JEE Main 2021 Result Released : ಜೆಇಇ ಸೆಶನ್ 3ರ ಪರೀಕ್ಷಾ ಫಲಿತಾಂಶ ಪ್ರಕಟ , 17 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೆಇಇ ಮುಖ್ಯ 3ನೇ ಸೆಶನ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದೆ. ಈ ಭಾರಿ ಪರೀಕ್ಷೆಯಲ್ಲಿ 17 ವಿದ್ಯಾರ್ಥಿಗಳು ಪೂರ್ಣ ಅಂಗಳನ್ನು ಪಡೆದಿದ್ದಾರೆ.

 

ಜೆಇಇ ಮುಖ್ಯ ಸೆಶನ್ 3ರ ಪರೀಕ್ಷೆಯನ್ನು ಜುಲೈ 20 ರಿಂದ 25ರ ವರೆಗೆ ಆನ್‌ಲೈನ್ ಮೂಲಕ ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಇದೀಗ ಫಲಿತಾಂಶವನ್ನು ನೋಡಿಕೊಳ್ಳಬಹುದು.

ಜೆಇಇ 3ನೇ ಸೆಶನ್ ಫಲಿತಾಂಶ ಪ್ರಕಟ : 17 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

ಜನವರಿಯಲ್ಲಿ ನಡೆದ ಜೆಇಇ ಮುಖ್ಯ ಪರೀಕ್ಷೆಯಲ್ಲಿ 9 ವಿದ್ಯಾರ್ಥಿಗಳು ಮತ್ತು ಫೆಬ್ರವರಿ ಸೆಶನ್ ನಲ್ಲಿ 11 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ. ಸೆಶನ್ 3ರ ಜುಲೈ ಪರೀಕ್ಷೆಯಲ್ಲಿ ಒಟ್ಟು 17 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ದಾಖಲಿಸಿದ್ದಾರೆ.

ಜೆಇಇ ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು.

 

ಜುಲೈ ಜೆಇಇ ಮುಖ್ಯ ಪರೀಕ್ಷೆಗೆ ಪೇಪರ್-Iಗೆ ಒಟ್ಟು 7.09 ಲಕ್ಷ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ದೇಶದಾದ್ಯಂತ ಒಟ್ಟು 334 ನಗರಗಳಲ್ಲಿ 915 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯು ಸುಗಮ ಮತ್ತು ನ್ಯಾಯಯುತವಾಗಿ ನಡೆಸಲು ಒಟ್ಟು 707 ವೀಕ್ಷಕರು, 293 ನಗರ-ಸಂಯೋಜಕರು, 19 ಪ್ರಾದೇಶಿಕ ಸಂಯೋಜಕರು, 06 ವಿಶೇಷ ಸಂಯೋಜಕರು ಮತ್ತು 02 ರಾಷ್ಟ್ರೀಯ ಸಂಯೋಜಕರನ್ನು ಈ ಕೇಂದ್ರಗಳಲ್ಲಿ ನಿಯೋಜಿಸಲಾಗಿತ್ತು.

ಎನ್‌ಟಿಎ ಜೆಇಇ ಮುಖ್ಯ ಪರೀಕ್ಷೆ 2021 ಪೇಪರ್ 1ರ ರಾಜ್ಯವಾರು, ಲಿಂಗವಾರು ಮತ್ತು ವರ್ಗವಾರು ಟಾಪರ್‌ಗಳು ಮತ್ತು ಅವರ ಅಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

"ಜೆಇಇ (ಮುಖ್ಯ) -2021 ಪರೀಕ್ಷೆಯ ಎಲ್ಲಾ ನಾಲ್ಕು ಸೆಶನ್‌ಗಳು ಮುಗಿದ ನಂತರ ಅಭ್ಯರ್ಥಿಗಳ ಶ್ರೇಣಿಗಳನ್ನು ಈಗಾಗಲೇ ಪ್ರಕಟ ಮಾಡಲಾದ ನೀತಿಗೆ ಅನುಗುಣವಾಗಿ ಅತ್ಯುತ್ತಮವಾದವುಗಳನ್ನು ಪರಿಗಣಿಸಿ ಬಿಡುಗಡೆ ಮಾಡಲಾಗುತ್ತದೆ" ಎಂದು ಎನ್ಟಿಎ ಹೇಳಿದೆ.

17 ಟಾಪರ್‌ಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು :

ಜೆಇಇ ಮುಖ್ಯ ಪರೀಕ್ಷೆ 2021ರ ಫಲಿತಾಂಶದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪೂರ್ಣ ಅಂಕ ಪಡೆದಿದ್ದಾರೆ. ಉತ್ತರ ಪ್ರದೇಶದಿಂದ ಪಾಲ್ ಅಗರ್ವಾಲ್ ಮತ್ತು ತೆಲಂಗಾಣದ ಕೊಮ್ಮಾ ಶರಣಯ್ಯ ಶೇಕಡಾವಾರು 100 ಅಂಕ ಗಳಿಸಿದ 17 ಅಭ್ಯರ್ಥಿಗಳಲ್ಲಿ ಇವರೂ ಕೂಡ ಸೇರಿದ್ದಾರೆ.

ಜೆಇಇ ಸೆಶನ್ 4ರ ಪರೀಕ್ಷೆ :

ಜೆಇಇ ಮುಖ್ಯ ಸೆಶನ್ 4ರ ಪರೀಕ್ಷೆಯನ್ನು ಆಗಸ್ಟ್ 26, 27, 31 ಮತ್ತು ಸೆಪ್ಟೆಂಬರ್ 1 ಹಾಗೂ 2ರಂದು ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಜೆಇಇ ಮುಖ್ಯ ಫಲಿತಾಂಶದ ಆಧಾರದ ಮೇಲೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು (ಐಐಐಟಿಗಳು), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್ಐಟಿಗಳು) ಮತ್ತು ಇತರ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳು (ಜಿಎಫ್‌ಟಿಐ) ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನು ನಾಲ್ಕು ಸೆಶನ್ ಗಳಲ್ಲಿ ನಡೆಸಲಾಗುತ್ತಿದ್ದು, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತಿದೆ.

ಜೆಇಇ ಮೈನ್ಸ್ ಸೆಶನ್ 3ರ ಫಲಿತಾಂಶ ವೀಕ್ಷಿಸುವುದು ಹೇಗೆ ? :

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://jeemain.nta.nic.in/ ಗೆ ಭೇಟಿ ನೀಡಿ.
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಲಭ್ಯವಿರುವ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಕೇಳಲಾಗಿರುವ ನಿಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಭರ್ತಿ ಮಾಡಿ
ಸ್ಟೆಪ್ 4: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
JEE main examination 2021 results released. Here is how to check results.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X