Karnataka Literacy Rate In 2020: ಸಾಕ್ಷರತಾ ಪ್ರಮಾಣದಲ್ಲಿ ಕರ್ನಾಟಕಕ್ಕೆ 15ನೇ ಸ್ಥಾನ

ಸೆಪ್ಟೆಂಬರ್ 8 ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಕ್ಷರತೆಯ ಪ್ರಮಾಣ ಕುರಿತು ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.

ಸಾಕ್ಷರತೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನ ?

ಈ ಸಮೀಕ್ಷೆಯ ಪ್ರಕಾರ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 77.7 ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 73.5ರಷ್ಟಿದ್ರೆ, ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟು ಸಾಕ್ಷರತಾ ಪ್ರಮಾಣವಿದೆ. ಇನ್ನು ಕೇರಳ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ.96.2ರಷ್ಟಿದೆ. ಕೊನೆಯ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು, ಶೇ.66.4ರಷ್ಟು ಸಾಕ್ಷರತೆ ಹೊಂದಿದೆ. ಈ ಬಾರಿ ಕರ್ನಾಟಕಕ್ಕೆ 15ನೇ ಸ್ಥಾನ ಲಭಿಸಿದ್ದು, ಸಾಕ್ಷರತಾ ಪ್ರಮಾಣ ಶೇಕಡಾ 77.2 ರಷ್ಟಿದೆ.

ಸಾಕ್ಷರತೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನ ?

ಸಾಕ್ಷರತಾ ದಿನದ ಇತಿಹಾಸ:

1965 ನವೆಂಬರ್ 17 ರಲ್ಲಿ ಯುನೆಸ್ಕೋ ಸೆಪ್ಟೆಂಬರ್ 8 ಅನ್ನು ವಿಶ್ವ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. 1965 ರಲ್ಲಿ ಇರಾನಿನಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಜಗತ್ತಿನಲ್ಲಿ ಅನಕ್ಷರತೆಯನ್ನು ಇನ್ನಿಲ್ಲದಂತೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡು ಸಾಕ್ಷರತಾ ದಿನವನ್ನು ಜಾರಿಗೆ ತರಲಾಯಿತು.

For Quick Alerts
ALLOW NOTIFICATIONS  
For Daily Alerts

English summary
Today is international literacy day. Karnataka got 15th place in literacy rate.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X