ಶೀಘ್ರದಲ್ಲೇ ಜ್ಞಾನವಾಣಿ ಎಫ್.ಎಂ 106.4 ಮತ್ತೆ ಕಾರ್ಯಾರಂಭ

ಇಗ್ನೊ ಪ್ರಾದೇಶಿಕ ಸೇವೆಗಳ ವಿಭಾಗದ ನಿರ್ದೇಶಕ ವಿ. ವೇಣುಗೋಪಾಲ ರೆಡ್ಡಿ ‘ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ)ಜ್ಞಾನವಾಣಿ ಎಫ್‌.ಎಂ ರೇಡಿಯೊ ಕಾರ್ಯಕ್ರಮ ಮತ್ತೆ ಆರಂಭಗೊಳ್ಳುವುದರ ಬಗ್ಗೆ ತಿಳಿಸಿದ್ದಾರೆ.

ಪ್ರಸಾರ ಭಾರತಿ ಅಡಿಯಲ್ಲಿ ಶೈಕ್ಷಣಿಕ ಬಾನುಲಿ ಪ್ರಸಾರ ಮಾಡುತ್ತಿರುವ ಜ್ಞಾನವಾಣಿ ಎಫ್.ಎಂ 106.4 ಮತ್ತೆ ಆರಂಭಗೊಳ್ಳಲಿದೆ.

ರಾಜ್ಯ ಮಟ್ಟದ ಇಗ್ನೊ ಅಧ್ಯಯನ ಕೇಂದ್ರಗಳ ಸಂಯೋಜಕರ ಸಮ್ಮೇಳನದಲ್ಲಿ ಮಾತನಾಡಿದ ಇಗ್ನೊ ಪ್ರಾದೇಶಿಕ ಸೇವೆಗಳ ವಿಭಾಗದ ನಿರ್ದೇಶಕ ವಿ. ವೇಣುಗೋಪಾಲ ರೆಡ್ಡಿ 'ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) 'ಜ್ಞಾನವಾಣಿ' ಎಫ್‌.ಎಂ ರೇಡಿಯೊ ಕಾರ್ಯಕ್ರಮ ಮತ್ತೆ ಆರಂಭಗೊಳ್ಳುವುದರ ಬಗ್ಗೆ ತಿಳಿಸಿದ್ದಾರೆ.

ಜ್ಞಾನವಾಣಿ ರೇಡಿಯೋ ಸೇವೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರಾರಂಭಗೊಂಡಿದೆ. ಕರ್ನಾಟಕದಲ್ಲಿ ಈ ವರ್ಷದ ಒಳಗೆ ಆರಂಭವಾಗಲಿದೆ. ಇಲ್ಲಿ ಕೇವಲ ಇಗ್ನೋ ಶಿಕ್ಷಕರಲ್ಲದೇ ಹೊರಗಿನವರೂ ಬಂದು ಜನರಿಗೆ ಉಪಯುಕ್ತ ಮಾಹಿತಿ ನೀಡಬಹುದು ಎಂದು ಅವರು ಮಾಹಿತಿ ನೀಡಿದರು.

ಜ್ಞಾನವಾಣಿ ಎಫ್.ಎಂ 106.4

106.40 ತರಂಗಾಂತರದಲ್ಲಿ ಪ್ರಸಾರವಾಗುವ 'ಜ್ಞಾನವಾಣಿ' ರೇಡಿಯೋ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ನಿಗದಿ ಪಡಿಸಿದ ಪಾಠಗಳನ್ನು ಬೋಧಿಸುತ್ತಾರೆ. ನಿತ್ಯ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ ರಾತ್ರಿ 10ರ ತನಕ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ಈ ವೇದಿಕೆಯಲ್ಲಿ ವಿದ್ಯಾರ್ಥಿಗಳ ಪಾಠದ ಜೊತೆಗೆ ಪರಸ್ಪರ ಚರ್ಚೆಗೂ ಅವಕಾಶ ಕಲ್ಪಿಸಲಾಗುವುದು. ಇಗ್ನೊ ವಿದ್ಯಾರ್ಥಿಗಳಲ್ಲದೇ, ಎಲ್ಲರೂ ಇದರಲ್ಲಿ ಭಾಗವಹಿಸಬಹುದಾಗಿದೆ.

ಜ್ಞಾನವಾಣಿ

ಪ್ರಸಾರ ಭಾರತಿ ಅಡಿಯಲ್ಲಿ ಶೈಕ್ಷಣಿಕ ಬಾನುಲಿ ಪ್ರಸಾರ ಮಾಡುತ್ತಿರುವ ಜ್ಞಾನವಾಣಿ ಯಾವುದೇ ಜಾಹೀರಾತುಗಳನ್ನು ಅವಲಂಬಿಸದೇ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆರೋಗ್ಯ ಸಂಬಂಧಿ ವಿಷಯಗಳನ್ನು ಶ್ರೋತೃವರ್ಗಕ್ಕೆ ನಿರಂತರವಾಗಿ ಪ್ರಸಾರ ಮಾಡುತ್ತಿರುವ ಏಕೈಕ ಬಾನುಲಿ ಪ್ರಸಾರ ಕೇಂದ್ರವಾಗಿದೆ.

ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ವಿದ್ಯಾಭ್ಯಾಸದವರೆಗೆ ಪಠ್ಯಕ್ರಮಗಳನ್ನು ತಿಳಿಯ ಹೇಳಿಸುವಲ್ಲಿ ಸಫಲವಾಗಿದೆ. ಹಾಗೆಯೇ ಮಾನವಿಕ ವಿಷಯಗಳ ಮಹತ್ವ, ಸಮಾಜ ಬದಲಾವಣೆಯ ಆಶೋತ್ತರಗಳು, ರಾಷ್ಟ್ರೀಯ ಭಾವೈಕ್ಯತೆ, ಸ್ವಾತಂತ್ರ್ಯ ಸಂಗ್ರಾಮ, ಚರಿತ್ರೆ, ಪುರಾಣ, ಸಾಹಿತ್ಯ ಮತ್ತು ಸಮಾಜ, ವ್ಯವಹಾರ, ಕೃಷಿ, ವ್ಯವಹಾರ ನಿರ್ವಹಣೆ, ಕೈಗಾರಿಕಾ ಸಂಬಂಧಗಳು ಹೀಗೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳು ಇಲ್ಲಿ ಪ್ರಸಾರವಾಗುತ್ತವೆ.

ಈ ವಿದ್ಯಾರ್ಥಿಗಳಿಗೆಂದೇ ನಿಗದಿ ಪಡಿಸಿದ ಎಲ್ಲಾ ವಿಷಯಗಳ ಪಾಠಗಳನ್ನು ವಿಷಯ ತಜ್ಞರಿಂದ ಬೋಧಿಸುತ್ತಾರೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪಾಠಗಳು ಕೆಲವು ಸಾರಿ ದೆಹಲಿಯಿಂದ ನೇರ ಪ್ರಸಾರವಾಗುತ್ತವೆ.

For Quick Alerts
ALLOW NOTIFICATIONS  
For Daily Alerts

English summary
Indira Gandhi National Open University (IGNOU) has announced that the 'Jnanwani FM' program will begin again, Director of IGNOU Regional Services Division V. Venugopal Reddy said.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X