Karnataka PGCET Results 2021 : ಫಲಿತಾಂಶ ವೀಕ್ಷಿಸುವುದು ಹೇಗೆ ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿಸಿಇಟಿ 2021 ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಕರ್ನಾಟಕ ಪಿಜಿಸಿಇಟಿ  2021 ಫಲಿತಾಂಶ ಪ್ರಕಟ

202೧ನೇ ಸಾಲಿನ ಎಂಇ/ಎಂಟೆಕ್/ಎಂ.ಅರ್ಕ್, ಎಂ.ಸಿ.ಎ, ಎಂಬಿಎ ಕೋರ್ಸ್ ಗಳ ಪ್ರವೇಶಾತಿಗೆ ನವೆಂಬರ್ 13 ಮತ್ತು ನವೆಂಬರ್ 14,2021ರಂದು ನಡೆದ ಪಿಜಿಸಿಇಟಿ-2021ರ ಪರೀಕ್ಷೆಯನ್ನು ನಡೆಸಲಾಗಿತ್ತು.

ದಾಖಲೆಗಳ ಪರಿಶೀಲನಾ ವೇಳಾಪಟ್ಟಿಯನ್ನು ಸದ್ಯದಲ್ಲಿಯೇ ಪ್ರಾಧಿಕಾರದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು. ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳು ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪಿಜಿಸಿಇಟಿ-2021ರ ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ ಹಾಗೂ ಎಲ್ಲಾ ಮೂಲ ದಾಖಲೆಗಳನ್ನು/ಪ್ರಮಾಣ ಪತ್ರಗಳನ್ನು ಅರ್ಹತಾ ಕಂಡಿಕೆಗೆ ಅನುಗುಣವಾಗಿ ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಿದೆ. ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಮೂಲ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳು 2021ನೇ ಸಾಲಿನ ಎಂಇ/ಎಂಟೆಕ್/ಎಂ.ಆರ್ಕ್, ಎಂ.ಸಿ.ಎ, ಎಂಬಿಎ ಕೋರ್ಸ್ ಗಳ ಸೀಟು ಹಂಚಿಕೆಗೆ ಅರ್ಹತೆಯನ್ನು ಪಡೆಯುವುದಿಲ್ಲ.

ಪಿಜಿಸಿಇಟಿ 2021 ಫಲಿತಾಂಶ ವೀಕ್ಷಿಸುವುದು ಹೇಗೆ ?:

ಸ್ಟೆಪ್ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ಪಿಜಿಸಿಇಟಿ 2021 ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ ಕೇಳಲಾಗಿರುವ ಪಿಜಿಸಿಇಟಿ ಸಂಖ್ಯೆಯನ್ನು ಭರ್ತಿ ಮಾಡಿ
ಸ್ಟೆಪ್ 4: ನಂತರ ಸ್ಕ್ರೀನ್ ಮೇಲೆ ಫಲಿತಾಂಶ ಲಭ್ಯವಾಗುವುದು
ಸ್ಟೆಪ್ 5: ಫಲಿತಾಂಶ ಸೇವ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
KEA released PGCET 2021 results. Here is how to check results.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X