PUC Practical Exams From Today : ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಇಂದಿನಿಂದ ಪ್ರಾರಂಭ

ರಾಜ್ಯಾದ್ಯಂತ ಬಹುತೇಕ ಪಿಯು ಕಾಲೇಜುಗಳಲ್ಲಿ ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಅನ್ವಯ ಪರೀಕ್ಷೆಯು ನಡೆಯಲಿದೆ.

ಇಂದಿನಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆರಂಭ

ರಾಜ್ಯದಲ್ಲಿ ಬುಗಿಲೆದ್ದಿರುವ ಹಿಜಾಬ್ ವಿವಾದದ ನಡುವೆಯೂ ಪರೀಕ್ಷೆಯು ನಡೆಯಲಿದೆ. ಹಿಜಾಬ್ ವಿವಾದದಿಂದ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರಾದರೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ತಿಳಿಸಿದೆ.

ಈ ಮುಂಚಿನ ವೇಳಾಪಟ್ಟಿಯ ಪ್ರಕಾರ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಫೆಬ್ರವರಿ 17,2022 ರಿಂದ ಮಾರ್ಚ್ 25,2022ರ ವರೆಗೆ ನಡೆಸಲು ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಹಿಜಾಬ್ ವಿವಾದಿಂದ ಉಂಟಾದ ರಜೆಯಿಂದಾಗಿ ಪರೀಕ್ಷೆಯನ್ನು ಮೂರು ದಿನ ತಡವಾಗಿ ಆರಂಭಿಸಲಾಗಿದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ 16,2022 ರಿಂದ ಮೇ 6,2022ರ ವರೆಗೆ ನಡೆಸುವುದಾಗಿ ಶಿಕ್ಷಣ ಇಲಾಖೆಯು ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟ ಮಾಡಿರುತ್ತದೆ.

ದ್ವಿತೀಯ ಪಿಯುಸಿ ವಿಷಯವಾರು ಅಂತಿಮ ವೇಳಾಪಟ್ಟಿ :

ಏಪ್ರಿಲ್​ 16,2022 ಗಣಿತ

ಏಪ್ರಿಲ್​ 18,2022 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಏಪ್ರಿಲ್ 19,2022 ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್

ಏಪ್ರಿಲ್ 20,2022 ಇತಿಹಾಸ, ಭೌತಶಾಸ್ತ್ರ

ಏಪ್ರಿಲ್ 21,2022 ಉರ್ದು ಮತ್ತು ಸಂಸ್ಕೃತ

ಏಪ್ರಿಲ್ 22,2022 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಏಪ್ರಿಲ್ 23,2022 ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ

ಏಪ್ರಿಲ್ 25,2022 ಅರ್ಥಶಾಸ್ತ್ರ

ಏಪ್ರಿಲ್ 26,2022 ಹಿಂದಿ

ಏಪ್ರಿಲ್ 28,2022 ಕನ್ನಡ

ಏಪ್ರಿಲ್ 30,2022 ಸಮಾಜಶಾಸ್ತ್, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಮೇ 2,2022 ಭೋಗೋಳಶಾಸ್ತ್ರ, ಜೀವಶಾಸ್ತ್ರ

ಮೇ 4,2022 ಇಂಗ್ಲೀಷ್

ಮೇ 6,2022 ಲೆಕ್ಕಶಾಸ್ತ್ರ, ಐಚ್ಚಿಕ ಕನ್ನಡ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

For Quick Alerts
ALLOW NOTIFICATIONS  
For Daily Alerts

English summary
Karnataka second puc practical exams to be held from today. Students who will absent for exam due to hijab controversy, they won't opportunity to attend exam again.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X