Karnataka NEET UG 2022 : ನೀಟ್ ಯುಜಿ ನೊಂದಣಿಗೆ ಅ.25ರ ವರೆಗೆ ಅವಕಾಶ

ಕರ್ನಾಟಕ ನೀಟ್ ಯುಜಿ 2022 ಕೌನ್ಸೆಲಿಂಗ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) NEET UG ಕೌನ್ಸೆಲಿಂಗ್ ನೋಂದಣಿ ಪ್ರಕ್ರಿಯೆಗೆ ಅಕ್ಟೋಬರ್ 25ರ ವರೆಗೆ ಅವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು NEET UG 2022 ಕೌನ್ಸೆಲಿಂಗ್‌ಗೆ ಅಧಿಕೃತ ವೆಬ್‌ಸೈಟ್-kea.kar.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. NEET UG 2022 ಕೌನ್ಸೆಲಿಂಗ್ ನೊಂದಣಿಗೆ ಅಕ್ಟೋಬರ್ 23ರ ವರೆಗೆ ಅವಕಾಶ ನೀಡಲಾಗಿತ್ತು, ಆದರೆ ಅವಧಿಯನ್ನು ಅಕ್ಟೋಬರ್ 25 ರವರೆಗೆ ವಿಸ್ತರಿಸಲಾಗಿದೆ.

ಕರ್ನಾಟಕ ನೀಟ್ ಯುಜಿ ನೊಂದಣಿಗೆ ಅ.25ರ ವರೆಗೆ ಅವಕಾಶ

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಪಾಸ್‌ವರ್ಡ್ ಮತ್ತು ಲಾಗಿನ್ ಐಡಿಯನ್ನು ಬಳಸಿಕೊಂಡ NEET UG 2022 ಕೌನ್ಸೆಲಿಂಗ್ ಗೆ ನೋಂದಾಯಿಸಿಕೊಳ್ಳಬಹುದು. "UGNEET-2022 ನೊಂದಣಿ ಪ್ರಕ್ರಿಯೆಗೆ ನೋಂದಣಿ ಮತ್ತು ಶುಲ್ಕ ಪಾವತಿಗಾಗಿ 25-10-2022 ರಂದು ಸಂಜೆ 5.30 ರವರೆಗೆ ವಿಸ್ತರಿಸಲಾಗಿದೆ" ಎಂದು KEA ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ NEET UG ಕೌನ್ಸೆಲಿಂಗ್ 2022: ಕೌನ್ಸೆಲಿಂಗ್ ಗೆ ನೊಂದಾಯಿಸಿಕೊಳ್ಳುವುದು ಹೇಗೆ ?

ಸ್ಟೆಪ್ 1 : KEA ಅಧಿಕೃತ ವೆಬ್‌ಸೈಟ್-kea.kar.nic.in ಗೆ ಭೇಟಿ ನೀಡಿ
ಸ್ಟೆಪ್ 2 : NEET UG 2022 ಅಪ್ಲಿಕೇಶನ್ ಪ್ರಕ್ರಿಯೆಯ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ಅಲ್ಲಿ ಕೇಳಲಾಗಿರುವ ವಿವರಗಳನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಸ್ಟೆಪ್ 4 : ಅಭ್ಯರ್ಥಿಗಳು ನಿಗಧಿಪಡಿಸಲಾಗಿರುವ ಅರ್ಜಿ ಶುಲ್ಕವನ್ನು ಪಾವತಿಸಿ
ಸ್ಟೆಪ್ 5 : ಎಲ್ಲವೂ ಪೂರ್ಣಗೊಳಿಸಿದ ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ

NEET UG 2022 ಸಲ್ಲಿಸಿದ ಅರ್ಜಿಗಳನ್ನು ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು KEA UGNEET ಅಪ್ಲಿಕೇಶನ್ ಪ್ರಿಂಟ್‌ಔಟ್, UGNEET 2022 ವೆರಿಫಿಕೇಶನ್ ಸ್ಲಿಪ್, ಯಾವುದೇ ಮಾನ್ಯ ಗುರುತಿನ ಚೀಟಿ, ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

KEA ಕನ್ನಡ ಭಾಷಾ ಪರೀಕ್ಷೆಯ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಕನ್ನಡ ಭಾಷಾ ಪರೀಕ್ಷೆಯು ಅಕ್ಟೋಬರ್ 27 ರಂದು ನಡೆಯಲಿದ್ದು, ಪರೀಕ್ಷೆಯು 1 ಗಂಟೆ ಅವಧಿಯವರೆಗೆ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿದೆ.

For Quick Alerts
ALLOW NOTIFICATIONS  
For Daily Alerts

English summary
Karnataka NEET UG 2022 counselling registration begins. Candidates can apply before October 25.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X