Karnataka New Academic Year 2021-22: ಜೂನ್ 15ರಿಂದ ಶೈಕ್ಷಣಿಕ ವರ್ಷ ಆರಂಭ ; ಅನ್ಬುಕುಮಾರ್ ಹೇಳಿಕೆ

ಜೂನ್ 15ರಿಂದ ಶೈಕ್ಷಣಿಕ ವರ್ಷ ಆರಂಭ; ಜುಲೈ 1 ರಿಂದ ಶಾಲೆ ಆರಂಭ

ಪ್ರಸಕ್ತ 2021-22ನೇ ಸಾಲಿನ ಶೈಕ್ಷಣಿಕ ವರ್ಷವು ನಾಳೆಯಿಂದಲೇ ಪ್ರಾರಂಭವಾಗಲಿದೆ ಹಾಗೆಯೇ ಜುಲೈ 1 ರಿಂದ ಶಾಲೆಗಳು ಆರಂಭವಾಗಲಿವೆ ಮತ್ತು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಕ್ತ ಅನ್ಬುಕುಮಾರ್ ಹೇಳಿದ್ದಾರೆ.

 

ಈಗಾಗೇ ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ತೊಡಕು ಉಂಟಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಕೋವಿಡ್ ಇರುವ ಕಾರಣದಿಂದಾಗಿ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದಿದ್ದರೆ ಪರ್ಯಾವಾಗಿ ಆನ್‌ಲೈನ್, ದೂರದರ್ಶನ ಮತ್ತು ರೇಡಿಯೋ ಮೂಲಕ ಕಲಿಕೆಯನ್ನು ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ನಾಳೆಯಿದಂದಲೇ ಶಾಲೆಗಳಲ್ಲಿ ದಾಖಲಾತಿಯನ್ನು ಆರಂಭಿಸಿ, ಆಗಸ್ಟ್ 31ರೊಳಗೆ ದಾಖಲಾತಿಯನ್ನು ಮುಕ್ತಗೊಳಿಸಬೇಕು. ಲಾಕ್‌ಡೌನ್ ಇರುವ ಜಿಲ್ಲೆಗಳಲ್ಲಿ ಪಾಸ್ ಪಡೆದು ಶಾಲೆಗೆ ಬರಬೇಕು ಎಂದಿದ್ದಾರೆ. ಜೊತೆಗೆ ಶಿಕ್ಷಕರು ಈ ಸಂದರ್ಭದಲ್ಲಿ ಯಾವುದೇ ಕಾರಣಗಳನ್ನು ಹೇಳುವಂತಿಲ್ಲ. ತಮ್ಮ ಕಾರ್ಯಕ್ಕೆ ಹಾಜರಾಗಬೇಕು ಎಂದು ಅನ್ಬುಕುಮಾರ್ ಸೂಚನ ನೀಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka academic year 2021-22 will begins from june 15, There is no chances to postpone said by annubukumar.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X