Karnataka 2nd PUC Mid-Term Exam Time Table : ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ನ.29ರಿಂದ ಆರಂಭ

2021-22ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಮಧ್ಯ-ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ. ರಾಜ್ಯದಾದ್ಯಂತ ಏಕಕಾಲದಲ್ಲಿ ಪರೀಕ್ಷೆ ನಡೆಸಲು ಇಲಾಖೆಯು ತೀರ್ಮಾನಿಸಿದೆ.

ನವೆಂಬರ್ 29,2021 ರಿಂದ ಡಿಸೆಂಬರ್ 10,2021ರ ವರೆಗೆ ದ್ವಿತೀಯ ಪಿಯುಸಿ ಮಧ್ಯ ವಾ‍ರ್ಷಿಕ ಪರೀಕ್ಷೆಗಳು ನಡೆಯಲಿವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ವೇಳಾಪಟ್ಟಿಯನ್ನು ವೀಕ್ಷಿಸಬಹುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ವೇಳಾಪಟ್ಟಿ ಮತ್ತು ವಿವರವನ್ನು ಪಡೆಯಲು ಮುಂದೆ ಓದಿ.

ದ್ವಿತೀಯ ಪಿಯುಸಿ ಮಧ್ಯ-ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಪರೀಕ್ಷಾ ವೇಳಾಪಟ್ಟಿ ವಿವರ :

* ನವೆಂಬರ್ 29 -ಸೋಮವಾರ: ಬೆಳಗಿನ ಅವಧಿಯಲ್ಲಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದರೆ, ಮಧ್ಯಾಹ್ನದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್ ಮತ್ತು ಪ್ರೆಂಚ್ ಭಾಷೆಯ ಪರೀಕ್ಷೆ ನಡೆಯಲಿದೆ.
* ನವೆಂಬರ್ 30 - ಮಂಗಳವಾರ: ದ್ವಿತೀಯ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 1- ಬುಧವಾರ: ಇತಿಹಾಸ ಮತ್ತು ಭೌತಶಾಸ್ತ್ರ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 2-ಗುರುವಾರ: ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 3-ಶುಕ್ರವಾರ: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‍, ಕಂಪ್ಯೂಟರ್ ವಿಜ್ಞಾನ ಮತ್ತು ಭೂವಿಜ್ಞಾನ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನದ ಅವಧಿಯಲ್ಲಿ ಹಿಂದೂಸ್ತಾನಿ ಸಂಗೀತ, ಅಂಕಿ ಅಂಶಗಳು ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 6- ಸೋಮವಾರ: ಸಮಾಜಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆಯಲಿದೆ. * ಡಿಸೆಂಬರ್ 7ರ ಮಂಗಳವಾರ: ಅಕೌಂಟೆನ್ಸಿ, ಶಿಕ್ಷಣ ಮತ್ತು ಮನೆ ವಿಜ್ಞಾನ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 8- ಬುಧವಾರ: ಬೆಳಗಿನ ಅವಧಿಯಲ್ಲಿ ವ್ಯವಹಾರ ಅಧ್ಯಯನ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಐಚ್ಛಿಕ ಕನ್ನಡ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 9-ಗುರುವಾರ: ಬೆಳಗಿನ ಅವಧಿಯಲ್ಲಿ ಭೂಗೋಳಶಾಸ್ತ್ರ, ಮನಃಶಾಸ್ತ್ರ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಆರೋಗ್ಯ ಸಲಹೆ ಪರೀಕ್ಷೆ ನಡೆಯಲಿದೆ.
* ಡಿಸೆಂಬರ್ 10- ಶುಕ್ರವಾರ: ಬೆಳಗಿನ ಅವಧಿಯಲ್ಲಿ ಹಿಂದಿ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಉರ್ದು, ಸಂಸ್ಕೃತ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಥಿಗಳು ಅಧಿಕೃತ ವೇಳಾಪಟ್ಟಿ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Department of Pre University Education Announced Karnataka 2nd PUC Mid-Term Examination 2021-22 Time Table. Exams starting from November 29 and ends on December 10. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X