ಸ್ವಾಮಿ ವಿವೇಕಾನಂದರಿಂದ ಜೀವನವನ್ನೇ ಬದಲಿಸಿಕೊಂಡ ಮಹನೀಯರು

ಸ್ವಾಮಿ ವಿವೇಕಾನಂದ ಹೆಸರೇ ಒಂದು ಪ್ರೇರಣೆ. ಸ್ವಾಮಿ ವಿವೇಕಾನಂದ ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದರೋ ಅದೇ ರೀತಿ ಬರವಣಿಗೆ ಮೂಲಕವೂ ಕ್ರಾಂತಿ ಮಾಡಿದವರು.

ಶಿಕ್ಷಣ ಮತ್ತು ವ್ಯವಸ್ಥೆ ಬಗ್ಗೆ ಸ್ವಾಮಿ ವಿವೇಕಾನಂದರ ಮಾತು

ಸ್ವಾಮಿ ವಿವೇಕಾನಂದರ ಜೀವನ ಅದೆಷ್ಟೋ ಮಂದಿಯ ಜೀವನವನ್ನೇ ಬದಲಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಬರಹಗಳು ಸಾಕಷ್ಟು ಪ್ರಭಾವ ಬೀರಿರುವುದು ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರ ಮಾತುಗಳಲ್ಲಿ ಕಂಡು ಬರುತ್ತದೆ.

ರಾಷ್ಟ್ರೀಯ ಯುವ ದಿನ: ವಿವೇಕಾನಂದರ 155ನೇ ಜನ್ಮದಿನಾಚರಣೆ

ಸ್ವಾಮಿ ವಿವೇಕಾನಂದರ ಪ್ರೇರಣೆ

 

ವಿವೇಕಾನಂದರು ಬರೆದ ಪ್ರಮುಖ ಪುಸ್ತಕಗಳು

ಕರ್ಮ ಯೋಗ (1896), ರಾಜ ಯೋಗ (1896 [1899 edition]), ವೇದಾಂತ ಫಿಲಾಸಫಿ , ಲೆಕ್ಕ್ರ್ಸ್ ಫ್ರಮ್ ಕೊಲಂಬೊ ಟು ಅಲ್ಮೊರಾ (1897), ವೇದಾಂತ ಫಿಲಾಸಫಿ : ಲೆಕ್ಟ್ರ್ಸ್ ಆನ್ ಜ್ಞಾನ ಯೋಗ (1902), ವರ್ತಮಾನ ಭಾರತ.

ಕವಿ ರವೀಂದ್ರನಾಥ ಠಾಗೂರರು ಒಮ್ಮೆ ಹೀಗೆ ವಿವರಿಸಿದ್ದರು, 'ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ' ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ.

ಸ್ವಾಮೀಜಿ ಬದುಕಿದ್ದು, ಕೇವಲ 39 ವರ್ಷಗಳಾದರೂ ಅವರ ಪ್ರಭಾವ ಮಾತ್ರ ಭರತ ಭೂಮಿ ಇರುವವರೆಗೂ. ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು ಕೇವಲ 7 ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು 1893-1900ರ ನಡುವಿನ ಕೇವಲ ಏಳು ವರ್ಷಗಳಲ್ಲಿ.

ವಿವೇಕಾನಂದರ ಪ್ರಭಾವ

ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಇವರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು.

ಸುಭಾಷ್‌ಚಂದ್ರ ಬೋಸ್‌, ಅರವಿಂದೋ ಘೋಷ್‌, ಭಾಘ್‌ ಜತಿನ್‌, ಮಹಾತ್ಮ ಗಾಂಧಿ, ರವಿಂದ್ರನಾಥ ಠಾಗೋರ್‌, ಚಕ್ರವರ್ತಿ ರಾಜಗೋಪಾಲಚಾರಿ, ಜವಾಹರ ಲಾಲ್‌ ನೆಹರು, ಬಾಲ ಗಂಗಾಧರ ತಿಳಕ್‌, ಜಮ್ಷಡ್‌ಜೀ ಟಾಟಾ, ನಿಕೋಲಾ ಟೆಸ್ಲಾ, ಸಾರಾ ಬರ್ಮಹಾರ್ಡಿಟ್‌, ಎಮ್ಮಾ ಕ್ಲೇವ್‌, ಜಗದೀಶ್‌ ಚಂದ್ರ ಬೋಸ್‌, ಆ್ಯನಿಬೆಸಂಟ್‌, ರೊಮಿನ್‌ ರೊಲಾಂಡ್‌, ಇವರಿಂದ ಪ್ರಭಾವಿತರಾಗಿದ್ದರು.

ಸ್ವಾಮಿ ವಿವೇಕಾನಂದರ ಬಗ್ಗೆ ಮಹನೀಯರ ಮಾತು

ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ಬಳಿಕ ನನಗೆ ನನ್ನ ದೇಶದ ಬಗೆಗೆ ಇರುವ ಪ್ರೀತಿ ಸಾವಿರ ಪಟ್ಟು ಹೆಚ್ಚಾಯಿತು. ನಾನು ಯುವಜನತೆಯಲ್ಲಿ ಒಂದನ್ನು ಕೋರಿಕೊಳ್ಳುತ್ತೇನೆ- ಸ್ವಾಮಿ ವಿವೇಕಾನಂದರು ಬದುಕಿ- ಬಾಳಿದ ಈ ನೆಲದಲ್ಲಿ ನಿಮ್ಮ ಚೈತನ್ಯವನ್ನು ಉಪಯೋಗಿಸದೆ ವಿಫಲಜೀವರಾಗಿ ಹೋಗದಿರಿ.- ಮಹಾತ್ಮ ಗಾಂಧಿ

ರಾಷ್ಟ್ರಕವಿ ಕುವೆಂಪು ಹೇಳಿದ್ದೇನು? ಸ್ವಾಮಿ ವಿವೇಕಾನಂದರ ತಪಃ ಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು ! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ. ಹೊಕ್ಕರೆ ಪ್ರಬುದ್ಧರಾಗುತ್ತೇವೆ. - ರಾಷ್ಟ್ರಕವಿ ಕುವೆಂಪು

ತಮ್ಮ ಕಾಲದ ವಿದ್ಯಾರ್ಥಿಗಳ ಮೇಲೆ ಸ್ವಾಮಿ ವಿವೇಕಾನಂದರು ತಮ್ಮ ಭಾಷಣ, ಬರಹಗಳ ಮೂಲಕ ಮಾಡಿದ ಪ್ರಭಾವವು, ಇತರ ಯಾವುದೇ ನಾಯಕರ ಪ್ರಭಾವಕ್ಕಿಂತ ಮಿಗಿಲಾದುದಾಗಿತ್ತು. ಸ್ವಾಮಿ ಅವರೆಲ್ಲರ ಆಶೆ ಆಶೋತ್ತರಗಳನ್ನು ಪ್ರತಿನಿಧಿಸಿದ್ದರು.- ಸುಭಾಶ್ಚಂದ್ರ ಬೋಸ್‌

ಸ್ವಾಮಿ ವಿವೇಕಾನಂದರು ಮನುಷ್ಯರ ನಡುವೆ ಸಿಂಹದಂತಿದ್ದ ವ್ಯಕ್ತಿತ್ವ. ಅವರ ಆತ್ಮವಿನ್ನೂ ಅವರ ತಾಯಿಯ ಹಾಗೂ ಆಕೆಯ ಮಕ್ಕಳಲ್ಲಿ ನೆಲೆಸಿದೆ.
- ಮಹರ್ಷಿ ಅರವಿಂದರು

 

ಭಾರತದ ಒಂದು ತಲೆಮಾರಿನ ವ್ಯಕ್ತಿತ್ವ ಶಿಥಿಲವಾಗಿದ್ದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಹುಟ್ಟಿ, ನಮ್ಮ ನಾಡಿನ ನಾಡಿಗಳಲ್ಲಿ ಚೈತನ್ಯವನ್ನು ತುಂಬಿದರು. ಅವರ ಧ್ಯೇಯಗಳು ಎಂದಿಗೂ ಹಳತಾಗವು; ಅವು ಎಲ್ಲ ಕಾಲದ ಯುವಪೀಳಿಗೆಗೂ ಮಾರ್ಗದರ್ಶಕ.- ಜವಾಹರಲಾಲ್‌ ನೆಹರೂ

ವಿವೇಕಾನಂದರ ಪ್ರತಿ ಮಾತುಗಳೂ ರೋಮಾಂಚನಕಾರಿ! ಪ್ರತೀ ವಾಕ್ಯವನ್ನು ಓದುವಾಗ ನನ್ನ ಮೈ ನವಿರೇಳುತ್ತದೆ! ಮುಂದುವರೆದು ಹೇಳುತ್ತಾನೆ. ಅವರ ಸಾಹಿತ್ಯ ಓದುವಾಗಲೇ ನನಗೆ ಇಂತಾ ಅನುಭವವಾಗುತ್ತದಲ್ಲಾ! ಅವರ ತುಟಿಗಳಿಂದ ನೇರವಾಗಿ ಮಾತನ್ನು ಕೇಳಿದ ಆ ಭಾಗ್ಯಶಾಲಿಗಳಿಗೆ ಇನ್ನೆಂತಾ ಅನುಭವವಾಗಿರಬೇಕು-ಫ್ರೆಂಚ್ ಸಾಹಿತಿ ರೊಮ್ಯಾನ್ ರೊಲ್ಯಾಂಡ್

For Quick Alerts
ALLOW NOTIFICATIONS  
For Daily Alerts

  English summary
  Indian independence activist Subhas Chandra Bose regarded Vivekananda as his spiritual teacher. Mahatma Gandhi said that after reading the works of Vivekananda his love for his nation became a thousand-fold.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more