ಜೆಇಇ ಪರೀಕ್ಷೆ: ಕನ್ನಡದಲ್ಲಿ ಪರೀಕ್ಷೆ ನಡೆಸಲು ಒತ್ತಾಯ, ಮಧುಮೇಹಿಗಳಿಗೆ ವಿನಾಯಿತಿ

ನೀಟ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ನಡೆಸುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಜೆಇಇ ಪರೀಕ್ಷೆಯನ್ನು ಕನ್ನಡದಲ್ಲಿ ನೀಡಲಿ ಎನ್ನುವುದು ಪರೀಕ್ಷಾರ್ಥಿಗಳ ಆಗ್ರಹ.

ಐಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಪೂರ್ವಭಾವಿಯಾಗಿ ನಡೆಸುವ ಮುಖ್ಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯು ಏಪ್ರಿಲ್ 8 ರಂದು ನಡೆಯಲಿದ್ದು, ಈ ಬಾರಿಯ ಜೆಇಇ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಜೆಇಇ-2018: ಏಪ್ರಿಲ್ 8ಕ್ಕೆ ದಿನಾಂಕ ಫಿಕ್ಸ್ಜೆಇಇ-2018: ಏಪ್ರಿಲ್ 8ಕ್ಕೆ ದಿನಾಂಕ ಫಿಕ್ಸ್

ಸದ್ಯ ಜೆಇಇ ಪರೀಕ್ಷೆಗಳು ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ನಡೆಸಲಾಗುತ್ತಿದೆ. ಜೆಇಇ ಪರೀಕ್ಷೆಯನ್ನು ಆಯೋಜಿಸುವ ಸಿಬಿಎಸ್ಇ ನೀಟ್ ಪರೀಕ್ಷೆಯನ್ನು ಆಯೋಜಿಸುತ್ತದೆ. ನೀಟ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ನಡೆಸುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಜೆಇಇ ಪರೀಕ್ಷೆಯನ್ನು ಕನ್ನಡದಲ್ಲಿ ನೀಡಲಿ ಎನ್ನುವುದು ಪರೀಕ್ಷಾರ್ಥಿಗಳ ಆಗ್ರಹ.

ಜೆಇಇ- ಮೇನ್ಸ್: ರಾಜ್ಯದ 17 ಜಿಲ್ಲಾ ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷೆಜೆಇಇ- ಮೇನ್ಸ್: ರಾಜ್ಯದ 17 ಜಿಲ್ಲಾ ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷೆ

ಜೆಇಇ ಪರೀಕ್ಷೆ: ಕನ್ನಡದಲ್ಲಿ ಪರೀಕ್ಷೆ ನಡೆಸಲು ಒತ್ತಾಯ

ಗುಜರಾತಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಚಿವರನ್ನು ಭೇಟಿ ಮಾಡಲು ಯೋಜನೆ ರೂಪಿಸುತ್ತಿದೆ.

ಈ ಕುರಿತಂತೆ ಕನ್ನಡದಲ್ಲಿ ಪ್ರಶ್ನೆಪತ್ರಿಕೆಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಕನ್ನಡದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಿಸೆಂಬರ್ 17 ರಂದು ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

2018 ರ ಜೆಇಇ ಪರೀಕ್ಷೆಯು ಏಪ್ರಿಲ್ 8 ರಂದು ದೇಶಾದ್ಯಂತ ನಡೆಯಲಿದ್ದು, ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಆನ್ಲೈನ್ ಮತ್ತು ಆಫ್ ಲೈನ್ ಎರಡು ಮಾದರಿಯಲ್ಲಿ ಪರೀಕ್ಷೆಗಳು ನಡೆಯಲಿದ್ದು. ಜನವರಿ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-01-2018
  • ಪ್ರವೇಶ ಪತ್ರ ಪ್ರಕಟಣೆ: ಮಾರ್ಚ್ 2ನೇ ವಾರ
  • ಆಫ್ ಲೈನ್ ಪರೀಕ್ಷೆ: ಏಪ್ರಿಲ್ 08
  • ಆನ್ಲೈನ್ ಪರೀಕ್ಷೆ: ಏಪ್ರಿಲ್ 15, 16
  • ಕೀ ಉತ್ತರ ಬಿಡುಗಡೆ: ಏಪ್ರಿಲ್. 24-27
  • ಫಲಿತಾಂಶ ಬಿಡುಗಡೆ: ಏಪ್ರಿಲ್ 30

ಮಧುಮೇಹಿ ಅಭ್ಯರ್ಥಿಗಳಿಗೆ ವಿನಾಯಿತಿ

ಈ ಬಾರಿ ಜೆಇಇ ಪರೀಕ್ಷೆ ಬರೆಯುವ ಮಧುಮೇಹಿ ಅಭ್ಯರ್ಥಿಗಳಿಗೆ ಕೆಲವೊಂದು ವಿನಾಯಿತಿ ಸಿಗಲಿದೆ. ಪರೀಕ್ಷಾ ಕೊಠಡಿಗೆ ಬಾಳೆಹಣ್ಣು, ಸೇಬು, ಕಿತ್ತಳೆ ಮತ್ತು ನೀರನ್ನು ತರಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಾದ, ಚಾಕಲೇಟ್, ಬಿಸ್ಕಟ್, ಕ್ಯಾಂಡಿ ಮತ್ತು ಇನ್ನಿತರ ತಿಂಡಿಗಳನ್ನು ತರುವಂತಿಲ್ಲ.

For Quick Alerts
ALLOW NOTIFICATIONS  
For Daily Alerts

English summary
The Joint Entrance Examination (JEE) mains will be held on April 8, Karnataka candidates have been asked to allow JEE examination in Kannada language.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X