ಇನ್ನು ಮುಂದೆ ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ ಎಕ್ಸಾಂ ಬರೆಯಬಹುದು

Posted By:

ಪ್ರತಿ ವರ್ಷ ಪರೀಕ್ಷೆ ವೇಳೆ ಎದುರಾಗುತ್ತಿದ್ದ ಮಾಧ್ಯಮ ಸಮಸ್ಯೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಅಂತ್ಯ ಹಾಡಿದೆ.

ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಕನ್ನಡ ಮಾದ್ಯಮ ವಿದ್ಯಾರ್ಥಿಗಳು ಪರೀಕ್ಷೆಯನ್ನು ಇಂಗ್ಲಿಷ್ ನಲ್ಲಿ ಉತ್ತರಿಸಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.

ಈ ಮೂಲಕ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಲೆಕ್ಕಶಾಸ್ತ್ರ , ಗಣಕ ವಿಜ್ಞಾನ , ಸಂಖ್ಯಾಶಾಸ್ತ್ರ ಮತ್ತು ಬೇಸಿಕ್ ಮ್ಯಾಥ್ಸ್ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಉತ್ತರಿಸಬಹುದಾಗಿದೆ.

ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ ಎಕ್ಸಾಂ ಬರೆಯಬಹುದು

ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಕನ್ನಡ ಮಾದ್ಯಮ ವಿದ್ಯಾರ್ಥಿಗಳು ಸಂಖ್ಯಾಧಾರಿತ (numeric based) ವಿಷಯಗಳ ಪರೀಕ್ಷೆಯನ್ನು ಇಂಗ್ಲಿಷ್ ನಲ್ಲಿ ಉತ್ತರಿಸಲು ಅವಕಾಶ ನೀಡಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ಉಪನ್ಯಾಸಕರು ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರಿದ್ದರು.

ಈ ವಿಷಯಗಳು ಸಂಖ್ಯಾಧಾರಿತ (numeric based) ವಿಷಯಗಳಾಗಿರುವುದರಿಂದ ಸದರಿ ವಿಷಯಗಳಿಗೆ ಮಾಧ್ಯಮ ಆಯ್ಕೆಯಲ್ಲಿ ವಿನಾಯ್ತಿ ನೀಡಲಾಗಿದೆ. ವಿದ್ಯಾರ್ಥಿಗಳು ಇಂಗ್ಲಿಷನಲ್ಲಿ ಉತ್ತರಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಸಾಕಷ್ಟು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳಿಗೆ ಪ್ರಯೋಜನವಾಗಿದೆ. ಪಾಠ ಮಾಡುವಾಗ ಸರಿಯಾದ ಕನ್ನಡ ಪದ ಸಿಗದೆ ಗೊಂದಲಕ್ಕೊಳಗಾಗುವ ಪರಿಸ್ಥಿತಿ ಈಗ ದೂರವಾಗಿದೆ. ಅಲ್ಲದೆ ಪರೀಕ್ಷೆ ಬರೆಯುವಾಗ ಪದಗಳ ತರ್ಜುಮೆಗೆ ಸುಸ್ತಾಗುತ್ತಿದ್ದ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ.

English summary
Karnataka Department of Pre university of education has permitted for Kannada medium students to write exams in English.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia