ಎಸ್‌ಎಸ್‌ಎಲ್‌ಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ: ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ

ಸಮಾಜ ಕಲ್ಯಾಣ ಆಯುಕ್ತಾಲಯ ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕೆ ಸೇರಿದ ಎಸ್‌.ಎಸ್‌.ಎಲ್‌.ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಸ್‌.ಎಸ್‌.ಎಲ್‌.ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ: ಅರ್ಜಿ ಹಾಕಿ

 

2019 ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಹಾಗೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಪ್ರೋತ್ಸಾಹಧನ ಪಡೆಯಲು ಜುಲೈ 31,2019 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.ವಿದ್ಯಾರ್ಥಿಗಳು ಈ ಬಗೆಗೆ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು.

ಅರ್ಜಿ ಹಾಕಲು ಅರ್ಹತೆಗಳು ಏನಿರಬೇಕು:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು

* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು

* ಕರ್ನಾಟಕ ರಾಜ್ಯದಲ್ಲಿ ಶಾಶ್ವತವಾಗಿ ನೆಲೆಸಿದವರಾಗಿರಬೇಕು

* ಎಸ್‌ಎಸ್‌ಎಲ್‌ಸಿ 2019ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

* ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನಿಷ್ಟ ಶೇ 60%ರಷ್ಟು ಅಂಕಗಳನ್ನು ಪಡೆದಿರಬೇಕು

ಅರ್ಜಿ ಹಾಕುವುದು ಹೇಗೆ:

ಪರಿಶಿಷ್ಟ ಜಾತಿ ಜನಾಂಗ ವರ್ಗಗಳ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು. ಬೇರೆ ಯಾವುದೇ ರೀತಿಯ ಅರ್ಜಿ/ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ವಿದ್ಯಾರ್ಥಿಗಳು ಕೆಳಗೆ ನೀಡಲಾಗಿರು ಸ್ಟೆಪ್ಸ್ ಅನ್ನು ಫಾಲೋ ಮಾಡುವ ಮೂಲಕ ಅರ್ಜಿ ಹಾಕಬಹುದು.

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಸಮಾಜ ಕಲ್ಯಾಣ ಆಯುಕ್ತಾಲಯದ ಅಧಿಕೃತ ವೆಬ್‌ಸೈಟ್‌ https://sw.kar.nic.in/indexKan.aspx ಗೆ ಹೋಗಿ

ಸ್ಟೆಪ್ 2: ಹೋಂ ಪೇಜ್‌ನಲ್ಲಿ "SSLC Prize Money / ಎಸ್.ಎಸ್‌.ಎಲ್‌.ಸಿ ಪ್ರೊತ್ಸಾಹಧನ" ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ನಂತರ ನಿಮ್ಮ ಎಸ್.ಎಸ್‌.ಎಲ್‌.ಸಿ ಬೋರ್ಡ್ ಸೆಲೆಕ್ಟ್ ಮಾಡಿ , ನಿಮ್ಮ ಜಾತಿ ಸೆಲೆಕ್ಟ್ ಮಾಡಿ ಮತ್ತು ನಿಮ್ಮ ಎಸ್.ಎಸ್‌.ಎಲ್‌.ಸಿ ರಿಜಿಸ್ಟ್ರೇಶನ್ ನಂಬರ್‌ ಅನ್ನು ಟೈಪ್ ಮಾಡಿ ಲಾಗಿನ್ ಆಗಿ

ಸ್ಟೆಪ್ 4: ಲಾಗಿನ್ ಆದ ಬಳಿಕ ಅರ್ಜಿಯನ್ನು ಭರ್ತಿ ಮಾಡಿ

ಸ್ಟೆಪ್ 5: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

 

ಸ್ಟೆಪ್ 6: ಎಲ್ಲಾ ಪೂರ್ಣಗೊಂಡ ಬಳಿಕ ಸಬ್‌ಮಿಟ್ ಮಾಡಿ

ಅರ್ಜಿ ಸಲ್ಲಿಸುವಾಗ ಅಪ್-ಲೋಡ್ ಮಾಡಬೇಕಾದ ದಾಖಲೆಗಳು:

* ಎಸ್‌.ಎಸ್‌.ಎಲ್‌.ಸಿ ರಿಜಿಸ್ಟ್ರೇಶನ್ ನಂಬರ್

* ಆಧಾರ್ ನಂಬರ್ ಮತ್ತು ಆಧಾರ್‌ ಕಾರ್ಡಿನಲ್ಲಿರುವಂತೆಯೇ ನಿಮ್ಮ ಹೆಸರನ್ನು ನಮೂದಿಸಬೇಕು

* ಜಾತಿ ಪ್ರಮಾಣ ಪತ್ರದಲ್ಲಿರುವ ಆರ್‌ಡಿ ನಂಬರ್

* ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ ನಿಗದಿತ

* ಎಸ್‌.ಎಸ್‌.ಎಲ್‌.ಸಿ ಅಂಕ ಪಟ್ಟಿ ಸ್ಕ್ಯಾನ್ ಮಾಡಿ

* ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ವಿವರ

For Quick Alerts
ALLOW NOTIFICATIONS  
For Daily Alerts

English summary
Karnataka Department of Social Welfare announced prize money for SC and ST SSLC Students
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X