ಗುರುಜನ್ ಆಧಾರ್ ಮೂಲಕ ನಕಲಿ ಶಿಕ್ಷಕರ ಮಟ್ಟ

ದೇಶದಲ್ಲಿರುವ ನಕಲಿ ಶಿಕ್ಷಕರನ್ನು ಪತ್ತೆಹಚ್ಚಲು ಹಾಗೂ ರಾಷ್ಟ್ರೀಯ ಶಿಕ್ಷಕರ ವೆಬ್‌ ಪೋರ್ಟಲ್‌ ತೆರೆಯಲು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಕ್ರಮ ಕೈಗೊಂಡಿದ್ದು, ಆಧಾರ್‌ ಸೇರಿದಂತೆ ಜಾತಿ ಹಾಗೂ ಧರ್ಮದ ಪ್ರಮಾಣ ಪತ್ರಗಳನ್ನು ಸಲ್ಲಿಸುವಂತೆ ಉಪನ್ಯಾಸಕರಿಗೆ ತಿಳಿಸಿದೆ.

ಸರ್ಕಾರಿ ಸಂಸ್ಥೆಗಳಲ್ಲದೆ ಬೇರೆಬೇರೆ ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಉದ್ಯೋಗ ಗಿಟ್ಟಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಹಲವು ನಕಲಿ ಶಿಕ್ಷಕರನ್ನು ಪತ್ತೆಹಚ್ಚಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್‌.ಸುಬ್ರಮಣಿಯನ್‌ ತಿಳಿಸಿದ್ದಾರೆ.

ನಾಲ್ಕು ತಿಂಗಳಿಂದ ಮಾಹಿತಿ ಸಂಗ್ರಹ

ಕಳೆದ ನಾಲ್ಕು ತಿಂಗಳಲ್ಲಿ ಶೇ.60ರಷ್ಟು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಕಾಲೇಜು ಉಪನ್ಯಾಸಕರ ಆಧಾರ್‌, ಜಾತಿ ಪ್ರಮಾಣ ಪತ್ರ, ಧರ್ಮದ ಪ್ರಮಾಣ ಪತ್ರದ ಜತೆಗೆ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿದ್ದು, ಸುಮಾರು 15ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಉಪನ್ಯಾಸಕರ ವಿವರಗಳನ್ನು ಕಲೆಹಾಕಲಾಗಿದೆ.

 

ಈವರೆಗೆ ವಿವರವನ್ನು ಸಲ್ಲಿಸದಿರುವ ಶಿಕ್ಷಕರಿಗೆ ಮುಂದಿನ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಜತೆಗೆ ಈ ಕ್ರಮವನ್ನು ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೂ ಅನ್ವಯಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಆಧಾರ್ ಮೂಲಕ ನಕಲಿ ಶಿಕ್ಷಕರ ಮಟ್ಟ

2010-11ರ ರಿಂದಲೂ ಸರ್ಕಾರ, ಉನ್ನತ ಶಿಕ್ಷಣದ ಕುರಿತಂತೆ ಅಖಿಲ ಭಾರತ ಮಟ್ಟದ ವಾರ್ಷಿಕ ಸಮೀಕ್ಷೆ(ಎಐಎಸ್‌ಎಚ್‌ಇ)ಗಳನ್ನು ನಡೆಸುತ್ತಿದೆ. ಕಳೆದ ವರ್ಷದ ವೆರೆಗೂ ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿನ ಸಿಬ್ಬಂದಿ ನೇಮಕಾತಿ, ಆಯ್ಕೆ ಪ್ರಕ್ರಿಯೆ, ಲಿಂಗ, ಜಾತಿ, ಧರ್ಮ ಹಾಗೂ ಅಂಗವಿಕಲರ ಬಗ್ಗೆ ಸಾಮಾನ್ಯ ಮಾಹಿತಿಯನ್ನಷ್ಟೇ ಸಲ್ಲಿಸುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಶಿಕ್ಷಕ ವರ್ಗದ ವೈಯಕ್ತಿಕ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಜಾತಿ ಹಾಗೂ ಧರ್ಮದ ಪ್ರಮಾಣ ಪತ್ರಗಳನ್ನು ಸಂಗ್ರಹಿಸುವುದಿಂದ ಮಾತ್ರವೇ ನಕಲಿ ಶಿಕ್ಷಕರನ್ನು ಪತ್ತೆಹಚ್ಚಲಾಗದು ಎಂಬ ಅಂಶವನ್ನೂ ಗಮನಿಸಿದ್ದೇವೆ. ಶಿಕ್ಷಕರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವುದರಿಂದ ಸಂಸ್ಥೆಗಳು ಹಾಗು ಸಚಿವಾಲಯದ ಮೇಲಿನ ಕೆಲಸದ ಒತ್ತಡವೂ ಕಡಿಮೆಯಾಗಲಿದ್ದು, ಇದರಿಂದಾಗಿ ದಾಖಲಾತಿಗಳಲ್ಲಿ ಕಂಡುಬರುವ ಸಾಕಷ್ಟು ದೋಷಗಳನ್ನು ನಿಯಂತ್ರಿಸಬಹುದು ಎಂದು ಸುಬ್ರಮಣಿಯನ್‌ ಅವರು ಹೇಳಿದ್ದಾರೆ.

 

ಗುರುಜನ್ ಯೋಜನೆ

ಶಿಕ್ಷಕರ ವಿವರಗಳನ್ನು ಸಂಗ್ರಹಿಸಿ 'ಗುರುಜನ್‌' ಹೆಸರಿನ ಶಿಕ್ಷಕರ ಕುರಿತ ವೆಬ್‌ ಪೋರ್ಟಲ್‌(gurujan.gov.in) ತೆರೆಯುವ ಸಲುವಾಗಿ ಸದ್ಯ ಚಾಲ್ತಿಯಲ್ಲಿರುವ 'ಮಾಹಿತಿ ಸಂಗ್ರಹ ಸ್ವರೂಪ'(ಡಿಇಎಫ್‌) ಹಾಗೂ 'ಶಿಕ್ಷಕರ ಮಾಹಿತಿ ಸ್ವರೂಪ'(ಟಿಐಎಫ್‌)ಗಳನ್ನು 2016-17ರ ಎಐಎಸ್‌ಎಚ್‌ಇ ಸಮೀಕ್ಷೆ ಬಳಿಕ ಪರಿಚಯಿಸಲಾಗಿದೆ.

ಗುರುಜನ್‌ ಪೋರ್ಟಲ್ ಅನ್ನು ಸಾರ್ವಜನಿಕಗೊಳಿಸುವುದಿಲ್ಲ. ಯಾವುದೇ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಬಳಸುವುದಿಲ್ಲ. ಪ್ರತಿಯೊಂದು ಅಂಕಿ ಅಂಶವೂ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ದಲ್ಲಿ ಸುರಕ್ಷಿತವಾಗಿರಲಿದೆ.

ಶಿಕ್ಷಕರ ವಿವರಗಳನ್ನೊಳಗೊಂಡ ಅಂಕಿ ಅಂಶಗಳನ್ನು ಎಐಎಸ್‌ಎಚ್‌ಇ ವೆಬ್‌ಸೈಟ್‌ನಿಂದ 'ಗುರುಜನ್‌' ಪೋರ್ಟಲ್‌ಗೆ ವರ್ಗಾಯಿಸಿದ ನಂತರ ಇದೇ ಮಾದರಿಯ ವಿದ್ಯಾರ್ಥಿಗಳ ವಿವರಗಳನ್ನೂ ಒಳಗೊಂಡ ಪೋರ್ಟಲ್‌ ಸಹ ಆರಂಭಿಸಲಾಗುವುದು. ಬಹುಶಃ ಮುಂದಿನ ವರ್ಷ ಎರಡೂ ಪೋರ್ಟಲ್‌ಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಲಿವೆ' ಎಂದು ಸಹ ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Getting all the details directly from individuals will now reduce the workload of institutes that prepared the abstract for the Ministry in the past. It will also reduce mistakes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X