NEET Results : ನೀಟ್ ನಲ್ಲಿ 5ನೇ ರ್ಯಾಂಕ್ ಪಡೆದ ಕರ್ನಾಟಕ ಸಿಇಟಿ ಟಾಪರ್ ಮೇಘನ್

ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸೋಮವಾರ ಪ್ರಕಟ ಮಾಡಿದೆ. ನೀಟ್ ಫಲಿತಾಂಶದಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ರಾಜ್ಯದ ಇಬ್ಬರಿಗೆ 5ನೇ ರ್ಯಾಂಕ್ ದೊರೆತಿದೆ.

 
ನೀಟ್ ಫಲಿತಾಂಶ : ಕರ್ನಾಟಕ ಸಿಇಟಿ ಟಾಪರ್ ಮೇಘನ್ ಹೆಚ್‌ಕೆ ಗೆ 5ನೇ ರ್ಯಾಂಕ್

ಪ್ರಸಕ್ತ ಸಾಲಿನಲ್ಲಿ ಸಿಇಟಿ ಟಾಪರ್ ಆಗಿದ್ದ ಮೈಸೂರಿನ ಮೇಘನ್ ಹೆಚ್‌ಕೆ ನೀಟ್ ನಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದು, 720 ಅಂಕಗಳಿಗೆ 715 ಅಂಕಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

ನೀಟ್ ನಲ್ಲಿ ರಾಜ್ಯದ ಇಬ್ಬರಿಗೆ 5ನೇ ರ್ಯಾಂಕ್ ದೊರೆತಿದ್ದು ಮೈಸೂರಿನ ಮೇಘನ್ ಹೆಚ್‌ಕೆ ಹಾಗೂ ಮಂಗಳೂರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ ವ್ಯಾಸಾಂಗ ಮಾಡ್ತಿದ್ದ ಜಶನ್ ಛಾಬ್ರಾ ಗೆ 720 ಅಂಕಗಳಿಗೆ 715 ಅಂಕ ಪಡೆಯುವ ಮೂಲಕ 5ನೇ ರ್ಯಾಂಕ್ ಅನ್ನು ಗಳಿಸಿದ್ದಾರೆ. ಜೊತೆಗೆ ಚಿತ್ರದುರ್ಗದ ಎಸ್ಆರ್ಎಸ್ ಪದವಿಪೂರ್ವ ಕಾಲೇಜಿನ ಎಲ್ ಎನ್ ನಿಹಾರಿಕಾ, ಆರ್ ಶ್ರೇಯಸ್ ಎಂಬ ವಿದ್ಯಾರ್ಥಿಗಳು 720 ಅಂಕಗಳಿಗೆ 620 ಅಂಕಗಳಿಸಿದ್ದಾರೆ.

ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ನೀಟ್ ನಲ್ಲಿ ತೆಲಂಗಾಣದ ಮೃಣಾಲ್ ಕುಟ್ಟೇರಿ, ದೆಹಲಿಯ ತನ್ಮಯ ಗುಪ್ತಾ ಹಾಗೂ ಮಹಾರಾಷ್ಟ್ರದ ಕಾರ್ತಿಕ್ ಜಿ. ನಾಯರ್ಗೆ ಟಾಪ್ ಶ್ರೇಣಿಯಲ್ಲಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ವೇಳೆ ಟೈ ಬ್ರೇಕಿಂಗ್ ಫಾರ್ಮುಲಾ ಬಳಸಬೇಕು ಎಂದು ಎನ್ಟಿಎ ಹೇಳಿದೆ. ಈಗ ಮೊದಲ ಶ್ರೇಣಿಯನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

ಈ ಭಾರಿಯ ನೀಟ್ ಯುಜಿಸಿ 2021 ಪರೀಕ್ಷೆಯಲ್ಲಿ ಒಟ್ಟು 15,44,275 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 8,70,074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಐದೂ ವಿಭಾಗಗಳಲ್ಲಿ ರ‍್ಯಾಂಕ್ ಪಡೆದಿದ್ದ ಮೈಸೂರಿನ ಮೇಘನ್ :

2020-21ನೇ ಸಾಲಿನ ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿ ಸೈನ್ಸ್ (ಬಿಎನ್‌ವೈಎಸ್), ಕೃಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಔಷಧಾಲಯ ವಿಭಾಗಗಳಲ್ಲಿ ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಸಿಬಿಎಸ್‌ಇ ವಿದ್ಯಾರ್ಥಿ ಮೇಘನ್ ಹೆಚ್‌ಕೆ ಅಗ್ರ ಶ್ರೇಣಿಯನ್ನು ಪಡೆದಿದ್ದರು. ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಸ್ಟ್ರೀಮ್‌ಗಳಲ್ಲಿ ಏಕೈಕ ವಿದ್ಯಾರ್ಥಿಯು ಅಗ್ರಸ್ಥಾನ ಪಡೆಯುತ್ತಿರುವುದು ಇದೇ ಮೊದಲು. ಈ ಕಾರಣಕ್ಕಾಗಿ ಮೇಘನ್‌ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿನಂದಿಸಿದ್ದರು.

 

ಆಗಸ್ಟ್ ನಲ್ಲಿ ನಡೆದ ಸಿಇಟಿ ಪರೀಕ್ಷೆ 2021:

ಈ ಭಾರಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 28, 29, 30ರಂದು ನಡೆಸಲಾಗಿತ್ತು. ಪರೀಕ್ಷೆಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದರು. 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದರು. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ, 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದರು. 530 ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಉಳಿದ ಜಿಲ್ಲೆಗಳಲ್ಲಿ ಒಟ್ಟು 530 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.

For Quick Alerts
ALLOW NOTIFICATIONS  
For Daily Alerts

English summary
NTA NEET UG results released, karnataka CET state topper meghan HK secured 5th rank NEET with 715 marks.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X