ಮುಂದಿನ ಆರು ತಿಂಗಳು ಆಮೆಗತಿಯಲ್ಲಿ ಸಾಗಲಿದೆ ಐಟಿ ಉದ್ಯೋಗ

Posted By:

ವರ್ಷಾಂತ್ಯಕ್ಕೆ ಭಾರತದ ಐ.ಟಿ ಕಂಪನಿಗಳಲ್ಲಿ ಉದ್ಯೋಗ ನಷ್ಟ ಸಂಭವಿಸಲಿದ್ದು, ನೇಮಕ ಪ್ರಕ್ರಿಯೆಗಳು ಮಂದಗತಿಯಲ್ಲಿ ಸಾಗಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಮುಂದಿನ ಆರು ತಿಂಗಳಲ್ಲಿ ಐಟಿ ಕಂಪನಿ ಉದ್ಯೋಗದಲ್ಲಿ ವ್ಯತ್ಯಾಸವಾಗಲಿದೆ ಎಂಬುದು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ.

ಆಮೆಗತಿಯಲ್ಲಿ ಸಾಗಲಿದೆ ಐಟಿ ಉದ್ಯೋಗ

ಎಕ್ಸ್ ಪೆರಿಸ್ ಐಟಿ-ಮ್ಯಾನ್ ಪವರ್ ಗ್ರೂಪ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಭಾರತದ 500 ಐಟಿ ಕಂಪನಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಈ ಅಧ್ಯಯನದಲ್ಲಿ ಅಕ್ಟೋಬರ್ 2017 ರಿಂದ ಮಾರ್ಚ್ 2018 ರ ಅವಧಿಯಲ್ಲಿ ನೇಮಕ ಪ್ರಕ್ರಿಯೆ ನಿಧಾನಗೊಳ್ಳಲಿದೆ ಮತ್ತು ಉದ್ಯೋಗಾವಕಾಶಗಳು ಕಡಿಮೆಯಾಗಲಿವೆ ಎಂದು ಹೇಳಲಾಗಿದೆ.

ಆಟೊಮೇಷನ್ ಮತ್ತು ಡಿಜಿಟಲೀಕರಣದಿಂದಾಗಿ ಸಾಂಪ್ರದಾಯಿಕ ಉದ್ಯೋಗಗಳು ಪ್ರಾಮುಖ್ಯ ಕಳೆದುಕೊಳ್ಳಲಿವೆ. ಭಾರತೀಯ ಐಟಿ ವಲಯವು ಆರ್ಥಿಕ ವರ್ಷದ ಕಡೆಯಾರ್ಧದಲ್ಲಿ ತೀವ್ರ ಒತ್ತಡಕ್ಕೆ ಸಿಲುಕಲಿದೆ. ಉದ್ಯೋಗ ಕಡಿತದಂಥ ಪರಿಸ್ಥಿತಿ ಹೆಚ್ಚಲಿದೆ ಅಲ್ಲದೇ ಅಪ್ಡೇಟ್ ಆದವರಿಗಷ್ಟೇ ಉದ್ಯೋಗದಲ್ಲಿ ಉಳಿಗಾಲ ಎಂದು ಸಮೀಕ್ಷೆಯಲ್ಲಿ ಬಹುತೇಕರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ನ ಮಾಜಿ ಸಿಎಫ್ಒ ಟಿ.ಇ ಮೋಹನ್ ದಾಸ್ ಪೈ " ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಇಂಥದ್ದೆ ವರದಿ ಕಳೆದ ಏಪ್ರಿಲ್ ನಲ್ಲೂ ಬಂದಿತ್ತು, ಈ ವರ್ಷ ಸುಮಾರು ಎರಡು ಲಕ್ಷ ಉದ್ಯೋಗ ಕಡಿತವಾಗಲಿದೆ ಎಂದು ಹೇಳಲಾಗಿತ್ತು, ಆದರೆ ಅದ್ಯಾವುದು ಕೂಡ ನಡೆದಿಲ್ಲ. ಐಟಿ ಉದ್ಯೋಗದಲ್ಲಿ ಯಾವ ನಷ್ಟವು ಕಂಡುಬಂದಿಲ್ಲ" ಎಂದ ಹೇಳಿದ್ದಾರೆ.

ಒಟ್ಟಾರೆ 10 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಟಾಪ್ 5 ಕಂಪನಿಗಳನ್ನು ಗಮನಿಸುವುದಾದರೆ, ಉದ್ಯೋಗ ಕಡಿತವು ಅಲ್ಪ ಪ್ರಮಾಣದಲ್ಲಿದೆ. ಏಕೆಂದರೆ ಹಣಕಾಸು ವರ್ಷದ ಮೊದಲ ಅರ್ಧ ಭಾಗದಲ್ಲಿ ಹೊಸ ನೇಮಕಾತಿಗಳನ್ನು ಆ ಕಂಪನಿಗಳು ಮಾಡಿಕೊಂಡಿಲ್ಲ ಅಷ್ಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಐಟಿ ಕಂಪನಿಗಳೂ ಶೇ.6 ರಿಂದ 8 ರಷ್ಟು ಬೆಳವಣಿಗೆ ದಾಖಲಿಸಿದರೆ, ಹೆಚ್ಚಿನ ನೇಮಕಗಳು ನಡೆಯುತ್ತವೆ. ಎರಡನೇ ಅವಧಿಯಲ್ಲಿ 1 ಲಕ್ಷದಿಂದ 1.25 ಲಕ್ಷ ಉದ್ಯೋಗಾಕಾಂಕ್ಷಿಗಳು ಸೃಷ್ಟಿಯಾಗಲಿದ್ದಾರೆ ಎಂದು ಅವರ ಹೇಳಿದ್ದಾರೆ.

2017 -18 ನೇ ಸಾಲಿನ ಮೊದಲ ಅರ್ಧಭಾಗದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಇನ್ನೂ ಉತ್ತಮ ಉದ್ಯೋಗಗಳು ಲಭ್ಯ ಇವೆ. ಅನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ. ನೇಮಕ ಪ್ರಕ್ರಿಯೆ ಈ ವರ್ಷ ನಿಧಾನಗತಿಯಲ್ಲಿದೆ ಅನ್ನುವುದು ನಿಜ ಆದರೆ, ಪ್ರಸಕ್ತ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತಿಯಾರ್ಧದಲ್ಲಿ ಉದ್ಯೋಗಾವಕಾಶ ಕಡಿಮಿ ಇದೆ ಎಂದು ಹೇಳಲಾಗದು ಎಂದು ಪೈ ಹೇಳಿದ್ದಾರೆ.

English summary
Indian IT services companies would create fewer jobs over the next couple of quarters as more companies are focusing on shifting towards digital technologies, said a survey report released by human resource firm ManpowerGroup

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia