ಕರ್ನಾಟಕ ಸಿಇಟಿ ಫಲಿತಾಂಶ ಆಗಸ್ಟ್ 20 ರಂದು ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಘೋಷಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ವರ್ಷ/ಸೆಮಿಸ್ಟರ್ ಇಂಜಿನಿಯರ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್, ಬಿ ಫಾರ್ಮಾ, ಫಾರ್ಮಾ ಡಿ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ಕಾಮನ್ ಎಂಟರೆನ್ಸ್ ಟೆಸ್ಟ್(ಸಿಇಟಿ) 2020 ಅನ್ನು ಜುಲೈ 30 ಮತ್ತು ಜುಲೈ 31 ರಂದು ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. ಇದೀಗ ಪರೀಕ್ಷೆಯ ಫಲಿತಾಂಶ ಆಗಸ್ಟ್ 20 ರಂದು ಪ್ರಕಟಗೊಳ್ಳಲಿದೆ.
ಅಭ್ಯರ್ಥಿಗಳನ್ನು ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ತಾಣ https://cetonline.karnataka.gov.in/kea/ ದಲ್ಲಿ ನೋಡಬಹುದು.
For Daily Alerts