Karnataka PU Classes Starting Date : ಆ.16ರಿಂದ ಪಿಯುಸಿ ತರಗತಿ ಆರಂಭ ; ಎಸ್‌ಎಸ್‌ಎಲ್‌ ಪರೀಕ್ಷೆ ಮೌಲ್ಯಮಾನ ಇಲ್ಲ

2021-22ನೇ ಸಾಲಿನ ಪಿಯುಸಿ ತರಗತಿಗಳನ್ನು ಆಗಸ್ಟ್ 16 ರಿಂದ ಪ್ರಾರಂಭಿಸುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ದ್ವಿತೀಯ ಪಿಯುಸಿ ತರಗತಿಗಳು ಆ.16ರಿಂದ ಆರಂಭ

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಖಾಸಗಿ ವಿದ್ಯಾರ್ಥಿಯನ್ನು ಹೊರತುಪಡಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಹಾಗಾಗಿ ಪಿಯುಸಿ ದಾಖಲಾತಿಗೆ ಎಲ್ಲೆಡೆ ಹೆಚ್ಚು ಬೇಡಿಕೆಯಿದ್ದು, ಆಯಾ ಕಾಲೇಜಿನ ಪ್ರಾಂಶುಪಾಲರ ಮಾರ್ಗದರ್ಶನದ ಮೇರೆಗೆ ಪ್ರವೇಶಾತಿಯನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಬೇಕಿದೆ.

ಆಗಸ್ಟ್ 31ರ ವರೆಗೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದ್ದು, ತದನಂತರ ಪ್ರವೇಶಾತಿ ಪ್ರಕ್ರಿಯೆಗೆ ವಿಳಂಬ ಶುಲ್ಕ ಪಾವತಿಸಬೇಕಿರುತ್ತದೆ. ಸೆಪ್ಟೆಂಬರ್ 1 ರಿಂದ 11ರೊಳಗೆ ಪ್ರವೇಶಾತಿ ಪಡೆಯುವುದಿದ್ದಲ್ಲಿ 670/-ರೂ ದಂಡ ಶುಲ್ಕವನ್ನು ಪಾವತಿಸಬೇಕಿರುತ್ತದೆ. ತದನಂತರ ಸೆಪ್ಟೆಂಬರ್ 13 ರಿಂದ 25ರ ವರೆಗೆ ಪಿಯುಸಿ ಗೆ ಪ್ರವೇಶಾತಿ ಪಡೆಯಲು ಅವಕಾಶವಿದ್ದು 2,890/-ರೂ ದಂಡ ಶುಲ್ಕ ಪಾವತಿಸಬೇಕಿರುತ್ತದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್‌ಲೈನ್ ತರಗತಿಗಳು ಪ್ರಾಂಭವಾಗಿವೆ.

ಪ್ರಸಕ್ತ ಸಾಲಿನಲ್ಲಿ ಎಲ್ಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ನೀಡುವ ಮತ್ತು ಮರುಮೌಲ್ಯಪನ ಪ್ರಕ್ರಿಯೆಗೆ ಅವಕಾಶವಿರುವುದಿಲ್ಲ. ಒಎಂಆರ್ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮೌಲ್ಯಮಾಪನ ಮಾಡಲಾಗಿದ್ದು, ಮರು ಮೌಲ್ಯಮಾಪನ ಪ್ರಕ್ರಿಯೆಗೆ ಅವಕಾಶ ನೀಡಿಲ್ಲ.

ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನವಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ಆಕ್ಷೇಪಿಸಿದರು. ಈ ಕುರಿತು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ "ಈ ವರ್ಷ ಮೌಲ್ಯಮಾಪನವನ್ನು ಡಿಜಿಟಲ್ ಮೂಲಕ ನಡೆಸಲಾಯಿತು. ಹಾಗಾಗಿ ಯಾವುದೇ ದೋಷಗಳಿಗೆ ಅವಕಾಶವಿಲ್ಲ. ಆದ್ದರಿಂದ ಮರುಮೌಲ್ಯಮಾಪನದ ಪ್ರಶ್ನೆ ಉದ್ಭವಿಸುವುದಿಲ್ಲ." ಎಂದು ಪ್ರತಿಕ್ರಿಯಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ :

ಈ ಭಾರಿ ವಿಭಿನ್ನವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿದ್ದು, ಜುಲೈ 19 ಮತ್ತು 22ರಂದು 2 ಎರಡು ದಿನಗಳ ಕಾಲ ಮಾತ್ರ ಪರೀಕ್ಷೆಯನ್ನು ನಡೆಸಲಾಗಿತ್ತು. ನಿನ್ನೆಯಷ್ಟೇ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇಕಡಾ 99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಯಲ್ಲಿ 625ಕ್ಕೆ 625 ಅಂಕಗಳನ್ನು 157 ವಿದ್ಯಾರ್ಥಿಗಳು, 625ಕ್ಕೆ 623 ಅಂಕಗಳನ್ನು 289 ವಿದ್ಯಾರ್ಥಿಗಳು, 625ಕ್ಕೆ 622 ಅಂಕಗಳನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದಾರೆ. 625ಕ್ಕೆ 621 ಅಂಕಗಳನ್ನು 449 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka pu board instructed the education institutions to start classes for puc students from august 16. No revaluation of SSLC answer sheets. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X