
ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ ಮೈನ್ಸ್ ಸೆಶನ್ 4ರ ಫಲಿತಾಂಶ ಪ್ರಕಟ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದವರಲ್ಲಿ 44 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಪಡೆದಿದ್ದಾರೆ ಹಾಗೂ 18 ವಿದ್ಯಾರ್ಥಿಗಳು ಟಾಪ್ ರಾಂಕ್ ಪಡೆದಿದ್ದಾರೆ.

ಜೆಇಇ ಮುಖ್ಯ ಸೆಶನ್ 4ರ ಫಲಿತಾಂಶದಲ್ಲಿ ಗೌರಬ್ ದಾಸ್ (ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪನೀಶ್ (ಆಂಧ್ರಪ್ರದೇಶ), ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಮತ್ತು ಮೃದುಲ್ ಅಗರ್ವಾಲ್ (ರಾಜಸ್ಥಾನ), ರುಚಿರ್ ಬನ್ಸಾಲ್ ಮತ್ತು ಕಾವ್ಯಾ ಚೋಪ್ರಾ (ದೆಹಲಿ), ಅಮಯ್ಯ ಸಿಂಘಾಲ್ ಮತ್ತು ಪಾಲ್ ಅಗರ್ವಾಲ್ (ಉತ್ತರ ಪ್ರದೇಶ), ಕೊಮ್ಮಾ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ (ತೆಲಂಗಾಣ), ಪಸಾಲ ವೀರ ಶಿವ, ಕರ್ಣಂ ಲೋಕೇಶ್, ಮತ್ತು ಕಾಂಚನಪಲ್ಲಿ ರಾಹುಲ್ ನಾಯ್ಡು (ಆಂಧ್ರ ಪ್ರದೇಶ), ಪುಲ್ಕಿತ್ ಗೋಯಲ್ (ಪಂಜಾಬ್) ಮತ್ತು ಗುರಮೃತ್ ಸಿಂಗ್ ( ಚಂಡೀಗಢ) ಮೊದಲ ಸ್ಥಾನ ಪಡೆದವರಾಗಿದ್ದಾರೆ.
ಜೆಇಇ ಮುಖ್ಯ 2021 ರ ಸೆಶನ್ ವೈಸ್ ಪ್ರಥಮ ರ್ಯಾಂಕ್ ಪಡೆದ ಅಭ್ಯರ್ಥಿಗಳ ಪಟ್ಟಿ:
ಹೆಸರು ರಾಜ್ಯ ಸೆಶನ್
ವೈಭವ್ ವಿಶಾಲ್ ಬಿಹಾರ 4
ಅಥರ್ವ ಅಭಿಜಿತ್ ತಂಬತ್ ಮಹಾರಾಷ್ಟ್ರ 4
ಪುಲ್ಕಿತ್ ಗೋಯಲ್ ಪಂಜಾಬ್ 4
ಸಿದ್ಧಾಂತ್ ಮುಖರ್ಜಿ ರಾಜಸ್ಥಾನ 4
ಕೊಮ್ಮ ಶರಣ್ಯ ತೆಲಂಗಾಣ 4
ದುಗ್ಗಿನೇನಿ ವೆಂಕಟ ಪನೀಶ್ ಆಂಧ್ರ ಪ್ರದೇಶ 3
ಕಾಂಚನಪಲ್ಲಿ ರಾಹುಲ್ ನಾಯ್ಡು ಆಂಧ್ರ ಪ್ರದೇಶ 3
ಕರಣಂ ಲೋಕೇಶ್ ಆಂಧ್ರ ಪ್ರದೇಶ 3
ಪಸಾಲ ವೀರ ಶಿವ ಆಂಧ್ರ ಪ್ರದೇಶ 3
ರುಚಿರ್ ಬನ್ಸಾಲ್ ದೆಹಲಿ ಎನ್‌ಸಿಟಿ 3
ಗೌರಬ್ ದಾಸ್ ಕರ್ನಾಟಕ 3
ಅಂಶುಲ್ ವರ್ಮಾ ರಾಜಸ್ಥಾನ 3
ಜೋಸ್ಯುಲ ವೆಂಕಟ ಆದಿತ್ಯ ತೆಲಂಗಾಣ 3
ಅಮಯ್ಯ ಸಿಂಘಾಲ್ ಉತ್ತರ ಪ್ರದೇಶ 3
ಪಾಲ್ ಅಗರ್ವಾಲ್ ಉತ್ತರ ಪ್ರದೇಶ 3
ಕಾವ್ಯಾ ಚೋಪ್ರಾ ದೆಹಲಿ (ಎನ್‌ಸಿಟಿ) 2
ಮೃದುಲ್ ಅಗರ್ವಾಲ್ ರಾಜಸ್ಥಾನ 2
ಗುರಮೃತ್ ಸಿಂಗ್ ಚಂಡೀಗಢ 1
ಪ್ರಸಕ್ತ ಸಾಲಿನಿಂದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) -ಮೈನ್ಸ್ ಅನ್ನು ವಿದ್ಯಾರ್ಥಿಗಳಿಗೆ ಅವರ ಅಂಕಗಳನ್ನು ಸುಧಾರಿಸುವ ಅವಕಾಶವನ್ನು ಒದಗಿಸಲು ವರ್ಷಕ್ಕೆ ನಾಲ್ಕು ಬಾರಿ ನಡೆಸಲಾಗಿದೆ. ಮೊದಲ ಹಂತವನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತವನ್ನು ಮಾರ್ಚ್‌ನಲ್ಲಿ ನಡೆಸಲಾಯಿತು. ಮುಂದಿನ ಹಂತಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿಪಡಿಸಲಾಗಿತ್ತು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಯಿತು.
ಜುಲೈ 20 ರಿಂದ 25ರ ವರೆಗೆ ಮೂರನೇ ಆವೃತ್ತಿ ಪರೀಕ್ಷೆ ನಡೆಯಿತು ಮತ್ತು ನಾಲ್ಕನೇ ಆವೃತ್ತಿಯನ್ನು ಆಗಸ್ಟ್ 26 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಸಲಾಯಿತು. ಈಗಾಗಲೇ ಸಿದ್ಧಪಡಿಸಿದ ನೀತಿಗೆ ಅನುಗುಣವಾಗಿ ನಾಲ್ಕು NTA ಸ್ಕೋರ್‌ಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಶ್ರೇಣಿಯನ್ನು ಬಿಡುಗಡೆ ಮಾಡಲಾಗಿದೆ.
ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಯಿತು. ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮೆ, ಬೆಂಗಾಲಿ,ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಪರೀಕ್ಷೆ ನಡೆಯಿತು.
ಈ ವರ್ಷ ಜೆಇಇ ಮೇನ್ 2021 ಪರೀಕ್ಷೆಯನ್ನು ನಾಲ್ಕು ಬಾರಿ ನಡೆಸಲಾಗಿದ್ದು, ಅಭ್ಯರ್ಥಿಗಳಿಗೆ ನಾಲ್ಕು ಬಾರಿ ಅಥವಾ ಅವರು ಇಚ್ಛಿಸಿದಷ್ಟು ಅವಕಾಶಗಳಿಗೆ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಅಲ್ಲದೇ ಜೆಇಇ-ಮುಖ್ಯ ನಾಲ್ಕು ಆವೃತ್ತಿಗಳಲ್ಲಿ 9.34 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಜೆಇಇ ಪ್ರಮುಖ ಸೆಶನ್ 4ರ ಫಲಿತಾಂಶ ವೀಕ್ಷಿಸಬಹುದಾದ ವೆಬ್‌ಸೈಟ್ ಗಳು :
jeemain.nta.nic.in result 2021
ntaresults.nic.in result 2021
nta.ac.in result 2021
ಜೆಇಇ ಪ್ರಮುಖ ಸೆಶನ್ 4ರ ಫಲಿತಾಂಶ ವೀಕ್ಷಿಸುವುದು ಹೇಗೆ ? :
ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://jeemain.nta.nic.in/ ಗೆ ಭೇಟಿ ನೀಡಿ.
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಲಭ್ಯವಿರುವ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಕೇಳಲಾಗಿರುವ ನಿಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಭರ್ತಿ ಮಾಡಿ
ಸ್ಟೆಪ್ 4: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ