ಜೆ ಇ ಇ ಮುಖ್ಯ ಪರೀಕ್ಷೆ ಫಲಿತಾಂಶ ಶೀಘ್ರದಲ್ಲಿ

Posted By:

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನಡೆಸಿದ್ದ ಜೆಇಇ ಆನ್-ಲೈನ್ ಮತ್ತು ಆಫ್ಲೈನ್ ಮುಖ್ಯ ಪರೀಕ್ಷೆಗಳ ಫಲಿತಾಂಶವು ಶೀಘ್ರದಲ್ಲೇ ಪ್ರಕಟವಾಗಲಿದೆ.

ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ನಡೆಯುವ ಜೆಇಇ ಪರೀಕ್ಷೆಯನ್ನು ದೇಶದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ತೆಗೆದುಕೊಂಡಿದ್ದರು.

ಜೆಇಇ ಪರೀಕ್ಷಾ ದಿನಾಂಕ

ಏಪ್ರಿಲ್ ಎರಡನೇ ತಾರೀಖು ಆಫ್ಲೈನ್ ಮೂಲಕ ಲಿಖಿತ ಪರೀಕ್ಷೆ ನಡೆದಿದ್ದರೆ, ಏಪ್ರಿಲ್ 8 ಮತ್ತು 9 ನೇ ತಾರೀಖಿನಂದು ಆನ್-ಲೈನ್ ನಲ್ಲಿ ಮುಖ್ಯ ಪರೀಕ್ಷೆಗಳು ನಡೆದಿದ್ದವು.

ಪರೀಕ್ಷೆ ಫಲಿತಾಂಶ ಶೀಘ್ರದಲ್ಲಿ

ಫಲಿತಾಂಶ ನೋಡುವ ವಿಧಾನ

  • ಜೆಇಇ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • 'ಜೆಇಇ 2017 ರಿಸಲ್ಟ್' ಬಟನ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ವಿವರ ದಾಖಲಿಸಿ
  • ರಿಸಲ್ಟ್ ಪುಟ ತೆರೆದುಕೊಳ್ಳುವುದು

ಪರೀಕ್ಷೆ ಕುರಿತು ತಜ್ಞರ ಅಭಿಪ್ರಾಯ

ಈ ಬಾರಿಯ ಜೆಇಇ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸವಾಲಿನ ಪರೀಕ್ಷೆಯೇ ಆಗಿತ್ತು ಎನ್ನುವುದು ತಜ್ಞರೊಬ್ಬರ ಅಭಿಪ್ರಾಯ. ಆನ್-ಲೈನ್ ಪರೀಕ್ಷೆಗೆ ಹೋಲಿಸಿದರೆ ಲಿಖಿತ ಪರೀಕ್ಷೆಯು ಸುಲಭವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತರಿಸಲು ಅನುಕೂಲವಾಗಿತ್ತು. ಸದಾ ಓದಿನಲ್ಲಿ ಮತ್ತು ಪ್ರಶ್ನೋತ್ತರಗಳಲ್ಲಿ ತಲ್ಲಿನರಾಗಿರುವವರಿಗೆ ಈ ಬಾರಿಯ ಪರೀಕ್ಷೆಗಳು ಸುಲಭವಾಗಿರುತ್ತವೆ ಅಲ್ಲದೇ ಜೆಇಇ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುವವರು ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರಾಯಾಸವಾಗಿ ಬರೆಯಬಲ್ಲವರಾಗಿರುತ್ತಾರೆ ಎನ್ನುವುದು ತಜ್ಞರ ಅನಿಸಿಕೆ.

ಅಭ್ಯರ್ಥಿಗಳ ಆಯ್ಕೆ

ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಅಭ್ಯರ್ಥಿಯು ಬೋರ್ಡ್ ಪರೀಕ್ಷೆಗಳಲ್ಲಿ ಶೇ.75 ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು. ದೇಶಾದ್ಯಂತ 24,000 ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರವೇಶ ಸಿಗಲಿದೆ. ಆಯ್ಕೆಯಾದವರು ಪ್ರತಿಷ್ಟಿತ ಎನ್ಐಟಿ/ಐಐಟಿ/ಡಿಟಿಯು ಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಜೆಇಇ ರ್ಯಾಂಕಿಂಗ್ ಬಂದ ವಿದ್ಯಾರ್ಥಿಗಳಿಗೆ ದೇಶದ 9 ರಾಜ್ಯಗಳಲ್ಲಿರುವ ತಾಂತ್ರಿಕ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಅವಕಾಶವಿದೆ. (ಹರ್ಯಾಣ, ಉತ್ತರಖಾಂಡ, ನಾಗಾಲ್ಯಾಂಡ್, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಪಂಜಾಬ್, ರಾಜಸ್ಥಾನ)

ಪ್ರಮುಖ ದಿನಾಂಕ

ಜೆಇಇ ಫಲಿತಾಂಶವನ್ನು ಏಪ್ರಿಲ್ 27, 2017 ರಂದು ನಿರೀಕ್ಷಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ jeemain.nic.in ಗಮನಿಸಿ

English summary
JEE Main offline and online mode was successfully conducted by The Central Board of Secondary Education (CBSE). The results will be declared on its official website soon.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia