Karnataka 2nd PUC Result 2022 Highlights : ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶದ ಪ್ರಮುಖಾಂಶಗಳು ಇಲ್ಲಿವೆ

ಏಪ್ರಿಲ್/ಮೇ-2022ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶನಿವಾರ ಪ್ರಕಟಿಸಿದ್ದು, ಒಟ್ಟಾರೆ 61.88% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಮತ್ತು ಉತ್ತೀರ್ಣರಾದ ಲಿಂಗವಾರು ಮಾಹಿತಿ, ನಗರ ಮತ್ತು ಗ್ರಾಮಾಂತರ ಪ್ರದೇಶದ ಫಲಿತಾಂಶ, ಜಿಲ್ಲಾವಾರು ಮಾಹಿತಿ, ರಾಜ್ಯದ ಟಾಪರ್ ಗಳ ಪಟ್ಟಿ ಮತ್ತು ಕಾಲೇಜುವಾರು ಫಲಿತಾಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ.

 
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶದ ಪ್ರಮುಖಾಂಶಗಳು

ಪರೀಕ್ಷೆಗೆ ಹಾಜರಾದ ಮತ್ತು ಉತ್ತೀರ್ಣರಾದ ಲಿಂಗವಾರು ವಿವರ :

6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3,46557 ಬಾಲಕರಲ್ಲಿ 1,91,380 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಶೇ.55.22ರಷ್ಟು ಮತ್ತು 3,37,006 ಬಾಲಕಿಯರಲ್ಲಿ 2,31,586 ವಿದ್ಯಾರ್ಥಿನಿಯರು ಅಂದರೆ 68.72ರಷ್ಟು ತೇರ್ಗಡೆಯಾಗಿದ್ದಾರೆ.

ನಗರ ಮತ್ತು ಗ್ರಾಮಾಂತರ ಪ್ರದೇಶದ ಫಲಿತಾಂಶ :

ನಗರದ 5,20,520 ಅಭ್ಯರ್ಥಿಗಳಲ್ಲಿ 3,21,590 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.61.7ರಷ್ಟು ಮತ್ತು ಗ್ರಾಮಾಂತರ ವಿಭಾಗದಲ್ಲಿ
1,63,043 ಅಭ್ಯರ್ಥಿಗಳಲ್ಲಿ 1,01,76 ವಿದ್ಯಾರ್ಥಿಗಳು ಅಂದರೆ ಶೇ.62.18 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

ಜಿಲ್ಲಾವಾರು ಮಾಹಿತಿ:

ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.88.02 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಉಡುಪಿ (ಶೇ. 86.38) ಇದ್ದರೆ, ಶೇ.49.31 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.

ರಾಜ್ಯಕ್ಕೆ ಟಾಪರ್ ಇವರು:

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗು ತಾಲ್ಲೂಕು ಕೊಟ್ಟೂರು ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು ವಿದ್ಯಾರ್ಥಿನಿಯರಾದ ಶ್ವೇತಾ ಭೀಮಶಂಕರ್ ಬೈರಗೊಂಡ ಮತ್ತು ಮಡಿವಾಳರ ಸಹನಾ 600ಕ್ಕೆ 594 ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ದಾಸನಪುರದಲ್ಲಿರುವ ಬಿಜಿಎಸ್ ಪಿಯು ಕಾಲೇಜಿನ ನೀಲು ಸಿಂಗ್, ಜಾಲಹಳ್ಳಿಯಲ್ಲಿರುವ ಸೇಂಟ್ ಕ್ಲಾರೆಟ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿ ಆಕಾಶ್ ದಾಸ್, ಚಿಕ್ಕಬಳ್ಳಾಪುರ ಅಗಲಗುರ್ಕಿ ಎಸ್‌ಬಿಜಿಎನ್‌ಎಸ್ ರೂರಲ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿನಿ ನೇಹಾ ಬಿ.ಆರ್. ಮತ್ತು ಜಯನಗರ ಪಿಯು ಕಾಲೇಜಿನ ವಿದ್ಯಾರ್ಥಿ ಮಾನವ್ ವಿಜಯ್ ಕೇಜರಿವಾಲ್ 600ಕ್ಕೆ 596 ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ.

 

ಇನ್ನು ವಾಣಿಜ್ಯ ವಿಭಾಗದಲ್ಲಿ ಬೆಂಗಳೂರು ಜಯನಗರ ಆರ್‌.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಸಿಮ್ರಾನ್ ಶೀಷಾ ರಾವ್ 600ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದಾರೆ.

ಕಾಲೇಜುವಾರು:

ಕಾಲೇಜುವಾರು ಫಲಿತಾಂಶವನ್ನು ಗಮನಿಸಿದಾಗ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 52.84, ಅನುದಾನಿತ ಪದವಿ ಪೂರ್ವ ಕಾಲೇಜು ಶೇ. 62.05, ಅನುದಾನ ರಹಿತ ಪದವಿ ಪೂರ್ವ ಕಾಲೇಜು 76.50, ಕಾರ್ಪೊರೇಷನ್ ಪದವಿ ಪೂರ್ವ ಕಾಲೇಜು 55.72, ವಿಭಜಿತ ಪದವಿ ಪೂರ್ವ ಕಾಲೇಜು 72.96 ಬಂದಿದೆ.

For Quick Alerts
ALLOW NOTIFICATIONS  
For Daily Alerts

English summary
Karnataka 2nd PUC Results 2022 have been announced. Students can check their results on the official websites karresults.nic.in. Check District, Stream Wise Performance of Students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X