ಶೇ.34 ರಷ್ಟು ಮಹಿಳೆಯರು ಮಾತ್ರ ಭಾರತದ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಭಾರತದ ಎಲ್ಲ ಪ್ರಮುಖ ಕಂಪೆನಿಗಳಲ್ಲಿಯೂ ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಗೆ 50ಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಕಂಪೆನಿಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಟ್ಟು ಮೂರು ಲಕ್ಷ ಮಹಿಳೆಯರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳಲ್ಲಿನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಮಹಿಳೆಯರ ಒಟ್ಟು ಪ್ರಮಾಣ ಶೇ 34ರಷ್ಟು ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ.

ಬಿಲಾಂಗ್‌ ಸಂಸ್ಥೆ 'ಭಾರತದಲ್ಲಿನ ತಂತ್ರಜ್ಞಾನ ಸಂಬಂಧಿ ಕ್ಷೇತ್ರದಲ್ಲಿ ಲಿಂಗ ಅನುಪಾತ (the gender gap in the tech industry in India)' ಎಂಬ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಿತ್ತು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಮಹಿಳೆಯರು ಸೇರುವ ಪ್ರಮಾಣ ಕಡಿಮೆ ಎಂಬ ಮನೋಭಾವಕ್ಕೆ ಈ ಸಮೀಕ್ಷೆ ಇನ್ನಷ್ಟು ಒತ್ತು ನೀಡಿದೆ.

ವಿಟಿಯು: ಹೆಚ್ಚು ಶುಲ್ಕ ಪಡೆಯುವ ಇಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದುವಿಟಿಯು: ಹೆಚ್ಚು ಶುಲ್ಕ ಪಡೆಯುವ ಇಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದು

ಭಾರತದ ಐಟಿ ಕಂಪನಿಯಲ್ಲಿ ಶೇ.34 ರಷ್ಟು ಮಹಿಳೆಯರು

ಭಾರತದ ಎಲ್ಲ ಪ್ರಮುಖ ಕಂಪೆನಿಗಳಲ್ಲಿಯೂ ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಗೆ 50ಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಕಂಪೆನಿಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಟ್ಟು ಮೂರು ಲಕ್ಷ ಮಹಿಳೆಯರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಇದರಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸ ಮಾಡುವ ಮಹಿಳೆಯರ ಪ್ರಮಾಣ ಇನ್ನೂ ಕಡಿಮೆ ಇದೆ. ಇದು ಶೇ 26ರಷ್ಟು ಎಂದು ಸಂಸ್ಥೆ ಹೇಳಿದೆ.

ಪ್ರೋಗ್ರಾಮಿಂಗ್‌ ಕೆಲಸಗಳಿಗೆ ಹೋಲಿಸಿದರೆ ಉತ್ಪನ್ನ ಪರೀಕ್ಷೆಯ ಕೆಲಸಗಳಲ್ಲಿ ಹೆಚ್ಚು ಮಹಿಳೆಯರಿದ್ದಾರೆ. ಉತ್ಪನ್ನ ಪರೀಕ್ಷೆಯ ಕೆಲಸಗಳಿಗೆ ಬೇಡಿಕೆ ಕಡಿಮೆ ಇದೆ. ಹಾಗೆಯೇ ಪ್ರೋಗ್ರಾಮಿಂಗ್‌ಗೆ ಹೋಲಿಸಿದರೆ ಉತ್ಪನ್ನ ಪರೀಕ್ಷಕರ ಹುದ್ದೆಗಳ ಸಂಖ್ಯೆಯೂ ಬಹಳ ಕಡಿಮೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ವೃತ್ತಿಯಲ್ಲಿ ಮಹಿಳೆಯರ ಏಳಿಗೆಯ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗಿದೆ. ಸಾಮಾನ್ಯವಾಗಿ, ಆರು ವರ್ಷಗಳ ಅನುಭವ ಹೊಂದಿರುವ ಗಂಡಸರಿಗೆ ವ್ಯವಸ್ಥಾಪಕ ಮಟ್ಟದ ಹುದ್ದೆಗೆ ಬಡ್ತಿ ದೊರೆಯುತ್ತದೆ. ಆದರೆ ಮಹಿಳೆಯರು ಇಂತಹ ಬಡ್ತಿ ಪಡೆಯಲು ಎಂಟು ವರ್ಷಗಳ ಅನುಭವ ಬೇಕು.

ಹಾಗೆಯೇ ಸುಮಾರು ಎಂಟು ವರ್ಷಗಳ ಅನುಭವದ ಬಳಿಕ ಶೇ 45ರಷ್ಟು ಮಹಿಳೆಯರು ತಂತ್ರಜ್ಞಾನ ಆಧರಿತ ಕೆಲಸದಿಂದ ಬೇರೆಡೆಗೆ ಹೋಗುತ್ತಾರೆ. ತಾಂತ್ರಿಕ ಕೆಲಸಗಳನ್ನು ಬಿಡುವ ಈ ಮಹಿಳೆಯರು ಉತ್ಪನ್ನ ನಿರ್ವಾಹಕರು, ಮಾರಾಟ ವ್ಯವಸ್ಥಾಪಕರು ಅಥವಾ ಸಲಹೆಗಾರರಂತಹ ಕೆಲಸಗಳಿಗೆ ಸೇರುತ್ತಾರೆ ಎಂದು ಹೇಳಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
The overall representation of women in the engineering workforce of IT firms is just 34 per cent, according to belong survey.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X