Karnataka Lockdown : ಏಪ್ರಿಲ್ 27 ರಿಂದ 14 ದಿನ ಲಾಕ್‌ಡೌನ್ ಘೋಷಣೆ, ಶಾಲಾ ಕಾಲೇಜು ಪರೀಕ್ಷೆಗಳು?

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ ಎರಡನೇ ಅಲೆಯಿಂದಾಗಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿವೆ. ಹಾಗಾಗಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾವನ್ನು ತೆಗೆದುಕೊಂಡಿದೆ. ಹಾಗಾದ್ರೆ ಏನದು ನಿರ್ಧಾರ ಹಾಗಾದ್ರೆ ಶಿಕ್ಷಣ ಇಲಾಖೆಗಳು, ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳ ಕಥೆ ಏನು ಎಂಬ ಗೊಂದಲ ನಿಮ್ಮಲ್ಲೂ ಮೂಡಿದೆ. ಹಾಗಾದ್ರೆ ಶಾಲಾ, ಕಾಲೇಜುಗಳ ಪರೀಕ್ಷೆಗಳ ಕಥೆ ಏನು ಇಲ್ಲಿದೆ ಮಾಹಿತಿ.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ದೇಶದೆಲ್ಲೆಡೆ ಕಳೆದ ವರ್ಷ ಇದೇ ಸಮಯದಲ್ಲಿ ಕೊರೋನಾ ಎಂಬ ಮಹಾಮಾರಿ ಆವರಿಸಿ ಎಲ್ಲರನ್ನೂ ತಲ್ಲಣಗೊಳಿಸಿತ್ತು. ರಾಜ್ಯ ಸರ್ಕಾರವು ಲಾಕ್‌ಡೌನ್ ಅನ್ನು ಘೋಷಿಸಿ ಜನರನ್ನು ಎಚ್ಚೆತ್ತುಕೊಳ್ಳುವಂತೆ ಸಲಹೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ರದ್ದು ಮಾಡಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿತ್ತು. ಇನ್ನೂ ಅನೇಕ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ ಬೋರ್ಡ್ ಪರೀಕ್ಷೆಗಳ ವಿಚಾರದಲ್ಲಿ ಸರ್ಕಾರವು ಕಠಿಣ ನಿರ್ಧಾರವನ್ನು ಕೈಗೊಂಡಿತ್ತು.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ ಬಂದ ನಂತರ ಹಲವು ರಾಜ್ಯ ಸರ್ಕಾರಗಳು ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಿವೆ. ಇನ್ನೂ ಕೆಲವು ರಾಜ್ಯ ಸರ್ಕಾರಗಳು ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿವೆ. ತದನಂತರ ಕೋವಿಡ್ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಾಗ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಮಾತ್ರ ಕೋವಿಡ್ ಉಲ್ಬಣದ ನಡುವೆಯೂ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿ ಉಳಿದ ಪರೀಕ್ಷೆಯನ್ನು ಮತ್ತು ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳನ್ನು ಜೂನ್ 25 ರಿಂದ ಜುಲೈ 4ರ ವರೆಗೆ ನಡೆಸಲಾಗಿತ್ತು.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ
 
ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

2021ನೇ ಸಾಲಿನಲ್ಲಿ ಶಾಲಾ ಕಾಲೇಜುಗಳು ಹಂತ ಹಂತವಾಗಿ ಆರಂಭವಾಗುವ ಹೊಸ್ತಿಲಲ್ಲೇ ಕೋವಿಡ್ ಹರಡುವಿಕೆಯನ್ನು ಗಮನಿಸಿ ಆಫ್‌ಲೈನ್ ತರಗತಿಗಳನ್ನು ರದ್ದುಗೊಳಿಸಲಾಯಿತು. ಇತ್ತೀಚೆಗಷ್ಟೇ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಿ ಏಪ್ರಿಲ್ 30,2021ರೊಳಗೆ ಮೌಲ್ಯಂಕನಗಳ ಮೂಲಕ ವಿಶೇಷ ಅಂಕಗಳನ್ನು ನೀಡಿ ಮುಂದಿನ ತರಗತಿಗೆ ಅರ್ಹತೆ ನೀಡಲು ಸರ್ಕಾರವು ನಿರ್ದೇಶನ ನೀಡಿದೆ.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಪ್ರಸ್ತುತ ಸಾಲಿನ ಬೋರ್ಡ್ ಪರೀಕ್ಷೆಗಳ ದಿನಾಂಕಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ. ಆದರೆ ಏಪ್ರಿಲ್ 28 ರಿಂದ ಮೇ 4,2021ರವರಗೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ನಿನ್ನೆ ಹೇಳಿದ್ದಾರೆ. ಇನ್ನು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮೇ 24, 2021 ರಿಂದ ಪ್ರಾರಂಭವಾಗಲಿದ್ದು ಜೂನ್ 16,2021 ರಂದು ಮುಕ್ತಾಯಗೊಳ್ಳಲಿದೆ. ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯು ಜೂನ್ 21ರಿಂದ ಪ್ರಾರಂಭವಾಗಲಿದೆ.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಈ ವರ್ಷದ ಬೋರ್ಡ್ ಪರೀಕ್ಷೆಗಳು ನಡೆಯಲಿವೆಯೇ ಎಂಬ ಸಂದೇಹದ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರವು ಏಪ್ರಿಲ್ 27 ರಿಂದ ಮೇ 12,2021ರ ವರೆಗೆ 14 ದಿನಗಳ ಕಾಲ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಲಾಕ್‌ಡೌನ್‌ ಅನ್ನು ಘೋಷಿಸಿದೆ. ಹೀಗಾಗಿ ಎಲ್ಲಾ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕರ್ನಾಟಕ ಸರ್ಕಾರವು ಇಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರದ್ದು ಮಾಡಲಾಗಿದೆ. ಇನ್ನು
ಗಾರ್ಮೆಂಟ್ಸ್‌ ಮತ್ತು ಉತ್ಪಾದಕ ಕ್ಷೇತ್ರಕ್ಕೆ,ಸರಕು ಸಾಗಣೆ, ಉತ್ಪಾದಕ, ಕೃಷಿ ಕ್ಷೇತ್ರಕ್ಕೆ ಲಾಕ್ ಡೌನ್‌ನಿಂದ ವಿನಾಯಿತಿಯನ್ನು ನೀಡಲಾಗಿದೆ. ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ 2ನೇ ಅಲೆ, ಕರ್ನಾಟಕದಲ್ಲಿ 14 ದಿನ ಲಾಕ್‌ಡೌನ್ ಘೋಷಣೆ

ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೀಗ 14 ದಿನಗಳ ಲಾಕ್‌ಡೌನ್‌ ಇರುವ ಕಾರಣದಿಂದಾಗಿ ತದನಂತರವೇ ವಿವಿಧ ಪರೀಕ್ಷೆಗಳ ವಿವರ ಮತ್ತು ವೇಳಾಪಟ್ಟಿಗಳ ಕುರಿತು ಮಾಹಿತಿ ಹೊರಬೀಳಲಿದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಆತಂಕ ಪಡದೆ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಬಹುದು.

For Quick Alerts
ALLOW NOTIFICATIONS  
For Daily Alerts

English summary
Karnataka state government announced 14 days lockdown from april 27. What about schools, college and universities here is the details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X