ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ದಾಖಲಾತಿಗೆ ವಯೋಮಿತಿ 6ಕ್ಕೆ ಹೆಚ್ಚಳ

ಕರ್ನಾಟಕ ಸರ್ಕಾರವು ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಎಲ್ಲಾ ಶಾಲೆಗಳಿಗೆ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ವಯಸ್ಸನ್ನು 5 ವರ್ಷ ಮತ್ತು 5 ತಿಂಗಳಿನಿಂದ 6 ವರ್ಷಗಳಿಗೆ ಹೆಚ್ಚಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಅನ್ವಯವಾಗಲಿದೆ ಎಂದು ಹೇಳಿದೆ.

ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ದಾಖಲಾತಿಗೆ ವಯೋಮಿತಿ 6ಕ್ಕೆ ಹೆಚ್ಚಳ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2017, 2018 ಮತ್ತು 2020 ರ ದಾಖಲಾತಿ ವಯಸ್ಸಿನ ಆದೇಶಗಳನ್ನು ಹಿಂಪಡೆದಿದೆ. ಮಂಗಳವಾರ ಹೊರಡಿಸಿದ ಹೊಸ ಆದೇಶದಲ್ಲಿ ಪ್ರಾಥಮಿಕ ಶಾಲೆಗೆ ದಾಖಲಾಗುವ ಮಗುವಿಗೆ ಆ ಶೈಕ್ಷಣಿಕ ವರ್ಷದ ಜೂನ್ 1 ಕ್ಕೆ ಆರು ವರ್ಷ ವಯಸ್ಸಾಗಿರಬೇಕು. ಆದರೆ ಆದೇಶದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಕಟ್-ಆಫ್ ವಯಸ್ಸಿನ ಬಗ್ಗೆ ಯಾವುದೇ ಉಲ್ಲೇಖವಿರುವುದಿಲ್ಲ.

2016-17ನೇ ಸಾಲಿನಿಂದ ಶಾಲಾ ದಾಖಲಾತಿಗೆ ಕನಿಷ್ಠ ವಯೋಮಿತಿ ನಿಗದಿ ಕುರಿತು ಸರ್ಕಾರ ಐದು ಆದೇಶಗಳನ್ನು ಹೊರಡಿಸಿದ್ದು, ಮಂಗಳವಾರದಂದು ಆರನೇ ಆದೇಶವನ್ನು ಹೊರಡಿಸಿದೆ.

ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ದಾಖಲಾತಿಗೆ ವಯೋಮಿತಿ 6ಕ್ಕೆ ಹೆಚ್ಚಳ

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್, "ಆರ್‌ಟಿಇ ಕಾಯಿದೆ 2009, ಭಾರತ ಸರ್ಕಾರದ ನಿರ್ದೇಶನಗಳು ಮತ್ತು ಎನ್‌ಇಪಿ 2020ರ ಪ್ರಕಾರ ಒಂದನೇ ತರಗತಿಗೆ ಸೇರುವ ಮಕ್ಕಳು ಜೂನ್ 1 ರೊಳಗೆ ಆರು ವರ್ಷ ವಯೋಮಿತಿಯನ್ನು ಪೂರೈಸಿರಬೇಕು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ 21 ರಾಜ್ಯಗಳು ಕೂಡ ಈ ಪ್ರಸ್ತಾವನೆಯನ್ನು ಮುಂದುಟ್ಟಿವೆ. ಹೊಸ ನಿಯಮವು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಸೂಕ್ತವಾಗಿದೆ ಎಂದು ಖಚಿತಪಡಿಸುತ್ತದೆ. ಈ ಆದೇಶವು ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಶಾಲೆಗಳಿಗೆ ಅನ್ವಯವಾಗಲಿದೆ. ಒಂದು ವೇಳೆ ಮಗುವಿಗೆ 5 ವರ್ಷ ಮತ್ತು 11 ತಿಂಗಳ ವಯಸ್ಸಾಗಿದ್ದರೆ, ಅವನು/ಅವಳು ದಾಖಲಾಗಲು ಒಂದು ವರ್ಷ ಕಾಯಬೇಕಾಗುತ್ತದೆ ಜೊತೆಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು" ಎಂದು ತಿಳಿಸಿದರು.

ಆದಾಗ್ಯೂ ಕೆಲವು ಕಾರ್ಯಕರ್ತೆಯರು ದಾಖಲಾತಿ ವಯಸ್ಸನ್ನು ಹೆಚ್ಚಿಸುವುದರಿಂದ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕೊಂಡೊಯ್ಯಬಹುದು ಎಂದು ಭಯಪಡುತ್ತಾರೆ ಏಕೆಂದರೆ ಸರ್ಕಾರಿ ಶಾಲೆಗಳು ಬೆರಳೆಣಿಕೆಯಷ್ಟು ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳನ್ನು ಹೊಂದಿವೆ. ಈ ಕುರಿತು ನಿರಂಜನಾರಾಧ್ಯ ವಿ.ಪಿ.ಅಭಿವೃದ್ಧಿ ಶಿಕ್ಷಣತಜ್ಞರು "ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲದಿರುವಾಗ, ಈ ರೀತಿಯ ನಿಯಮವು ಅಂತಹ ಶಾಲೆಗಳಲ್ಲಿ ಬಲವನ್ನು ಮತ್ತಷ್ಟು ಕುಸಿಯಲು ಕಾರಣವಾಗುತ್ತದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕೆ 5+ ವಯೋಮಾನದ ಹಕ್ಕು ಇರಬೇಕು" ಎಂದಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka education department has increased the minimum age for class 1 to six.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X