ಜಗತ್ತಿನಾದ್ಯಂತ 2.5 ಲಕ್ಷಕ್ಕೂ ಅಧಿಕ ಜನರು ಕೊರೊನಾ ವೈರಸ್ (ಕೊವಿಡ್19) ಸೋಂಕಿಗೆ ಒಳಗಾಗಿದ್ದಾರೆ ಅದರಲ್ಲಿ 11,000ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಇನ್ನು ಭಾರತದಲ್ಲಿ 235 ಜನ ಈ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಹಾಗಾಗಿ ಪ್ರಧಾನಿ ಮೋದಿ ಮಾರ್ಚ್ 22 ರಂದು ಜನತಾ ಕರ್ಫ್ಯು ಮಾಡುವಂತೆ ಸೂಚಿಸಿದ್ದಾರೆ.
ಕೊರೊನಾ ಭೀತಿಯಿಂದಾಗಿ ಸಿಬಿಎಸ್ಇ ಸಿಐಎಸ್ಸಿಇ ಪರೀಕ್ಷೆಗಳು ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಗಾಗಿ ಮಾರ್ಚ್ 22ರ ಜನತಾ ಕರ್ಫ್ಯೂ ದಿನದಂದು ವಿದ್ಯಾರ್ಥಿಗಳು ಈ ಕೆಲಸಗಳನ್ನು ಮಾಡಬಹುದು.
ಜನತಾ ಕರ್ಫ್ಯೂ ಎಂದರೇನು?:
ಜನತಾ ಕರ್ಫ್ಯೂ ಅಂದರೆ ನಮಗೆ ನಾವೇ ಬಂಧನ ಹಾಕಿಕೊಳ್ಳುವುದು ಎಂದರ್ಥ. ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ಗಂಟೆಯ ವರೆಗೆ ಸಾರ್ವಜನಿಕರು ಮನೆಯೊಳಗೇ ಇರುವಂತೆ ಹಾಗೂ ಮನೆಯಿಂದ ಹೊರಗೆ ಹೋಗದಿರಲು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಮಾರ್ಚ್ ೨೨ರ ಭಾನುವಾರ ಸಂಜೆ ೫ ಗಂಟೆಗೆ ಸಾರ್ವಜನಿಕರು ಮನೆಯಲ್ಲೇ ಚಪ್ಪಾಳೆ ತಟ್ಟುವ ಮೂಲಕ ಎಮರ್ಜೆನ್ಸಿ ಯಲ್ಲಿ ಕೂಡ ಸೇವೆ ಸಲ್ಲಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಮಾರ್ಚ್ 22ರಂದು ಜನತಾ ಕರ್ಫ್ಯೂ: ವಿದ್ಯಾರ್ಥಿಗಳು ಈ 5 ಪ್ರಮುಖ ಕೆಲಸಗಳನ್ನು ಮಾಡಿ
* ವಿದ್ಯಾರ್ಥಿಗಳು ಮೊದಲು ವೇಳಾಪಟ್ಟಿಯನ್ನು ತಯಾರಿಸಿ:
ಕೊರೊನಾ ಭೀತಿಯಿಂದಾಗಿ ಅನೇಕ ಬೋರ್ಡ್ ಪರೀಕ್ಷೆಗಳು ಸೇರಿದಂತೆ ಸಿಬಿಎಸ್ಇ ಮತ್ತು ಸಿಐಎಸ್ಸಿಇ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೇಗೆ ಅಧ್ಯಯನ ಮಾಡಬೇಕು ಎಂದು ಒಂದು ವೇಳಾಪಟ್ಟಿಯನ್ನು ರಚಿಸಿಕೊಳ್ಳಿ.
* ಆನ್‌ಲೈನ್ ಕಲಿಕೆಗೆ ಗಮನ ಇರಲಿ:
ಜನರೊಂದಿಗೆ ಬೆರೆತು ಕಲಿಕೆಯುವಿಕೆ ಈ ಕೊರೊನಾ ಸೋಂಕಿನ ಸಮಯದಲ್ಲಿ ಒಳಿತಲ್ಲ ಹಾಗಾಗಿ ಆನ್‌ಲೈನ್ ಕಲಿಕೆಯತ್ತ ಒತ್ತು ಕೊಡಿ. ಹಾಗೂ ಸ್ನೇಹಿತರೊಂದಿಗೆ ಈ ದಿನ ಯಾವುದೇ ರೀತಿಯ ಗುಂಪು ಓದು ಒಳಿತಲ್ಲ.
*ದಿನನಿತ್ಯ ಕೆಲಸಗಳಿಗೆ ಬಾಯ್ ಹೇಳಿ:
ಜನತಾ ಕರ್ಫ್ಯೂ ದಿನದಂದು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಳ್ಳಿ.ಹಾಗೆ ನಿಮ್ಮ ದಿನನಿತ್ಯದ ಕೆಲಸಗಳಿಗೆ ಒಂದು ದಿನದ ಮಟ್ಟಿಗೆ ಬಾಯ್ ಹೇಳಿ ನಿಮಗೆ ಅಗತ್ಯವಿರುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಬಗ್ಗೆ ಚಿಂತಿಸಿ.
ಭವಿಷ್ಯದ ಗುರಿಯ ಬಗ್ಗೆ ಆಲೋಚಿಸಿ:
ವಿದ್ಯಾರ್ಥಿ ಅಥವಾ ಉದ್ಯೋಗಿಗಳು ಜನತಾ ಕರ್ಫ್ಯೂ ದಿನದಂದು ಮನೆಯಲ್ಲೇ ಕುಳಿತು ನಿಮ್ಮ ಗುರಿಯ ಬಗ್ಗೆ ಆಲೋಚನೆ ಮಾಡಿ. ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಏನೆಲ್ಲಾ ಮಾಡಬೇಕು ಪ್ಲಾನ್ ಮಾಡಿ.
ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ:
ಕೊರೊನಾ ವೈರಸ್ ನಿಂದಾಗಿ ಹರಡುವ ಸೋಂಕಿನ ಬಗೆಗೆ ಈಗಿನ ಯುವಜನರು ಸಾಮಾಜಿಕ ತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ. ಇಂದಿನ ಯುವಜನತೆಗೆ ನಾಳೆಯ ದೇಶದ ಭದ್ರಬುನಾದಿಗಳು ಹಾಗಾಗಿ ನೀವು ಸಾಮಾಜಿಕ ಕಳಕಳಿಯಲ್ಲಿ ಪಾಲ್ಗೋಳ್ಳಿ.