ಆಗಸ್ಟ್ 19 ರಂದು ಬೃಹತ್ ಉದ್ಯೋಗ ಮೇಳ

Posted By:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿದ್ಯಾಮಾತಾ ಫೌಂಡೇಶನ್, ಜಯಕರ್ನಾಟಕ, ವಿಎಫ್ಟಿ ಇವರ ಸಹಯೋಗದೊಂದಿಗೆ ಆಗಸ್ಟ್19 ರಂದು ಪುತ್ತೂರಿನ ನೆಹರು ನಗರ ಸುದಾನ ವಸತಿ ಶಾಲೆಯಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ.

ನೂರಕ್ಕು ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು, ಸುಮಾರು ನಾಲ್ಕು ಸಾವಿರ ಉದ್ಯೋಗಾವಕಾಶಗಳು ಲಭ್ಯವಿರಲಿದೆ. ಸ್ಥಳದಲ್ಲಿಯೇ ನೇರ ನೇಮಕಾತಿ ನಡೆಯಲಿದ್ದು, ಭಾಗವಹಿಸುವ ಅಭ್ಯರ್ಥಿಗೆ ಕನಿಷ್ಠ 5 ಅವಕಾಶಗಳ ಆಯ್ಕೆ ಇರಲಿದೆ.

ಬೃಹತ್ ಉದ್ಯೋಗ ಮೇಳ

ಏಳನೇ ತರಗತಿ ಉತ್ತೀರ್ಣರಾದವರಿಂದ ಹಿಡಿದು 10ನೇ ತರಗತಿ, ಪಿಯುಸಿ, ಡಿಪ್ಲೊಮಾ, ಐಟಿಐ, ಎಲ್ಲಾ ಪದವೀಧರ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಓದಿದವರು ಮುಕ್ತವಾಗಿ ಭಾಗವಹಿಸಬಹುದಾಗಿದೆ.

ಉದ್ಯೋಗ ಮೇಳಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಮೇಳದಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ವಿವರಗಳನ್ನು ಇ-ಮೇಲ್ ಮಾಡುವ ಮೂಲಕ ನೋಂದಯಿಸಿಕೊಳ್ಳಬಹುದಾಗಿದೆ.

ಇದನ್ನು ಗಮನಿಸಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 45 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ

ಇ-ಮೇಲ್ ವಿಳಾಸ
jobfair@vidyamaatha.org

ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸುವಾಗ ತಮ್ಮ ವಿವರ ಹಾಗೂ ಗುರುತಿನ ಚೀಟಿ, ಭಾವಚಿತ್ರ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತರತಕ್ಕದ್ದು.

ಕನಿಷ್ಠ 10 ವಿವರ ಪತ್ರ (ರೆಸ್ಯುಮೆ) ಗಳ ಪ್ರತಿಗಳನ್ನು ತರಬೇಕು.

ಮೇಳ ಆರಂಭವಾಗುವ ಸಮಯ: ಬೆಳಗ್ಗೆ 9:00

ಬೆಳಗ್ಗೆ ಸಂದರ್ಶನ ಎದುರಿಸುವ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆ ಕರೊನ್ ನ ನಿರ್ದೇಶಕ ಫಾಲ್ ಮತ್ತು ಮುಖ್ಯ ಆಡಳಿತ ಮಾನವ ಸಂಪನ್ಮೂಲ ಅಧಿಕಾರಿ ಡಿ ಸಿ ಚೆನ್ನಪ್ಪ ರವರು ಮಾಹಿತಿ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು
9620468869, 9448527606,9008436846, 9945868698

English summary
Vidyamaatha foundation of puttur in association with vft is organising mega job fair on Aug 19 at sudana residential school puttur.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia