ಐಸಿಎಸ್ಇ ಫಲಿತಾಂಶ: ರಾಜ್ಯದ ವಿದ್ಯಾರ್ಥಿ ದೇಶಕ್ಕೆ ಪ್ರಥಮ

Posted By:

ಐಸಿಎಸ್‌ಇ, ಐಎಸ್‌ಸಿ 12ನೇ ಮತ್ತು 10ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಕೌನ್ಸಿಲ್‌ ಫಾರ್‌ ದ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌(ಐಸಿಎಸ್‌ಇ) ಫಲಿತಾಂಶವನ್ನು ಪ್ರಕಟ ಮಾಡಿದೆ.

ಈ ಬಾರಿಯ ಫಲಿತಾಂಶದಲ್ಲಿ 12ನೇ ತರಗತಿಯಲ್ಲಿ ಶೇಕಡಾ 96.47ರಷ್ಟು, 10ನೇ ತರಗತಿಯಲ್ಲಿ ಶೇ 98.53ರಷ್ಟು ಫಲಿತಾಂಶ ಲಭಿಸಿದ್ದು, ಈ ಪರೀಕ್ಷೆಯಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಕೋಲ್ಕತ್ತ ವಿದ್ಯಾರ್ಥಿನಿ ಪ್ರಥಮ ಸ್ಥಾನ

ಕೋಲ್ಕತ್ತದ ವಿದ್ಯಾರ್ಥಿನಿ ಅನನ್ಯಾ ಮಾತಿ 12ನೇ ತಗತಿಯಲ್ಲಿ ಶೇ 99.5ರಷ್ಟು ಅಂಕ ಗಳಿಸಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ಪ್ರಕಟ

ಪುಣೆಯ ಅಬ್ದುಲ್ಲಾ ಪಠಾಣ್‌ ಮತ್ತು ಬೆಂಗಳೂರಿನ ಅಶ್ವಿನ್ ರಾವ್‌ ಇಬ್ಬರೂ 10ನೇ ತರಗತಿಯಲ್ಲಿ ತಲಾ ಶೇ 99.4ರಷ್ಟು ಅಂಕಗಳಿಸಿ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

ರಾಜ್ಯದ ಅಶ್ವಿನ್ ರಾವ್ ಪ್ರಥಮ

ಈ ಬಾರಿಯ ಐಸಿಎಸ್ಇ ಮತ್ತು ಐಎಸ್ ಸಿ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. 10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ ಶೇಕಡಾ 99.8 ಹಾಗೂ ಶೇಕಡಾ 99.04 ಅಂಕ ಗಳಿಸಿದ್ದಾರೆ.

ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ಪ್ರಕಟ

ಬೆಂಗಳೂರಿನ ಸೈಂಟ್ ಪೌಲ್ ಇಂಗ್ಲಿಷ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಶ್ವಿನ್ ರಾವ್ ಮತ್ತು ಪುಣೆಯ ಹಚಿಂಗ್ಸ್ ಹೈಸ್ಕೂಲ್ ನ ಮುಸ್ಕಾನ್ ಅಬ್ದುಲ್ಲಾ ಪಠಾಣ್ ಶೇಕಡಾ 99.4 ಅಂಕ ಗಳಿಸುವ ಮೂಲಕ ದೇಶಕ್ಕೆ ಮೊದಲಿಗರಾಗಿದ್ದಾರೆ.

ಬೆಂಗಳೂರಿನ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆಯ ನಿಕೋಲ್ ಮೇರಿಯಲ್ ಜೋಸೆಫ್ 12ನೇ ತರಗತಿಯಲ್ಲಿ ಶೇಕಡಾ 98.5 ಅಂಕ ಪಡೆದು ಮೊದಲಿಗರಾಗಿದ್ದಾರೆ.

ಪರೀಕ್ಷೆ ಅಂಕಿ ಅಂಶ

10ನೇ ತರಗತಿಯಲ್ಲಿ ಶೇಕಡಾ 99.92ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದು, 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 99.68ರಷ್ಟಿದೆ.

12ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ಬಾಲಕಿಯರ ಸಂಖ್ಯೆ ಶೇಕಡಾ 99.71ರಷ್ಟಿದ್ದು, ಬಾಲಕರ ಸಂಖ್ಯೆ ಶೇಕಡಾ 98.35ರಷ್ಟಿದೆ.
ಐಸಿಎಸ್ಇ ಪರೀಕ್ಷೆಗಳನ್ನು 57 ಲಿಖಿತ ವಿಷಯಗಳಲ್ಲಿ ನಡೆಸಲಾಗಿತ್ತು. 22 ಭಾರತೀಯ ಭಾಷೆಗಳು ಮತ್ತು 9 ವಿದೇಶಿ ಭಾಷೆಗಳು ಇದ್ದವು.

ಐಎಸ್ ಸಿ ಪರೀಕ್ಷೆಯನ್ನು 50 ಲಿಖಿತ ವಿಷಯಗಳಲ್ಲಿ ಅಂದರೆ 16 ಭಾರತೀಯ ಮತ್ತು 5 ವಿದೇಶಿ ಭಾಷೆಗಳಲ್ಲಿ ನಡೆಸಲಾಗಿತ್ತು. ಈ ವರ್ಷ ಕರ್ನಾಟಕದಲ್ಲಿ 15,370 ವಿದ್ಯಾರ್ಥಿಗಳು 10ನೇ ತರಗತಿಯಿಂದ ಮತ್ತು 1,356 ವಿದ್ಯಾರ್ಥಿಗಳು 12ನೇ ತರಗತಿಯಿಂದ ಪರೀಕ್ಷೆ ಬರೆದಿದ್ದರು.

English summary
The Council for the Indian School Certificate Examinations (CISCE) has declared the ICSE 10th Result 2017 and ISC 12th Result 2017 on its official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia