2020ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇಲಾಖೆಯು ಮಾರ್ಚ್ 4,2020 ರಿಂದ ಮಾರ್ಚ್ 19,2020ರ ವರೆಗೆ ಪರೀಕ್ಷೆಗಳನ್ನು ನಡೆಸುವುದಾಗಿ ಪ್ರಸ್ತಾಪಿಸಿತ್ತು. ಪ್ರಸ್ತಾಪನೆಯ ಅನ್ವಯ ವೇಳಾಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 31,2019ರೊಗೆ ಕೇಂದ್ರ ಕಛೇರಿಗೆ ತಲುಪಿಸಲು ತಿಳಿಸಲಾಗಿತ್ತು.
ಪ್ರಾಸ್ತಾವಿಕ ವೇಳಾಪಟ್ಟಿಗೆ ಬಂದಂತಹ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಮಾರ್ಚ್ 2020ರಲ್ಲಿ ನಡಸಲಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ 4,2020 ರಿಂದ ಮಾರ್ಚ್ 23,2020ರ ವರೆಗೆ ನಡೆಸಲು ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ:
ದಿನಾಂಕ | ದಿನ | ವಿಷಯ |
4.3.2020 | ಬುಧವಾರ | ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ |
5.3.2020 | ಗುರುವಾರ | ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ |
6.3.2020 | ಶುಕ್ರವಾರ | ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ |
7.3.2020 | ಶನಿವಾರ | ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ |
9.3.2020 | ಸೋಮವಾರ | ಐಟಿ, ರಿಟೇಲ್, ಆಟೊಮೊಬೈಲ್, ಹೆಲ್ತ್ ಕೇರ್ ,ಬ್ಯೂಟಿ ಮತ್ತು ವೆಲ್‌ನೆಸ್ |
10.3.2020 | ಮಂಗಳವಾರ | ಉರ್ದು |
11.3.2020 | ಬುಧವಾರ | ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ |
12.3.2020 | ಗುರುವಾರ | ಭೂಗೋಳಶಾಸ್ತ್ರ |
13.3.2020 | ಶುಕ್ರವಾರ | ಶಿಕ್ಷಣ |
14.3.2020 | ಶನಿವಾರ | ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ |
16.3.2020 | ಸೋಮವಾರ | ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ,ಗೃಹ ವಿಜ್ಞಾನ |
17.3.2020 | ಮಂಗಳವಾರ | ಅರ್ಥಶಾಸ್ತ್ರ, ಜೀವಶಾಸ್ತ್ರ |
18.3.2020 | ಬುಧವಾರ | ಹಿಂದಿ |
19.3.2020 | ಗುರುವಾರ | ಕನ್ನಡ |
20.3.2020 | ಶುಕ್ರವಾರ | ಸಂಸ್ಕೃತ |
21.3.2020 | ಶನಿವಾರ | ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ |
23.3.2020 | ಸೋಮವಾರ | ಇಂಗ್ಲೀಷ್ |
ಅಭ್ಯರ್ಥಿಗಳು ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts