ಭಾರತೀಯ ನೇವಿ 554 ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು ಇದೀಗ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶಾತಿ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ . ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಲು ತಮ್ಮ ಪ್ರವೇಶ ಪತ್ರವನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಇದೀಗ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಭಾರತೀಯ ನೇವಿ ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಈ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1: ಭಾರತೀಯ ನೇವಿಯ ಅಧಿಕೃತ ವೆಬ್ ಸೈಟ್ https://www.joinindiannavy.gov.in/ ಗೆ ಭೇಟಿ ಕೊಡಿ
ಸ್ಟೆಪ್ 2: ನಂತರ "Call Letter For Tradesman Mate"ನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಹೊಸರ ಸ್ಕ್ರೀನ್ ತೆರೆಯುತ್ತದೆ. ಅಲ್ಲಿ ಕೇಳಲಾಗಿರುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ ನಿಮ್ಮ ರಿಜಿಸ್ಟಾರ್ ನಂಬರ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ
ಸ್ಟೆಪ್ 5: ಡೌನಲೋಡ್ ಮಾಡಿರುವ ಪ್ರವೇಶ ಪತ್ರದ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ
ಭಾರತೀಯ ನೇವಿ ನೇಮಕಾತಿ 2019: 554 ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಏಪ್ರಿಲ್ 2,2019 ರಿಂದ ಏಪ್ರಿಲ್ 14,2019 ರೊಳಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ಒಯ್ಯತಕ್ಕದ್ದು ಇಲ್ಲವಾದಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ. ಈ ಪರೀಕ್ಷೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ