2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ

Posted By:

ಪದವಿ ಪೂರ್ವ ಶಿಕ್ಷಣ ಇಲಾಖೆಯು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿಯ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಮಾರ್ಚ್ 9 ರಿಂದ 27 ರವರೆಗೆ ನಡೆಯಲಿದೆ.

ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

2016ರ ನವೆಂಬರ್ ತಿಂಗಳಲ್ಲಿ ತಾತ್ಕಲಿಕ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಇಲಾಖೆಗೆ ಬಂದ ಆಕ್ಷೇಪಣೆಗಳನ್ನು ಆಧರಿಸಿ ವೇಳಾಪಟ್ಟಿಯಲ್ಲಿ ಕೆಲ ತಿದ್ದುಪಡಿ ಮಾಡಿ ನೂತನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನೂತನ ವೇಳಾಪಟ್ಟಿ ಪ್ರಕಾರ ದಿನಾಂಕ 09-03-2017 ರಿಂದ 27-03-2017ರವರೆಗು ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30ರವರೆಗೂ ನಡೆಯಲಿವೆ.

ಪರೀಕ್ಷಾ ವೇಳಾಪಟ್ಟಿ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ಮೂಲಕ ಪಡೆದ ಈ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಗಮನಿಸಬಹುದು.

ದಿನಾಂಕ

(ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30ರವರೆಗೆ)

ವಿಷಯ

09-03-2017
ಜೀವಶಾಸ್ತ್ರ, ಇತಿಹಾಸ
10-03-2017ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
11-03-2017ತರ್ಕಶಾಸ್ತ್ರ, ಶಿಕ್ಷಣ, ಬೇಸಿಕ್ ಮ್ಯಾಥ್ಸ್
13-03-2017ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ
14-03-2017ಗಣಿತ
15-03-2017ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
16-03-2017ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
17-03-2017ಭೌತಶಾಸ್ತ್ರ
18-03-2017ಮನಃಶಾಸ್ತ್ರ
20-03-2017ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಐಚ್ಚಿಕ ಕನ್ನಡ
21-03-2017ರಾಜ್ಯಶಾಸ್ತ್ರ
22-03-2017ಹಿಂದಿ, ತೆಲುಗು
23-03-2017ಕನ್ನಡ, ತಮಿಳು, ಮಲಯಾಳಂ, ಅರೇಬಿಕ್
24-03-2017ಸಂಸ್ಕೃತ, ಮರಾಠಿ, ಉರ್ದು, ಫ್ರೆಂಚ್
27-03-2017ಇಂಗ್ಲೀಷ್

English summary
Karnataka 2nd PU Exam Time Table March 2017 Announced

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia