ಇದೀಗ ವಿದ್ಯಾರ್ಥಿಗಳೆಲ್ಲಾ ಫಿಂಗರ್ ಕ್ರಾಸ್ ಮಾಡಿ ಜೆಇಇ ಅಡ್ವಾನ್ಸ್ಡ್ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ. ಜೂನ್ 10ಕ್ಕೆ ಜೆಇಇ ಅಡ್ವಾನ್ಸ್ಡ್ 2018 ಫಲಿತಾಂಶ ಪ್ರಕಟವಾಗಲಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಆಯೋಜಿಸಿರುವ ಐಐಟಿ ಕಾನ್ಪುರ್ ಈ ಫಲಿತಾಂಶ ಪ್ರಕಟಿಸಲಿದೆ.
ಈ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳೆಲ್ಲಾ ಜೂನ್ 10 ಆದಿತ್ಯವಾರದಂದು ಜೆಇಇ ಆಫೀಶಿಯಲ್ ವೆಬ್‌ಸೈಟ್‌ಗೆ www.jeeadv.ac.in ಭೇಟಿ ನೀಡಿ, ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ. ಈ ಬಾರಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಚೆಕ್ ಮಾಡುವುದು ಹೇಗೆ?
ಈ ಕೆಳಗಿನ ಸ್ಟೆಪ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಿ
- ಸ್ಟೆಪ್ 1: ಜೆಇಇ ಆಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ
- ಸ್ಟೆಪ್ 2: ರಿಜಿಸ್ಟರ್ ಸಂಖ್ಯೆ, ಜನನ ದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಈಮೇಲ್ ಐಡಿ ಎಂಟರ್ ಮಾಡಿ
- ಸ್ಟೆಪ್ 3: ಸೈನ್ ಇನ್ ಮಾಡಿ
- ಸ್ಟೆಪ್ 4: ಐಐಟಿ ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪರದೆ ಮೇಲೆ ಮೂಡುತ್ತದೆ
- ಸ್ಟೆಪ್ 5: ಐಐಟಿ ಜೆಇಇ ಅಡ್ವಾನ್ಸ್ಡ್ ಫಲಿತಾಂಶದ ಪ್ರಿಂಟೌಟ್ ತೆಗೆದು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ
ಪ್ರಮುಖ ದಿನಾಂಕಗಳು:
ಜೆಇಇ ಅಡ್ವಾನ್ಸ್ಡ್2018 ಪರೀಕ್ಷೆ | ಮೇ 20, 2018 |
ಜೆಇಇ ಅಡ್ವಾನ್ಸ್ಡ್ 2018 ಫಲಿತಾಂಶ | ಜೂನ್ 10,2018 |
ಜೆಇಇ ಅಡ್ವಾನ್ಸ್ಡ್ 2018 ರಾಂಕ್ ಕಾರ್ಡ್ | ಜೂನ್ 10, 2018 |
ಕೌನ್ಸಿಲಿಂಗ್ | ಜೂನ್ 19 ರಿಂದ ಜುಲೈ 25, 2018 |
ಇತ್ತೀಚಿಗಿನ ವರದಿ ಪ್ರಕಾರ, ಐಐಟಿ ಗೆ 11, 279 ಸೀಟುಗಳನ್ನ ಆಫರ್ ಮಾಡಲಾಗಿದೆ. 2017ರಲ್ಲಿ ಈ ಸೀಟುಗಳ ಸಂಖ್ಯೆಯನ್ನ 291 ಕ್ಕೆ ಹೆಚ್ಚಿಸಲಾಗಿತ್ತು. ಹೆಚ್‌ಆರ್‌ಡಿ ಮಿನಿಸ್ಟ್ರಿ ಇಲಾಖೆ ಅಡಿಯಲ್ಲಿ, ಮಹಿಳಾ ಅಭ್ಯರ್ಥಿಗಳಿಗಾಗಿ 200 ಸೀಟುಗಳನ್ನ ಮೀಸಲಿಡಲಾಗಿದೆ.
For Quick Alerts
For Daily Alerts