ಮಕ್ಕಳ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ "2025 ರಲ್ಲಿ ಕರ್ನಾಟಕ - ನನ್ನ ವಿಷನ್"

Posted By:

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನವೆಂಬರ್ 14, 2017ರ ಮಕ್ಕಳ ದಿನಾಚರಣೆಯಂದು ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆ

10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಈ ಕೆಳಕಂಡ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ.

ಜವಾಹರ ಲಾಲ್ ನೆಹರು ವಿದ್ಯಾಭ್ಯಾಸ ಮತ್ತು ಅಕ್ಷರ ಪ್ರೇಮ

ಚಿತ್ರಕಲಾ ಸ್ಪರ್ಧೆ

ಚಿತ್ರಕಲಾ ಸ್ಪರ್ಧೆ ವಿವರ

  • ಜೂನಿಯರ್ಸ್ : 3ನೇ ತರಗತಿಯಿಂದ 6ನೇ ತರಗತಿಯವರೆಗೆ
  • ಸೀನಿಯರ್ಸ್ : 7ನೇ ತರಗತಿಯಿಂದ 10ನೇ ತರಗತಿಯವರೆಗೆ

ದಿನಾಂಕ: 14/11/2017

ವಿಷಯ: 2025ರಲ್ಲಿ ಕರ್ನಾಟಕ-ನನ್ನ ವಿಷನ್
ಅವಧಿ : 90 ನಿಮಿಷಗಳ
ಎ4 ಅಳತೆಯ ಕಾಗದದ ಮೇಲೆ ಚಿತ್ರಗಳನ್ನು ಬಿಡಿಸಬೇಕು.
ಜಲವರ್ಣಕ್ಕೆ ಆದ್ಯತೆ, ತೈಲವರ್ಣ, ಕ್ರೆಯಾನ್ಸ್, ಬಣ್ಣದ ಪೆನ್ಸಿಲ್ ಇತ್ಯಾದಿ ಬಳಸಿಯೂ ಚಿತ್ರ ಬಿಡಿಸಬಹುದು. ಪ್ರತಿ ಜಿಲ್ಲೆಯ ಶ್ರೇಷ್ಠ ಚಿತ್ರಕಲೆಗೆ ಆಕರ್ಷಕ ಬಹುಮಾನ ಸಿಗಲಿದೆ

ರಾಜ್ಯ ಮಟ್ಟದ ಸ್ಪರ್ಧೆ

ಪ್ರತಿ ಜಿಲ್ಲೆಯ ಬಹುಮಾನ ವಿಜೇತ ಚಿತ್ರಕಲೆಗಳನ್ನು ನವ ಕರ್ನಾಟಕ 2025ರ ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ವೆಬ್ ಸೈಟ್ನಲ್ಲಿ ಪ್ರಕಟಿಸಿ, ಶ್ರೇಷ್ಠ 3 ರಾಜ್ಯಮಟ್ಟದ ಬಹುಮಾನಗಳಿಗೆ ಅವೆಲ್ಲವನ್ನು ಸಾರ್ವಜನಿಕರ ಮತದಾನಕ್ಕೆ ಪ್ರಕಟಿಸಲಾಗುತ್ತದೆ.

ಬಹುಮಾನ ವಿಜೇತರ ಹೆಸರನ್ನು ಪ್ರಕಟಿಸಿ, ಅವರಿಗೆ ಇಮೇಲ್, ದೂರವಾಣಿ ಕರೆ ಹಾಗೂ ಶಾಲೆಗಳ ಮುಖೇನ ತಿಳಿಸಲಾಗುತ್ತದೆ

ಬಹುಮಾನ ಕುರಿತಾದ ವಿವರಗಳು

ಜಿಲ್ಲಾ ಮಟ್ಟದ ಬಹುಮಾನಗ ಳನ್ನು ಸದರಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಪ್ರಧಾನ ಮಾಡಲಿದ್ದಾರೆ.

ಪ್ರಶಸ್ತಿ ವಿಜೇತರು ಈ ಕೆಳಗಂಡವುಗಳನ್ನು ಪಡೆಯಲಿದ್ದಾರೆ

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮತ್ತು ವಿಷನ್ 2025 ಸಿಇಒ ರೇಣುಕಾ ಚಿದಂಬರಂ, ಐಎಎಸ್ ಅವರು ಸಹಿ ಮಾಡಿದ ಪ್ರಮಾಣ ಪತ್ರ, ಪ್ರಶಸ್ತಿ ಫಲಕ, ನಗದು ಬಹುಮಾನ ಪಡೆಯಲಿದ್ದಾರೆ

ನಗದು ಬಹುಮಾನ

ಜೂನಿಯರ್ಸ್

3ನೇ ತರಗತಿಯಿಂದ 6ನೇ ತರಗತಿಯವರೆಗೆ: 1ನೇ ಬಹುಮಾನ (ಪ್ರತಿ ಜಿಲ್ಲೆಗೆ 1 ಬಹುಮಾನ) ₹ 5,000ರೂ. ನಗದು ಬಹುಮಾನ

ಸೀನಿಯರ್ಸ್

7ನೇ ತರಗತಿಯಿಂದ 10ನೇ ತರಗತಿಯವರೆಗೆ: 1ನೇ ಬಹುಮಾನ (ಪ್ರತಿ ಜಿಲ್ಲೆಗೆ 1 ಬಹುಮಾನ) ₹ 5,000ರೂ. ನಗದು ಬಹುಮಾನ

ರಾಜ್ಯ ಮಟ್ಟದ ಬಹುಮಾನಗಳನ್ನು ಮಾನ್ಯ ಮುಖ್ಯಮಂತ್ರಿಗಳು ಪ್ರದಾನ ಮಾಡಲಿದ್ದಾರೆ.

3ನೇ ತರಗತಿಯಿಂದ 6ನೇ ತರಗತಿಯವರೆಗೆ

ಮೊದಲನೇ 25,000ರೂ. ನಗದು ಬಹುಮಾನ
ಎರಡನೇ 15,000ರೂ. ನಗದು ಬಹುಮಾನ
ಮೂರನೇ 10,000ರೂ. ನಗದು ಬಹುಮಾನ

7ನೇ ತರಗತಿಯಿಂದ 10ನೇ ತರಗತಿಯವರೆಗೆ

ಮೊದಲನೇ 25,000ರೂ. ನಗದು ಬಹುಮಾನ
ಎರಡನೇ 15,000ರೂ. ನಗದು ಬಹುಮಾನ
ಮೂರನೇ 10,000ರೂ. ನಗದು ಬಹುಮಾನ

ನವ ಕರ್ನಾಟಕ 2025

ನವ ಕರ್ನಾಟಕ 2025 ಯೋಜನೆಯು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ 7 ವರ್ಷಗಳಲ್ಲಿ ಮುನ್ನೋಟದ ದಾಖಲೆ "ವಿಷನ್ 2025" ಅನ್ನು ರೂಪಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಮಾನ್ಯ ಮುಖ್ಯಮಂತ್ರಿಗಳು ಸೆಪ್ಟೆಂಬರ್ 25, 2017 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಈ ಯೋಜನೆಯು ಮುಂದಿನ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಅಭಿವೃದ್ಧಿಯ ಮುನ್ನೋಟ ನೀಡುತ್ತದೆ. ಸುಸ್ಥಿರ ಮತ್ತು ಏಕೀಕೃತ ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರು ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka Government is conduction State and District level painting competitions in all the districts for school children up to 10th standard.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia