Class 1 to 5 School Reopening : ದಸರಾ ಮುಗಿದ ಬಳಿಕ ಶಾಲೆ ಆರಂಭ ಬಗ್ಗೆ ನಿರ್ಧಾರ : ಸಚಿವ ಸುಧಾಕರ್

ರಾಜ್ಯದಲ್ಲಿ 1 ರಿಂದ 5ನೇ ತರಗತಿಯವರೆಗೆ ಶಾಲೆಗಳನ್ನು ಮತ್ತೆ ತೆರೆಯುವ ಕುರಿತು ಹಬ್ಬದ ಸೀಸನ್ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

 
ರಾಜ್ಯದಲ್ಲಿ ದಸರಾ ಬಳಿಕ ಪ್ರಾಥಮಿಕ ಶಾಲೆಗಳ ಆರಂಭ ಕುರಿತು ನಿರ್ಧಾರ :  ಆರೋಗ್ಯ ಸಚಿವ ಸುಧಾಕರ್

ಕೊರೋನಾ ಬಂದ ಬಳಿಕ ಶಾಲಾ ಕಾಲೇಜುಗಳ ಪುನರಾರಂಭದ ಕುರಿತು ಮಾತನಾಡಿದ ಅವರು ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳನ್ನು ಆತುರದಲ್ಲಿ ಪುನಃ ತೆರೆದಿಲ್ಲ ಬದಲಿಗೆ ಪೋಷಕರು ಮತ್ತು ತಜ್ಞರೊಂದಿಗೆ ಚರ್ಚಿಸಿದ ನಂತರವೇ ಹಂತ ಹಂತವಾಗಿ ತೆರೆಯಲಾಗಿದೆ. ಮೊದಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲಾಯಿತು, ತದನಂತರ ಪದವಿ ಪೂರ್ವ ವಿಶ್ವವಿದ್ಯಾಲಯಗಳು ಆಮೇಲೆ 9 ರಿಂದ 12ನೇ ತರಗತಿಗಳು ಮತ್ತು 6 ರಿಂದ 8ನೇ ತರಗತಿಗಳನ್ನು ಪುನರಾರಂಭಿಸಲಾಗಿದೆ. ಇದೀಗ 1 ರಿಂದ 5ನೇ ತರಗತಿಗಳ ಶಾಲೆ ಆರಂಭ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಹಬ್ಬದ ಸೀಸನ್ ಮುಗಿದ ಬಳಿಕ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಮಕ್ಕಳು ಕೋವಿಡ್ -19 ಪಾಸಿಟಿವ್ ಗೆ ಒಳಗಾದ ನಂತರ ಶಾಲೆಯನ್ನು ಮುಚ್ಚುವ ಬಗ್ಗೆ ಪ್ರಶ್ನಿಸಿದಕ್ಕೆ ಅವರು ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ, ಆದರೆ ಆ ಒಂದು ಘಟನೆಯಿಂದಾಗಿ 1 ರಿಂದ 5ನೇ ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯಬೇಕೆ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

"ಆ ಶಾಲೆಯನ್ನು ಈಗ ಮುಚ್ಚಲಾಗಿದೆ ಮತ್ತು ಅನೇಕ ಮಕ್ಕಳು ಪ್ರತ್ಯೇಕವಾಗಿದ್ದಾರೆ. ಇಬ್ಬರು ಮಕ್ಕಳು ರೋಗಲಕ್ಷಣಗಳನ್ನು ಹೊಂದಿದ್ದು, ಅವರ ಸ್ಥಿತಿ ಗಂಭೀರವಾಗಿಲ್ಲ. ನಾವು ರಾಜ್ಯದ ಪ್ರತಿ ಶಾಲೆಯ ಮೇಲೆ ನಿಗಾ ಇರಿಸಿದ್ದೇವೆ" ಎಂದು ಅವರು ಹೇಳಿದರು.

ರಾಜ್ಯದಲ್ಲಿ 6 ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ಪುನಃ ತೆರೆಯಲಾಗಿದ್ದು ಒಂದು ತಿಂಗಳಿಗಿಂತ ಹೆಚ್ಚು ದಿನಗಳು ಕಳೆದಿವೆ ಆದರೆ ಇದುವರೆಗೆ ಶಾಲೆಗಳಿಂದ ಯಾವುದೇ ಆತಂಕದ ವರದಿಗಳು ನಮಗೆ ಬಂದಿಲ್ಲ ಎಂದು ಅವರು ಹೇಳಿದರು.

 

ಈಗ 1 ರಿಂದ 5 ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯಬಹುದು ಏಕೆಂದರೆ ವೈದ್ಯಕೀಯವಾಗಿ ನೋಡಿದರೆ 12 ವರ್ಷ ವಯಸ್ಸಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಅತ್ಯಧಿಕವಾಗಿದೆ. ಮಕ್ಕಳು ಚಿಕ್ಕವರಾಗಿರುವುದರಿಂದ ಮತ್ತು ಅವರ ಪೋಷಕರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಶಿಕ್ಷಣ ಸಂಸ್ಥೆಗಳನ್ನು ಹಂತ ಹಂತವಾಗಿ ಪುನಃ ತೆರೆಯುವತ್ತ ಗಮನ ಹರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

"ಈವರೆಗೂ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವಾಗ ನಾವು ಅವಸರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಈಗಲೂ ಮಕ್ಕಳು ಏನಾದರು ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ನಮ್ಮ ಗಮನಕ್ಕೆ ಬಂದರೆ ನಾವು ತಕ್ಷಣವೇ ನಮ್ಮ ನಿರ್ಧಾರವನ್ನು ಹಿಂಪಡೆಯುತ್ತೇವೆ." ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 4.98 ಕೋಟಿಗಳಷ್ಟು ಅರ್ಹ ಜನಸಂಖ್ಯೆಯ 80 ಪ್ರತಿಶತದಷ್ಟು ಜನರಿಗೆ ಮೊದಲ ಡೋಸ್ ವ್ಯಾಕ್ಸಿನ್ ಅನ್ನು ನೀಡಲಾಗಿದ್ದು, ಎರಡನೇ ಡೋಸ್ ಅನ್ನು ಇಲ್ಲಿಯವರೆಗೆ ಶೇಕಡಾ 37ರಷ್ಟು ನೀಡಲಾಗಿದೆ ಎಂದು ಕರ್ನಾಟಕದ ಮಂತ್ರಿಗಳು ಉಲ್ಲೇಖಿಸಿದ್ದಾರೆ.

ರಾಜ್ಯವು ಸೆಪ್ಟೆಂಬರ್‌ನಲ್ಲಿ ಅಂದರೆ ಒಂದೇ ತಿಂಗಳಲ್ಲಿ 1.48 ಕೋಟಿಗಳಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ನೀಡಿದೆ. ಡಿಸೆಂಬರ್ 31ರ ಅಂತ್ಯದೊಳಗೆ ಸಂಪೂರ್ಣ ಅರ್ಹ ಜನಸಂಖ್ಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಅವರು ಹೇಳಿದರು.

ಆದಾಗ್ಯೂ "ರಾಜ್ಯದಲ್ಲಿ 10-15 % ರಷ್ಟು ಜನರು ಇನ್ನೂ ಒಂದು ಡೋಸ್ ತೆಗೆದುಕೊಳ್ಳಲಿಲ್ಲ, ಈ ಕುರಿತು ಸರ್ಕಾರವು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಯೋಜಿಸುತ್ತಿದೆ" ಎಂದು ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Decision on karnataka schools reopening for class 1 to 5 will taken after dasara says Health minister Dr K sudhakar.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X