JEE Mains Admit Card 2022 : ಜೆಇಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ಜಂಟಿ ಪ್ರವೇಶ ಪರೀಕ್ಷೆ ಮುಖ್ಯ (ಜೆಇಇ ಮುಖ್ಯ) ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) jeemain.nta.nic.in ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಜೆಇಇ ಮುಖ್ಯ 2022 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಜೆಇಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಔಟ್

ಜೆಇಇ ಮುಖ್ಯ ಪರೀಕ್ಷೆ 2022 ರ ಜೂನ್ ಸೆಷನ್ 1ರ ಪರೀಕ್ಷೆಯು ಜೂನ್ 23 ರಿಂದ ಜೂನ್ 29ರ ವರೆಗೆ ದೇಶದ 501 ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಭಾರತದ ಹೊರವಲಯದ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಜೆಇಇ ಮುಖ್ಯ ಪ್ರವೇಶ ಪತ್ರ 2022ರಲ್ಲಿ ಪರೀಕ್ಷೆಯ ಕೇಂದ್ರದ ಹೆಸರು, ವಿಳಾಸ, ಪರೀಕ್ಷೆಯ ದಿನದ ಸೂಚನೆಗಳಂತಹ ಮಾಹಿತಿಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ ತಕ್ಷಣ ಎಲ್ಲಾ ವಿವರಗಳನ್ನು ಓದಬೇಕು ಮತ್ತು ಯಾವುದಾದರೂ ವ್ಯತ್ಯಾಸಗಳಿದ್ದಲ್ಲಿ ವರದಿ ಮಾಡಬೇಕು.

ಜೆಇಇ ಮುಖ್ಯ ಪ್ರವೇಶ ಪತ್ರ ಜೊತೆಗೆ ಸ್ವಯಂ ಘೋಷಣೆ (ಉಸ್ತುವಾರಿ) ಫಾರ್ಮ್ ಸಹ ನೀಡಲಾಗುತ್ತದೆ. ಜೆಇಇ ಮುಖ್ಯ ಸ್ವಯಂ ಘೋಷಣೆಯ ಅಂಡರ್‌ಟೇಕಿಂಗ್ ಫಾರ್ಮ್‌ನಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಅವರ ಇತ್ತೀಚಿನ ಪ್ರಯಾಣದ ಇತಿಹಾಸ ಮತ್ತು ಆರೋಗ್ಯ ಸ್ಥಿತಿಯನ್ನು ನಮೂದಿಸಲು ಕೇಳಲಾಗುತ್ತದೆ. ಜೆಇಇ ಮುಖ್ಯ 2022ರ ಸ್ವಯಂ ಘೋಷಣೆಯ ಜವಾಬ್ದಾರಿಯನ್ನು ಪರೀಕ್ಷಾ ಕೇಂದ್ರವನ್ನು ತಲುಪುವ ಮೊದಲು ಮುಂಚಿತವಾಗಿ ಭರ್ತಿ ಮಾಡಬೇಕು. ಕಳೆದೆರಡು ವರ್ಷಗಳಲ್ಲಿ ಕಳೆದ 14 ದಿನಗಳಲ್ಲಿ ಕೆಮ್ಮು, ಜ್ವರ, ಉಸಿರುಗಟ್ಟುವಿಕೆ, ಗಂಟಲು ನೋವು ಅಥವಾ ಸ್ರವಿಸುವ ಮೂಗು, ದೇಹದ ನೋವು ಮತ್ತು ಯಾವುದೇ ಜ್ವರ ತರಹದ ಲಕ್ಷಣಗಳನ್ನು ಹೊಂದಿದ್ದರೆ ನಮೂದಿಸಲು ಕೇಳಲಾಗಿತ್ತು.

ಜೆಇಇ ಮುಖ್ಯ 2022 BE, BTech ಪತ್ರಿಕೆಗಳನ್ನು ಪೇಪರ್ 1 ರಂತೆ ನಡೆಸಲಾಗುವುದು, ಆದರೆ BArch ಮತ್ತು BPlanning ಪತ್ರಿಕೆಗಳನ್ನು ಪ್ರತ್ಯೇಕವಾಗಿ ಪೇಪರ್ 2A ಮತ್ತು ಪೇಪರ್ 2B ನಂತೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ನೋಡಿ.

ಜೆಇಇ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಔಟ್

JEE ಮುಖ್ಯ ಪರೀಕ್ಷೆ 2022 ಸೆಷನ್ 1 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ :

ಸ್ಟೆಪ್ 1: ಅಭ್ಯರ್ಥಿಗಳು ಮೊದಲು NTA ಅಧಿಕೃತ ವೆಬ್‌ಸೈಟ್‌ jeemain.nta.nic.in ಗೆ ಭೇಟಿ ನೀಡಿ

ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಪ್ರವೇಶ ಪತ್ರ ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ

ಸ್ಟೆಪ್ 3: ಅಭ್ಯರ್ಥಿಗಳು ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅಥವಾ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಮಾಡಿ

ಸ್ಟೆಪ್ 4: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಪ್ರಿಂಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳು ನೇರವಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
NTA released jee main 2022 admit card. Here is how to download.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X