ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ಷಿಪ್ ಕಡ್ಡಾಯ!

ಇಂಜಿನಿಯರಿಂಗ್ ಪದವಿ ಪೂರೈಸಬೇಕೆಂದರೆ ವಿದ್ಯಾರ್ಥಿಯು ಕನಿಷ್ಠ ಮೂರು ಇಂಟರ್ನ್ಷಿಪ್ ಕಡ್ಡಾಯವಾಗಿ ಮಾಡಬೇಕಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಈ ಕುರಿತು ವಿವರಣೆ ನೀಡಿದ್ದು, ಇಂಜಿನಿಯರಿಂಗ್ ಓದುತ್ತಿರುವ ಪ್ರತಿ ವಿದ್ಯಾರ್ಥಿಗಳು ತಮ್ಮ ಪದವಿಯ ಅವಧಿಯಲ್ಲಿ 4 ರಿಂದ 8 ತಿಂಗಳುಗಳ ಇಂಟರ್ನ್ಷಿಪ್ ಮಾಡಬೇಕಿದೆ.

ವಿದ್ಯಾರ್ಥಿಗಳ ಇಂಟರ್ನ್ಷಿಪ್ ಕುರಿತಾದ ಚಿಂತನೆಯನ್ನು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿಯ ರಾಜ್ಯ ಸಚಿವರಾದ ಮಹೇಂದ್ರನಾಥ್ ಪಾಂಡೆ ಲೋಕ ಸಭೆಯಲ್ಲಿ ತಿಳಿಸಿದ್ದಾರೆ. ಪ್ರತಿ ರಾಜ್ಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ಎಐಸಿಟಿಯು ಕೈ ಜೋಡಿಸಲಿದ್ದು, ಮುಂದಿನ ಹತ್ತು ವರ್ಷಗಳಿಗೆ ಸಂಸ್ಥೆಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಪಾಂಡೆ ತಿಳಿಸಿದ್ದಾರೆ.

 ಬಿಇ ವಿದ್ಯಾರ್ಥಿಗಳಿಗೆ ಇಂಟರ್ನ್ಷಿಪ್ ಕಡ್ಡಾಯ

 

ವಿದ್ಯಾರ್ಥಿಗಳಿಗೆ ಕಲಿಕೆಯ ಹಂತದಲ್ಲಿಯೇ ಪ್ರಯೋಗಿಕ ಅನುಭವ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ, ಸಾಮರ್ಥ್ಯ, ಕೌಶಲ್ಯ ವೃದ್ಧಿಯಾಗುವುದರ ಜೊತೆಗೆ ವೃತ್ತಿಪರತೆ ಹೆಚ್ಚಲಿದೆ. ಅಲ್ಲದೆ ಕೆಲಸದ ಮೇಲಿನ ಜವಾಬ್ದಾರಿಗಳು ಕೂಡ ಹೆಚ್ಚಲಿದೆ. ಮುಂದೆ ಉದ್ಯೋಗ ಹರಿಸಿ ಬೇರೆಡೆ ಹೋದಾಗ ಇಂಟರ್ನ್ಷಿಪ್ ಅನುಭವದಿಂದ ಉತ್ತಮ ಉದ್ಯೋಗ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಚಿವರ ಈ ಮಾತನ್ನು ರಾಜ್ಯದ ವಿಟಿಯು ಉಪಕುಲಪತಿಗಳಾದ ಕೆ ಕರಿಸಿದ್ದಪ್ಪ ಸ್ವಾಗತಿಸಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಇತರೆ ರಾಜ್ಯಗಳಲ್ಲಿ ಇಂಟರ್ನ್ಷಿಪ್ ಕಡ್ಡಾಯವಿಲ್ಲ, ಆದರೆ ವಿದ್ಯಾರ್ಥಿಗಳ ಹಿತಕ್ಕಾಗಿ ವಿಟಿಯು ಇಂಟರ್ನ್ಷಿಪ್ ಸ್ವಾಗತಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಗಾಗಿ ಎಲ್ಲಾ ಅಧ್ಯಾಪಕರುಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ.

ಪ್ರತಿ ವಿದ್ಯಾರ್ಥಿಯು ನಾಲ್ಕು ವಾರಗಳ ಒಂದು ಇಂಟರ್ನ್ಷಿಪ್ ಮಾಡಬೇಕೆಂಬುದು ವಿಟಿಯು ಆಶಯವಾಗಿತ್ತು, ಆದರೆ ಎಐಸಿಟಿಯು ನಿಯಮವಾಳಿ ಜಾರಿಯಾದರೆ ಒಂದರ ಬದಲು ಮೂರು ಇಂಟರ್ನ್ಷಿಪ್ ಮಾಡುವಂತೆ ಅದನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಎಲ್ಲಿ ಇಂಟರ್ನ್ಷಿಪ್ ಮಾಡಬೇಕು ಎನ್ನುವುದನ್ನು ಆಯಾ ಶಿಕ್ಷಣ ಸಂಸ್ಥೆಗಳೆ ನಿರ್ಧರಿಸಬೇಕು, ಅಲ್ಲದೆ ವಿದ್ಯಾರ್ಥಿಗಳಿಗೆ ಇಂಟರ್ನ್ಷಿಪ್ ಮುಗಿಸಲು ಸೂಕ್ತ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಎಐಸಿಟಿಇ ಹೇಳಿದೆ.

For Quick Alerts
ALLOW NOTIFICATIONS  
For Daily Alerts

  English summary
  The new action plan of the All India Council for Technical Education (AICTE) focuses on how every engineering student will have to complete three internships. Each internship will have to be somewhere near 4-8 weeks long and must be taken up before the student finishes their undergraduate course.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more