Degree Classes : ಶೇ.65ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ಪೂರ್ಣ, ಪದವಿ ಕಾಲೇಜು ಆರಂಭಕ್ಕೆ ಚಿಂತನೆ

ಅತೀ ಶೀಘ್ರದಲ್ಲಿ ಪದವಿ ತರಗತಿಗಳು ಆರಂಭ : ಡಿಸಿಎಂ

ರಾಜ್ಯದಲ್ಲಿ ಕೊರೊನಾ ಸೋಂಕು ಹಬ್ಬಿರುವ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲಾ ಕಾಲೇಜುಗಳನ್ನು ಇನ್ನೂ ತೆರೆಯಲಾಗಿಲ್ಲ. ಆದರೆ ಇದೀಗ ಸರ್ಕಾರಿ, ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಶೇ.65 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗಿದೆ. ಹಾಗಾಗಿ ಇನ್ನು 3 ಅಥವಾ 4 ದಿನಗಳಲ್ಲಿ ಪದವಿ ತರಗತಿಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಈ ಮುಂಚೆಯೇ ಕೆಲವು ವಿಶ್ವವಿದ್ಯಾಲಯಗಳು Odd ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿದ್ದು, ಪರೀಕ್ಷೆ ನಡೆಸದ ವಿಶ್ವವಿದ್ಯಾಲಯಗಳು ಅಗಸ್ಟ್ 15 ರೊಳಗೆ ಬಾಕಿ ಇರುವ ಪರೀಕ್ಷೆಗಳನ್ನು ನಡೆಸಲು ಸೂಚಿನೆ ನೀಡಲಾಗಿದೆ. ಪದವಿಯ Even ಸೆಮಿಸ್ಟರ್ ಪರೀಕ್ಷೆಗಳು ಅಕ್ಟೋಬರ್ ರೊಳಗೆ ನಡೆಸಲು ಸೂಚಿಸಲಾಗಿದೆ. ಪರೀಕ್ಷಾ ದಿನಾಂಕಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಅತೀ ಶೀಘ್ರದಲ್ಲಿ ಪದವಿ ತರಗತಿಗಳು ಆರಂಭ : ಡಿಸಿಎಂ

ಇದೇ ವೇಳೆ ಡಿಪ್ಲೊಮಾ Even ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷೆ ನವೆಂಬರ್ 2 ರಿಂದ ನವೆಂಬರ್ 12,2021ರವರೆಗೆ ಹಾಗೂ ಅದೇ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೆ ಥಿಯರಿ ಪರೀಕ್ಷೆಗಳು ನವೆಂಬರ್ 17ರಿಂದ ಡಿಸೆಂಬರ್ 6,2021ರವರೆಗೆ ನಡೆಯಲಿದೆ. ಡಿಪ್ಲೊಮಾ Odd ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26 ರಿಂದ ಜುಲೈ 28,2021ರವರೆಗೆ ಹಾಗೂ 1, 3, 5 ಹಾಗೂ ಸೆಮಿಸ್ಟರ್ ನ ಬಾಕಿ ಉಳಿದ ಥಿಯರಿ ಪರೀಕ್ಷೆಗಳು ಆಗಸ್ಟ್ 2 ರಿಂದ ಆಗಸ್ಟ್ 21,2021ರ ವರೆಗೆ ನಡೆಯಲಿವೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka higher education minister Dr ashwath narayan announced diploma exam dates and spoke about reopening of degree classes soon.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X