ಇಗ್ನೋ: ಶೇ.20ರಷ್ಟು ಶುಲ್ಕ ಹೆಚ್ಚಳ, ವಿದ್ಯಾರ್ಥಿವಲಯದಿಂದ ಪ್ರತಿಭಟನೆ

Posted By:

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತವಿಶ್ವವಿದ್ಯಾಲಯ (ಇಗ್ನೋ) ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳ ಶುಲ್ಕವನ್ನು ಹೆಚ್ಚಿಸಿದೆ.

ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಸಹಿತ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳ ಶುಲ್ಕ ಪರಿಷ್ಕರಣೆ ಮಾಡಲಾಗಿದ್ದು, 2018-19ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.

ಕೆಎಸ್‌ಒಯು: ತಾಂತ್ರಿಕೇತರ ಕೋರ್ಸ್‌ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡಲು ಹೈಕೋರ್ಟ್ ಆದೇಶ

ಇಗ್ನೋ ಶೇ.20ರಷ್ಟು ಶುಲ್ಕ ಹೆಚ್ಚಳ

ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳ ಶುಲ್ಕವನ್ನು ಶೇ 20ರಷ್ಟು ಹೆಚ್ಚಳಗೊಳಿಸಿದೆ. ವಿದ್ಯಾರ್ಥಿಗಳು ನೂತನ ಪ್ರವೇಶಾತಿಗೆ ನೀಡಲಾಗಿದ್ದ ವಿವರಣ ಪುಸ್ತಕದಲ್ಲಿದ್ದ ಶುಲ್ಕವನ್ನು ಹಿಂದಿನ ವರ್ಷಕ್ಕೆ ಹೋಲಿಸಿದಾಗ, ಶುಲ್ಕ ಹೆಚ್ಚಳಗೊಂಡಿರುವುದು ತಿಳಿದಿದೆ. ಆದರೆ ಇಗ್ನೋ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿರಲಿಲ್ಲ.

ಮಾಹಿತಿ ನೀಡದೆ ಇಗ್ನೋ ಈ ಕ್ರಮ ಕೈಗೊಂಡಿರುವ ಕುರಿತು ವಿದ್ಯಾರ್ಥಿವಲಯದಿಂದ ಪ್ರತಿಭಟನೆ ವ್ಯಕ್ತವಾಗಿದೆ.

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ತಕ್ಷಣವೇ ಶುಲ್ಕ ಹೆಚ್ಚಳವನ್ನು ಹಿಂಪಡೆಯಲು ಆಗ್ರಹಿಸಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಗ್ನೋ ಶಿಕ್ಷಣ ಮೂಲಕ ಪಡೆಯುತ್ತಾರೆ. ಹೀಗೆ ಏಕಾಏಕಿ ಶುಲ್ಕ ಹೆಚ್ಚಿಸಿದರೆ ಸಾಕಷ್ಟು ತೊಂದರೆಯಾಗುತ್ತದೆ ಎಂದು ಹೇಳಿದೆ.

ಹಣವಂತರು ದೂರ ಶಿಕ್ಷಣ ಬಯಸುವುದಿಲ್ಲ, ಬಡವರು, ಗ್ರಾಮೀಣ ಅಭ್ಯರ್ಥಿಗಳು, ನೌಕರರು ಇಲ್ಲಿ ಪ್ರವೇಶ ಪಡೆಯುತ್ತಾರೆ, ದುರ್ಬಲರಿಗೆ ಇದರಿಂದ ಅನ್ಯಾಯವಾಗಲಿದೆ ಎಂದು NSUI ವಿವರಿಸಿದೆ.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ)

ಇಗ್ನೋ ಎಂದು ಕರೆಯಲ್ಪಡುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ದೆಹಲಿಯಲ್ಲಿದೆ. ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕಾಯಿದೆ, 1985 (IGNOU ಆಕ್ಟ್ 1985) ಯನ್ನು ಜಾರಿಗೊಳಿಸಿದ ನಂತರ ವಿಶ್ವವಿದ್ಯಾನಿಲಯ ₹ 20 ಮಿಲಿಯನ್ ಬಜೆಟ್ನೊಂದಿಗೆ ಸ್ಥಾಪಿಸಲ್ಪಟ್ಟಿತು.

ವಿಶ್ವದಲ್ಲೇ ಅತಿ ದೊಡ್ಡ ವಿಶ್ವವಿದ್ಯಾನಿಲಯವಾಗಿರುವ ಇಗ್ನೋದಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ.

ಇಗ್ನೊ 21 ಶಾಲೆಗಳು, 67 ಪ್ರಾದೇಶಿಕ ಕೇಂದ್ರಗಳು, 2667 ಅಧ್ಯಯನ ಕೇಂದ್ರಗಳು, ಮತ್ತು 29 ವಿದೇಶಿ ಕೇಂದ್ರಗಳನ್ನು (15 ದೇಶಗಳಲ್ಲಿ) ಹೊಂದಿದೆ.

ಡಿಪ್ಲೊಮಾ ಮತ್ತು ಪದವಿ ಮಟ್ಟಗಳಲ್ಲಿ ಶಿಕ್ಷಣ ಒಳಗೊಂಡಿರುವ 226 ಶೈಕ್ಷಣಿಕ ಕಾರ್ಯಕ್ರಮಗಳನ್ನು ಇಗ್ನೋ ಒದಗಿಸುತ್ತದೆ

English summary
The National Students’ Union of India (NSUI) voiced its opposition to the recent 20 percent hike in fees for courses being offered by the Indira Gandhi National Open University (IGNOU.)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia