ಕನ್ನಡ ನಾಟಕ ರಚನೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ನಾಟಕಕಾರರು ಯಾವುದೇ ವಿಷಯ ಇಟ್ಟುಕೊಂಡು ಸ್ವತಂತ್ರವಾಗಿ ಬರೆಯಬಹುದು ಅಥವಾ ಕಥೆ, ಕಾದಂಬರಿ ಆಧರಿಸಿ ನಾಟಕ ರಚಿಸಬಹುದು. 50 ‍ಪುಟ ಮಿತಿಯಲ್ಲಿ, ರಂಗ ಪ್ರಯೋಗ ಮಾಡುವಾಗ ಎರಡು ಗಂಟೆಯ ಅವಧಿ ಮೀರದ ನಾಟಕವಾಗಿರಬೇಕು.

ಕರ್ನಾಟಕ ನಾಟಕ ಅಕಾಡೆಮಿಯು 'ಕನ್ನಡ ನಾಟಕ ರಚನಾ ಸ್ಪರ್ಧೆ-2017'ಯನ್ನು ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ನಾಟಕಗಳನ್ನು ಆಹ್ವಾನಿಸಿದೆ.

ನಾಟಕಕಾರರು ಯಾವುದೇ ವಿಷಯ ಇಟ್ಟುಕೊಂಡು ಸ್ವತಂತ್ರವಾಗಿ ಬರೆಯಬಹುದು ಅಥವಾ ಕಥೆ, ಕಾದಂಬರಿ ಆಧರಿಸಿ ನಾಟಕ ರಚಿಸಬಹುದು. 50 ‍ಪುಟ ಮಿತಿಯಲ್ಲಿ, ರಂಗ ಪ್ರಯೋಗ ಮಾಡುವಾಗ ಎರಡು ಗಂಟೆಯ ಅವಧಿ ಮೀರದ ನಾಟಕವಾಗಿರಬೇಕು.

ಆಯ್ಕೆಯಾದ ಎರಡು ನಾಟಕಗಳಿಗೆ ತಲಾ 40,000 ರೂ. ಬಹುಮಾನ ನೀಡಲಾಗುವುದು. ವಿದ್ಯಾರ್ಥಿಗಳು ರಚನೆ ಮಾಡಿದ ಒಂದು ನಾಟಕವನ್ನು ಪ್ರತ್ಯೇಕವಾಗಿಬಹುಮಾನಕ್ಕೆ 40,000 ರೂ. ಆಯ್ಕೆ ಮಾಡಲಾಗುವುದು.

ನಾಟಕ ರಚನೆ ಸ್ಪರ್ಧೆ

ನವೆಂಬರ್‌ 15ರೊಳಗೆ ನಾಟಕಗಳ ಪ್ರತಿಯನ್ನು ಅಕಾಡೆಮಿ ರಿಜಿಸ್ಟ್ರಾರ್ ಕಚೇರಿಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣಿಸಂಖ್ಯೆ 080-22237484 ಸಂಪರ್ಕಿಸುವಂತೆ ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಣೆಯು ತಿಳಿಸಿದೆ.

ಕರ್ನಾಟಕ ನಾಟಕ ಅಕಾಡೆಮಿ

ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರಗುರುತರವಾದುದು.ಕಲೆ ಸಂಸ್ಕೃತಿಗಳನ್ನು ಕಾಪಾಡಲು, ಪ್ರದರ್ಶನ ಕಲೆಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧರಾಗಿರುವ ರಾಜ್ಯಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖಅಭಿವೃದ್ಧಿಗಾಗಿ ಚಿಂತನೆ ನಡೆಸಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯು ಒಂದು.

ಕರ್ನಾಟಕ ನಾಟಕ ಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1959ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು.

ಅಕಾಡೆಮಿ ಧ್ಯೇಯೋದ್ದೇಶಗಳು

  • ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವುದು.
  • ಅಕಾಡೆಮಿಯ ನಾಟಕ ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಘ, ಸಂಸ್ಥೆಗಳೊಡನೆ ಸಹಕರಿಸುವುದು.
  • ಅಕಾಡೆಮಿಯ ಕಾರ್ಯಚಟುವಟಿಕೆಗಳ ಉದ್ದೇಶಕ್ಕಾಗಿ ಮತ್ತು ದಾನಗಳ ಮೂಲಕ ವಂತಿಗೆ ದಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುವುದು.
  • ಗ್ರಂಥಾಲಯಗಳನ್ನು ಸ್ಥಾಪಿಸಿ, ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು.
  • ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಾಗಾರ, ಸಂವಾದ, ಉತ್ಸವಗಳನ್ನು ಏರ್ಪಡಿಸುವುದು.
  • ವಿಚಾರ ಸಂಕಿರಣ, ಸಂವಾದ, ಉತ್ಸವಗಳನ್ನು ನೇರವಾಗಿ ಅಥವಾ ಸಂಘ, ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ಏರ್ಪಡಿಸುವುದು.
  • ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು.
  • ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆ ನೀಡುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka Nataka Academy organizing Kannada play write competition to promote young writers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X