ವಿಶ್ವ ಸಾಕ್ಷರತಾ ದಿನ: ಸಾಕ್ಷರತೆಯಲ್ಲಿ ಯಾವ ದೇಶ ಮುಂದು?

ಈ ವರ್ಷ "ಲಿಟಿರೆಸಿ ಇನ್ ಎ ಡಿಜಿಟಲ್ ವರ್ಲ್ಡ್" ಎಂಬ ವಿಚಾರದೊಂದಿಗೆ ಆಚರಿಸಲಾಗುತ್ತಿದೆ. 2030 ರ ವೇಳೆಗೆ ಶಿಕ್ಷಣದ ಮೂಲಕ ಇಡೀ ವಿಶ್ವವನ್ನು ಬಡತನ ಮುಕ್ತವನ್ನಾಗಿ ಮಾಡೋ ಯೋಜನೆಯನ್ನು ಯುನೆಸ್ಕೋ ಹಾಕಿಕೊಂಡಿದೆ.

ಸೆಪ್ಟೆಂಬರ್ 8 ಅನ್ನು ವಿಶ್ವದಾದ್ಯಂತ ಸಾಕ್ಷರಾತ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಣದ ಮಹತ್ವ ಸಾರುವ ಈ ದಿನ ಕಲಿಕೆಯಲ್ಲಿ ನಾವು ಯಾವ ಹಂತದಲ್ಲಿದ್ದೇವೆ ಎನ್ನುವುದನ್ನು ಸಹ ತಿಳಿಸುತ್ತದೆ. 51 ನೇ ವಿಶ್ವ ಸಾಕ್ಷರತಾ ದಿನವನ್ನು ಡಿಜಿಟಲ್ ಸಾಕ್ಷರತೆಯನ್ನು ಗಮನದಲ್ಲಿಟ್ಟುಕೊಂಡು ಆಚರಿಸಲಾಗುತ್ತಿದೆ.

ವಿಶ್ವ ಸಾಕ್ಷರತಾ ದಿನ: ಡಿಜಿಟಲ್ ಸಾಕ್ಷರತೆ ಸಾಧಿಸಬೇಕಿದೆ ಭಾರತವಿಶ್ವ ಸಾಕ್ಷರತಾ ದಿನ: ಡಿಜಿಟಲ್ ಸಾಕ್ಷರತೆ ಸಾಧಿಸಬೇಕಿದೆ ಭಾರತ

ಸಾಕ್ಷರತಾ ದಿನದ ಇತಿಹಾಸ

1965 ನವೆಂಬರ್ 17 ರಲ್ಲಿ ಯುನೆಸ್ಕೋ ಸೆಪ್ಟೆಂಬರ್ 18 ಅನ್ನು ವಿಶ್ವ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. 1965 ರಲ್ಲಿ ಇರಾನಿನಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಜಗತ್ತಿನಲ್ಲಿ ಅನಕ್ಷರತೆಯನ್ನು ಇನ್ನಿಲ್ಲದಂತೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡು ಸಾಕ್ಷರತಾ ದಿನವನ್ನು ಜಾರಿಗೆ ತರಲಾಯಿತು.

ವಿಶ್ವ ಸಾಕ್ಷರತಾ ದಿನ

'ಎಲ್ಲರಿಗೂ ಶಿಕ್ಷಣ' ಎಂಬ ಆಶಯದಲ್ಲಿ ಶುರುವಾದ ಈ ದಿನ ಸಾಕ್ಷರತೆಯ ಜೊತೆಗೆ ಪ್ರತಿ ವರ್ಷ ಒಂದೊಂದು ವಿಚಾರವನ್ನು ತೆಗೆದುಕೊಂಡು ವಿಶ್ವಾದ್ಯಂತ ಅರಿವು ಮೂಡಿಸುವುದರ ಮೂಲಕ ಆಚರಿಸಲಾಗುತ್ತದೆ. ಈ ವರ್ಷ "ಲಿಟಿರೆಸಿ ಇನ್ ಎ ಡಿಜಿಟಲ್ ವರ್ಲ್ಡ್" ಎಂಬ ವಿಚಾರದೊಂದಿಗೆ ಆಚರಿಸಲಾಗುತ್ತಿದೆ.

2030 ರ ವೇಳೆಗೆ ಶಿಕ್ಷಣದ ಮೂಲಕ ಇಡೀ ವಿಶ್ವವನ್ನು ಬಡತನ ಮುಕ್ತವನ್ನಾಗಿ ಮಾಡೋ ಯೋಜನೆಯನ್ನು ಯುನೆಸ್ಕೋ ಹಾಕಿಕೊಂಡಿದೆ.

ಮೊದಲ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು 1967 ರಲ್ಲಿ ಆಚರಿಸಲಾಯಿತು. ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವುದರ ಮೂಲಕ ಎಲ್ಲರಲ್ಲೂ ಯೋಚನಾ ಶಕ್ತಿಯನ್ನು ಬೆಳೆಸಬೇಕು, ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ ಎಂದು ನಂಬಿರುವ ವಿಶ್ವ ಸಂಸ್ಥೆಯು ಸಾಕ್ಷರತೆಯಲ್ಲಿ ಹಿಂದುಳಿದ ದೇಶಗಳನ್ನು ಮೇಲೆತ್ತುವ ಕಾರ್ಯವನ್ನು ಮಾಡುತ್ತಾ ಬಂದಿದೆ.

ವಿಶ್ವ ಸಾಕ್ಷರತೆ ತೆಗೆದುಕೊಂಡರೆ ಹದಿನೈದು ವರ್ಷಕ್ಕಿಂತ ಮೇಲಿನವರ ಸಾಕ್ಷರತೆ ಶೇ.86.3 ರಷ್ಟಿದೆ. ಅದರಲ್ಲಿ ಪುರುಷರು ಶೇ.90 ರಷ್ಟು ಹೊಂದಿದ್ದರೆ, ಮಹಿಳೆಯರು ಶೇ.82.7 ರಷ್ಟು ಸಾಕ್ಷರತೆ ಹೊಂದಿದ್ದಾರೆ.

ಮುಂದುವರೆದ ರಾಷ್ಟ್ರಗಳಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿಯೇ ಇದೆ. ಅಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಸೌಲಭ್ಯವಿದ್ದು ಶೇ.99 ರಷ್ಟು ಸಾಕ್ಷರತೆಯನ್ನು ಸಾಧಿಸಿವೆ.

ಶೇ.72 ರಷ್ಟು ಸಾಕ್ಷರತೆ ಹೊಂದಿರುವ ಭಾರತ ಇತ್ತೀಚಿನ ದಿನದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಗತಿ ಸಾಧಿಸಿತ್ತಿರುವುದು ಸಂತಸದ ವಿಚಾರ.

ಸಾಕ್ಷರತೆಯಲ್ಲಿ ನಾರ್ಥ್ ಕೊರಿಯಾ ನಂಬರ್ ಒನ್

ಶೇ.100 ರಷ್ಟು ಸಾಕ್ಷರತೆ ಸಾಧಿಸಿರುವ ನಾರ್ಥ್ ಕೊರಿಯಾ ಸಾಕ್ಷರತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಕೊರಿಯಾ ರೀತಿಯೇ ಫಿನ್ಲ್ಯಾಂಡ್, ಗ್ರೀನ್ ಲ್ಯಾಂಡ್, ಲಕ್ಸಂಬರ್ಗ್, ನಾರ್ವೆ ದೇಶಗಳು ಕೂಡ ಶೇ.100 ರಷ್ಟು ಸಾಕ್ಷರತೆ ಹೊಂದಿವೆ.

ಕ್ಯೂಬಾ, ಎಸ್ಟೋನಿಯಾ, ಜಾರ್ಜಿಯಾ, ಉಕ್ರೇನ್, ತಜ್ಕಿಸ್ಥಾನ್, ರಷ್ಯಾ ಮತ್ತು ಪೋಲೆಂಡ್ ದೇಶಗಳು ಶೇ.99.7 ರಷ್ಟು ಸಾಕ್ಷರತೆ ಹೊಂದಿವೆ.ಸೌತ್ ಸೂಡಾನ್, ಅಫ್ಘಾನಿಸ್ತಾನ್, ನೈಜರ್ ದೇಶಗಳು ಶೇ.27 ಸಾಕ್ಷರತೆ ಹೊಂದಿವೆ.

For Quick Alerts
ALLOW NOTIFICATIONS  
For Daily Alerts

English summary
International Literacy Day is celebrated worldwide on September 8th every year. The development came as a result of an idea that highlighted the need to eradicate illiteracy from the world during the World Conference of Ministers of Education in Iran that was held from September 8th to September 19th in the year 1965.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X