ಜೆಇಇ ರ್ಯಾಂಕಿಂಗ್: ಕಾಂಪೌಂಡರ್ ಪುತ್ರ ದೇಶಕ್ಕೆ ಪ್ರಥಮ

Posted By:

ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮುಖ್ಯ) ಫಲಿತಾಂಶ ಪ್ರಕಟವಾಗಿದ್ದು, ರಾಜಸ್ತಾನದ ಉದಯಪುರದ ವಿದ್ಯಾರ್ಥಿ ಕಲ್ಪಿತ್‌ ವೀರ್‍ವಾಲ್‌ ಶೇ.100 ಅಂಕಗಳಿಸುವ ಮೂಲಕ ಹೊಸ ದಾಖಲೆಯೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಎಂಡಿಎಸ್ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಲ್ಪಿತ್ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಜೆಇಇ ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

360 ಕ್ಕೆ 360

ಜೆಇಇ ಪರೀಕ್ಷೆಯಲ್ಲಿ 360 ಕ್ಕೆ 360 ಅಂಕಗಳಿಸುವ ಮೂಲಕ ಶೇ.100 ಅಂಕಗಳನ್ನು ಪಡೆದು ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ ಎರಡೂ ವರ್ಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಜಿಇಇ ಪರೀಕ್ಷೆ ಇತಿಹಾಸದಲ್ಲೇ ಇದು ಮೊದಲ ಸಾಧನೆಯಾಗಿದೆ.

ಕಾಂಪೌಂಡರ್ ಪುತ್ರ ದೇಶಕ್ಕೆ ಪ್ರಥಮ

ತಂದೆ ಸರ್ಕಾರಿ ಆಸ್ಪತ್ರೆ ಕಾಂಪೌಂಡರ್

ಕಲ್ಪಿತ್ ತಂದೆ ಪುಷ್ಕರ್ ಲಾಲ್ ವೀರ್ವಾಲ್ ಉದಯ್ ಪುರದ ಮಹಾರಾಣ ಭೂಪಾಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ತಾಯಿ ಪುಷ್ಪ ವೀರ್ವಾಲ್ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಕಲ್ಪಿತ್ ಹಿರಿಯ ಸಹೋದರ ಎಐಐಎಂಎಸ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

ಆತ್ಮವಿಶ್ವಾಸವೇ ಯಶಸ್ಸಿಗೆ ಕಾರಣ

'ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸವೇ ನನ್ನ ಯಶಸ್ಸಿಗೆ ಕಾರಣ' ಎಂದು 17 ವರ್ಷದ ಕಲ್ಪಿತ್ ವೀರ್ವಾಲ್ ತಿಳಿಸಿದ್ದಾರೆ. ಜಿಇಇ ಮುಖ್ಯ ಪರೀಕ್ಷೆಯ ನಂತರ ಜೆಇಇ ಅಡ್ವಾನ್ಸ್ ಮುಂದಿನ ಗುರಿಯಾಗಿದ್ದು ಅದರ ಕಡೆ ಹೆಚ್ಚು ಗಮನ ಹರಿಸುವುದಾಗಿ ಅವರು ಹೇಳಿದ್ದಾರೆ.

'ಇದುವರೆಗೂ ಯಾವ ತರಗತಿಯನ್ನು ತಪ್ಪಿಸಿಲ್ಲ ಮತ್ತು ನನಗೆ ಯಾವುದೇ ಗೊಂದಲಗಳಿದ್ದರು ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸುತ್ತಿದ್ದೆ ಅಲ್ಲದೇ ದಿನಕ್ಕೆ 5 ರಿಂದ 6 ಗಂಟೆಗಳವರೆಗೆ ಅಭ್ಯಾಸ ಮಾಡುತ್ತಿದ್ದೆ. ಇದರಿಂದಾಗಿ ನನಗೆ ಜೆಇಇನಲ್ಲಿ ಇಷ್ಟು ಅಂಕಗಳಿಸಲು ಸಾಧ್ಯವಾಗಿದೆ' ಎನ್ನುವುದು ಕಲ್ಪಿತ್ ಮಾತು.

ಇದನ್ನು ಗಮನಿಸಿ: ಜಿಇಇ ಮುಖ್ಯ ಪರೀಕ್ಷೆ ಫಲಿತಾಂಶ

ಭವಿಷ್ಯದ ಬಗ್ಗೆ ಚಿಂತಿಸಿಲ್ಲ

ಜಿಇಇನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಕಲ್ಪಿತ್ ಭವಿಷ್ಯದ ಬಗ್ಗೆ ಯಾವ ಯೋಜನೆಯನ್ನು ರೂಪಿಸಿಲ್ಲವಂತೆ. ಸದ್ಯಕ್ಕೆ ಮುಂಬೈನ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವುದಾಗಿ ಅವರು ತಿಳಿಸಿದ್ದಾರೆ. ಓದುವುದು ಬಿಟ್ಟರೆ ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಸಂಗೀತ ಕಲ್ಪಿತ್ ಗೆ ಇಷ್ಟದ ಹವ್ಯಾಸಗಳಾಗಿವೆ.

English summary
History has been created by Kalpit Veerwal who has scored the perfect score of 360. This score has the disctinction of making him the first person to get such a score in the history of JEE Main.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia