Karnataka NEET UG Counselling 2022 : ಕರ್ನಾಟಕ ನೀಟ್ ಯುಜಿ ಕೌನ್ಸೆಲಿಂಗ್ ನೊಂದಣಿ ಪ್ರಕ್ರಿಯೆ ಆರಂಭ

ಕರ್ನಾಟಕ ನೀಟ್ ಯುಜಿ ಕೌನ್ಸೆಲಿಂಗ್ 2022 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಂಬಿಬಿಎಸ್, ಎಂಡಿಎಸ್ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ರಾಜ್ಯದ ನೀಟ್ ಯುಜಿ ಕೌನ್ಸೆಲಿಂಗ್ 2022 ನೋಂದಣಿ ಪ್ರಕ್ರಿಯೆನ್ನು ಪ್ರಾರಂಭಿಸಿದೆ.

 
ಕರ್ನಾಟಕ ನೀಟ್ ಯುಜಿ ಕೌನ್ಸೆಲಿಂಗ್ ನೊಂದಣಿ ಪ್ರಕ್ರಿಯೆ ಆರಂಭ

KEA UGNEET 2022 ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ cetonline.karnataka.gov.in. ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಕಾಂಕ್ಷಿಗಳು ಕರ್ನಾಟಕ NEET UG ಕೌನ್ಸೆಲಿಂಗ್ 2022ಗೆ ಅಕ್ಟೋಬರ್ 19ರ (4 pm) ವರೆಗೆ ನೋಂದಾಯಿಸಿಕೊಳ್ಳಬಹುದು. ಕರ್ನಾಟಕ NEET UG ಅರ್ಹತಾ ಮಾನದಂಡವನ್ನು ಪೂರೈಸುವ ಅಭ್ಯರ್ಥಿಗಳು ರಾಜ್ಯದ ವೈದ್ಯಕೀಯ, ದಂತ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

KEA NEET ಯುಜಿ ಕೌನ್ಸೆಲಿಂಗ್ ಅನ್ನು ಶೇಕಡಾ 85ರಷ್ಟು ರಾಜ್ಯ ಕೋಟಾ ಸೀಟುಗಳು ಮತ್ತು ಕರ್ನಾಟಕ ರಾಜ್ಯಗಳ ಖಾಸಗಿ ಆಯುಷ್ ಕಾಲೇಜುಗಳಲ್ಲಿ ಯುಜಿ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳು ಮತ್ತು ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಿಗೆ ನಡೆಸಲಾಗುತ್ತಿದೆ. ಕರ್ನಾಟಕ NEET ಯುಜಿ ಕೌನ್ಸೆಲಿಂಗ್ ಪ್ರಕ್ರಿಯೆಯು ನೋಂದಣಿ ಪ್ರಕ್ರಿಯೆ, ಶುಲ್ಕ ಪಾವತಿ, ಆನ್‌ಲೈನ್ ಆಯ್ಕೆ ಪ್ರವೇಶ, ದಾಖಲೆಗಳ ಅಪ್‌ಲೋಡ್, ದಾಖಲೆಗಳ ಪರಿಶೀಲನೆ, ಸೀಟು ಹಂಚಿಕೆ ಮತ್ತು ಸೇರುವ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಕರ್ನಾಟಕ ರಾಜ್ಯದ ಸರ್ಕಾರಿ, ಖಾಸಗಿ, ಎನ್‌ಆರ್‌ಐ ಮತ್ತು ಇತರ ಸೀಟುಗಳಲ್ಲಿ ಯುಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಕೆಇಎ ರಾಜ್ಯದ ನೀಟ್ ಯುಜಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಡೆಸುತ್ತಿದೆ.

ಕರ್ನಾಟಕ NEET UG ಕೌನ್ಸೆಲಿಂಗ್ 2022 : ಅಗತ್ಯವಿರುವ ದಾಖಲೆಗಳ ಪಟ್ಟಿ :

ಕರ್ನಾಟಕ NEET UG 2022 ದಾಖಲೆ ಪರಿಶೀಲನೆಗೆ ಹಾಜರಾಗುವಾಗ
ಅಭ್ಯರ್ಥಿಗಳು ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಒದಗಿಸಬೇಕಿದ್ದು, ಅವುಗಳ ಪಟ್ಟಿ ಇಲ್ಲಿದೆ.

 

* KEA UGNEET ಅಪ್ಲಿಕೇಶನ್ ಮುದ್ರಣ
* ಪರಿಶೀಲನೆ ಸ್ಲಿಪ್
* UGNEET-2022 ಸ್ಕೋರ್ ಕಾರ್ಡ್
* ಅಗತ್ಯವಿರುವ ಎಲ್ಲಾ ಇತರ ಮೂಲ ದಾಖಲೆಗಳು
* ಯಾವುದೇ ಮಾನ್ಯವಾದ ಗುರುತಿನ ಚೀಟಿ (ಚಾಲನಾ ಪರವಾನಗಿ / ವೋಟರ್ ಐಡಿ / ಪಾಸ್‌ಪೋರ್ಟ್ / ಪ್ಯಾನ್ / ಆಧಾರ್ ಕಾರ್ಡ್).

ಕರ್ನಾಟಕ NEET UG ಕೌನ್ಸೆಲಿಂಗ್ 2022 ಪ್ರಮುಖ ದಿನಾಂಕಗಳು :

ಕರ್ನಾಟಕ NEET UG 2022 ನೋಂದಣಿ ಮತ್ತು ಪ್ರವೇಶದ ಪ್ರಾರಂಭ ದಿನಾಂಕ : ಅಕ್ಟೋಬರ್ 14, 2022
ನೋಂದಣಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : ಅಕ್ಟೋಬರ್ 19,2022
ಆನ್‌ಲೈನ್ ಅಪ್ಲಿಕೇಶನ್ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ : ಅಕ್ಟೋಬರ್ 20, 2022 (ರಾತ್ರಿ 11:59)
ವಿಶೇಷ ವರ್ಗದ ಪ್ರಮಾಣಪತ್ರಗಳ ಸಲ್ಲಿಕೆ (ಕರ್ನಾಟಕ ಅಭ್ಯರ್ಥಿಗಳಿಂದ ಮಾತ್ರ) : ಅಕ್ಟೋಬರ್ 21, 2022
ಕನ್ನಡ ಭಾಷಾ ಪರೀಕ್ಷೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ (ಕರ್ನಾಟಕ ಅಭ್ಯರ್ಥಿಗಳಿಗೆ ಮಾತ್ರ) : ಅಕ್ಟೋಬರ್ 21, 2022
ದೈಹಿಕವಾಗಿ ಅಂಗವಿಕಲ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ (ಕರ್ನಾಟಕ ಅಭ್ಯರ್ಥಿಗಳಿಗೆ ಮಾತ್ರ) : ಅಕ್ಟೋಬರ್ 27 ಮತ್ತು 28, 2022
ದಾಖಲೆಗಳ ಪರಿಶೀಲನೆ (ಕರ್ನಾಟಕೇತರ ಅಭ್ಯರ್ಥಿಗಳು) : ನವೆಂಬರ್ 2, 2022

For Quick Alerts
ALLOW NOTIFICATIONS  
For Daily Alerts

English summary
Karnataka neet ug counselling registration process has been started. Here is the important dates and documents required.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X