಂಪನಿಗಳು ಹೆಚ್ಚಿನ ಉದ್ಯೋಗ ಸೃಷ್ಟಿಸುತ್ತಿವೆ ಎನ್ನುವ ವರದಿ ಹೊರಬಿದ್ದಿದೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ 'ಅಮೆರಿಕ ಮಣ್ಣಿನಲ್ಲಿ ಭಾರತೀಯ ಬೇರು' ಎಂಬ ವರದಿ ತಯಾರಿಸಿದ್ದು, ಇದರಲ್ಲಿ ಭಾರತೀಯ ಮೂಲದ ಕಂಪನಿಗಳು ಅಮೆರಿಕದಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ವಿವರಿಸಲಾಗಿದೆ.

ಅಮೆರಿಕದಲ್ಲಿ ಭಾರತೀಯ ಕಂಪನಿಗಳ ಉದ್ಯೋಗ ಸೃಷ್ಟಿ

ಈ ವರದಿಯ ಪ್ರಕಾರ ಭಾರತೀಯ ಕಂಪನಿಗಳು ಅಮೆರಿಕದಲ್ಲಿ ಸುಮಾರು 1.7 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ಮಾಡಿವುದರ ಜೊತೆಗೆ 1.13 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ.

ಅಮೆರಿಕದಲ್ಲಿ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳಿಗೂ ಲಕ್ಷಾಂತರ ಡಾಲರ್ ಗಳನ್ನು ವ್ಯಯಿಸಿವೆ. ಹಲವಾರು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಭಾರತೀಯ ಕಂಪನಿಗಳು ಸ್ಥಾಪಿಸಿವೆ.

ಅಮೆರಿಕದಲ್ಲಿ ಭಾರತದ 100 ಕಂಪನಿಗಳು ಒಟ್ಟಾಗಿ 50 ಪ್ರಾಂತ್ಯಗಳಲ್ಲಿ 1.13 ಲಕ್ಷ ಉದ್ಯೋಗಿಗಳಿಗೆ ಕೆಲಸ ನೀಡಿವೆ.
ಭಾರತೀಯ ಕಂಪನಿಗಳು ಮುಖ್ಯವಾಗಿ ನ್ಯೂಜೆರ್ಸಿ, ಟೆಕ್ಸಾಸ್, ಕ್ಯಾಲಿಫೋರ್ನಿಯ ಹಾಗೂ ನ್ಯೂಯಾರ್ಕ್ ನಗರಗಳಲ್ಲಿ ಉದ್ಯೋಗ ಸೃಷ್ಟಿಸಿವೆ.

ಮುಂದಿನ ಐದು ವರ್ಷಗಳಲ್ಲಿ ಶೇ.87 ಕ್ಕೂ ಹೆಚ್ಚು ಕಂಪನಿಗಳು ಅಮೆರಿಕದಲ್ಲಿ ವ್ಯಾಪಕ ನೇಮಕಾತಿ ಮಾಡಿಕೊಳ್ಳಲಿವೆ. ಉತ್ತರ ಅಮೆರಿಕದಲ್ಲಿ ಟಾಟಾ ಸಮೂಹವು ಭಾರಿ ಹೂಡಿಕೆ ಮಾಡಿರುವ ಬಹು ರಾಷ್ಟ್ರೀಯ ಕಂಪನಿಯಾಗಿದೆ.

ಭಾರತೀಯ ಮೂಲದ ಕಂಪನಿಗಳು ಅಮೆರಿಕದಲ್ಲಿ ಮಾಡುತ್ತಿರುವ ಹೂಡಿಕೆ ಪ್ರಮಾಣ ಇತ್ತೀಚೆಗೆ ಗಣನೀಯವಾಗಿ ಏರುತ್ತಿದೆ ಎಂದು ಅಮೆರಿಕದ ಸಂಸದ ಕ್ರಿಸ್ ವ್ಯಾನ್ ಹೆಲೆನ್ ಹೇಳಿದ್ದಾರೆ.

ಭಾರತ-ಅಮೆರಿಕದ ನಡುವೆ ಮೈತ್ರಿಯು ಅಧ್ಯಕ್ಷ ಟ್ರಂಪ್ ಅವಧಿಯಲ್ಲಿ ಮತ್ತಷ್ಟು ಪ್ರಬಲವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ತೆಗೆದು ಕೊಂಡಿರುವ ಆರ್ಥಿಕ ಸುಧಾರಣಾ ನೀತಿಗಳಿಂದ ಅಮೆರಿಕದ ಕಂಪನಿಗಳು ಭಾರತದಲ್ಲಿ ಹೂಡಿಕೆ ಹೆಚ್ಚಿಸುತ್ತಿವೆ ಎಂದು ಸಂಸದರು ಹೇಳುತ್ತಾರೆ.

ಒಟ್ಟಿನಲ್ಲಿ ವಿದೇಶಿ ನೆಲದಲ್ಲಿ ಭಾರತದ ಕಂಪನಿಗಳು ತಮ್ಮ ಅಸ್ತಿತ್ವ ಕಂಡುಕೊಳ್ಳುತ್ತಿದ್ದು, ಇದು ಭಾರತದ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ.

English summary
Indian companies invested about Rs 1.7 lakh crore in the US and generated over 1.13 lakh jobs.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia